ಅಂಚೆ ಇಲಾಖೆಯಲ್ಲಿ 55,000 ಉದ್ಯೋಗ!
– 10ನೇ ಕ್ಲಾಸ್ ಆದವರಿಗೆ 81,000 ರೂ.ವರೆಗೆ ವೇತನ
– ಯಾರಿಗೆ ಸಿಗುತ್ತೆ ಕೆಲಸ…!.. ಇಲ್ಲಿದೆ ಡೀಟೇಲ್ಸ್
NAMMUR EXPRESS NEWS
ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಅವಕಾಶ 55,000 ಪೋಸ್ಟ್ ಮ್ಯಾನ್ ಮತ್ತು ಇತರ ವರ್ಗಗಳ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ ಪೂರ್ಣಗೊಳಿಸಿದ ಅಭ್ಯರ್ಥಿಗಳು 81,000 ರೂ.ವರೆಗೆ ವೇತನ ಪಡೆಯುವ ಅವಕಾಶವಿದೆ. ಅಂಚೆ ಇಲಾಖೆ ದೂರಸಂಪರ್ಕ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಭಾರತದಾದ್ಯಂತ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿಯಿದ್ದೆ ಹಾಗಾಗಿ ರಾಜ್ಯವಾರು ಭಾರತದಾದ್ಯಂತ ವಾರ್ಷಿಕವಾಗಿ 50,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ರೀತಿಯಾಗಿ, 2024ರ ನೇಮಕಾತಿ ವಿವರಗಳನ್ನು ಬಿಡುಗಡೆ ಮಾಡಲಾಗಿದೆ. 2024 ರಲ್ಲಿ ಅಂಚೆ ಇಲಾಖೆಯಲ್ಲಿ ಒಟ್ಟು 5 ವಿಭಾಗಗಳಿಗೆ ನೇಮಕಾತಿ ನಡೆಸಲಾಗುವುದು ಅವುಗಳೆಂದರೆ ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್ ಮ್ಯಾನ್, ಮೇಲ್ ಕಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಎಂಬ 5 ವಿಭಾಗಗಳಲ್ಲಿ
ವಯೋಮಿತಿಯ ವಿವರ ಇಲ್ಲಿದೆ :
ಒಟ್ಟು 55,000 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ತಿಂಗಳು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್ ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ 18 ರಿಂದ 27 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. 18 ರಿಂದ 25 ವರ್ಷ ವಯಸ್ಸಿನ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಎಸ್ಸಿ/ಎಸ್ಪಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
2 Comments
Hospete to kamalapur with degree
I