ದೇಶ ಕಂಡ ಖಡಕ್ ಸಿಎಂ ಸಿದ್ದರಾಮಯ್ಯ!
– ಬಡವರು, ಶೋಷಿತರ, ನೊಂದವರ ದನಿ
– ಊಟಕ್ಕೂ ಇಲ್ಲದ ವ್ಯಕ್ತಿ ಸಿಎಂ ಆಗಿದ್ದೆ ರೋಚಕ ಸ್ಟೋರಿ!
NAMMUR EXPRESS NEWS
14 ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಬರೆದ ಅಹಿಂದ ನಾಯಕ ಎಂದೆ ಹೆಸರುವಾಸಿಯಾದ ಸಿದ್ದರಾಮಯ್ಯ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಮೈಸೂರು ಜಿಲ್ಲೆಯ ಸಿದ್ದರಾಮನ ಹುಂಡಿಯಲ್ಲಿ ಬಡ ರೈತ ಸಿದ್ದರಾಮೇಗೌಡ ಮತ್ತು ಬೋರಮ್ಮ ದಂಪತಿಗೆ 2ನೇ ಸುಪುತ್ರರಾಗಿ ಜನಿಸಿದ್ದರು.
ದಿಟ್ಟ ಹೆಜ್ಜೆಯ ನಾಯಕ!
ದೃಢತೆ ದಿಟ್ಟ ನಿಲುವಿನ ಮೂಲಕ ಹೆಸರುವಾಸಿಯಾದ ಸಿದ್ದರಾಮಯ್ಯರವರು ತಮ್ಮದೆಯಾದ ವಿಶಿಷ್ಟ ಛಾಪನ್ನು ರಾಜಕೀಯ ಜೀವನದಲ್ಲಿ ಮೂಡಿಸುತ್ತಿದ್ದಾರೆ. ಇವರು ಪ್ರಸ್ತುತ ರಾಷ್ಟೀಯ ಪಕ್ಷವಾದ ಕಾಂಗ್ರೆಸ್ ನಿಂದ ತಮ್ಮ ಅಧಿಕಾರದ ಚುಕ್ಕಾಣಿ ಹಿಡಿದ ಇವರು ತಮ್ಮ ದೂರ ದೃಷ್ಟಿಯ ಕಾರಣದಿಂದ ತಮ್ಮ ರಾಜಕೀಯ ಜೀವನವನ್ನು ಯಶಸ್ವಿಯಾಗಿ ನಡೆಸುತ್ತ ಬಂದಿದ್ದಾರೆ.
1978ವರೆಗೆ ವಕೀಲ ವೃತ್ತಿಯಲ್ಲಿ ನಿರತರಾದ ಇವರು ಭಾರತೀಯ ಲೋಕದಳದಿಂದ 1983ರಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಉಪಮುಖ್ಯ ಮಂತ್ರಿ, ಹಣಕಾಸು ಮಂತ್ರಿಯಾಗಿ , ರೇಷ್ಮೆ ಮತ್ತು ಸಾರಿಗೆ ಸಚಿವರಾಗಿ, ಪಶುಸಂಗೋಪನೆ ಮಂತ್ರಿಯಾಗಿ ಹೀಗೆ ನಾನಾ ಉನ್ನತ ಸ್ಥಾನವನ್ನು ನಿಭಾಯಿಸಿದ್ದಾರೆ. 2013ರಿಂದ 2018ರವರೆಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 5 ವರ್ಷಗಳ ಕಾಲ ಪೂರ್ಣ ಅವಧಿಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಹೆಗ್ಗಳಿಕೆ ಇವರಿಗಿದೆ. ಇದೀಗ ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.
ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಅನ್ನಭಾಗ್ಯ ಜನ್ಮ ತಾಳಿತು. ಆ ಬಳಿಕ ಕ್ಷೀರಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಸೇರಿದಂತೆ ಪ್ರಣಾಳಿಕೆಯ 160ಕ್ಕೂ ಹೆಚ್ಚು ಭರವಸೆಗಳ ಪೈಕಿ 158 ನ್ನು ಈಡೇರಿಸಿದರು. 2023ರ ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರ ನಾಯಕತ್ವವನ್ನು ಒಪ್ಪಿ ಜನ ಮತ್ತೆ ಕಾಂಗ್ರೆಸ್ಗೆ ಅಧಿಕಾರ ಕೊಟ್ಟಿದ್ದಾರೆ. 5 ಗ್ಯಾರಂಟಿ ಯೋಜನೆ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಹಣಕಾಸು ಸಚಿವರಾಗಿ 14 ಬಾರಿ ಬಜೆಟ್ ಮಂಡನೆ ಮಾಡಿ ಕರ್ನಾಟಕದ ರಾಜಕೀಯದಲ್ಲಿ ಇತಿಹಾಸವನ್ನು ಬರೆದಿದ್ದಾರೆ. ಹೀಗೆ ತನ್ನದೇ ಆದ ಕಾರ್ಯದಕ್ಷತೆಯಿಂದ ಎಲ್ಲರಿಗಿಂತ ಭಿನ್ನವಾಗಿದ್ದಾರೆ ಸಿದ್ದರಾಮಯ್ಯ.
ಸಮಾಜವಾದಿ ಚಳವಳಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮಮನೋಹರ ಲೋಹಿಯಾ ಅವರಿಂದ ಪ್ರೇರಿತರಾಗಿ ರಾಜಕೀಯ ಪ್ರವೇಶ ಮಾಡಿದವರು. ಇದ್ದಿದ್ದನ್ನು ಇದ್ದ ಹಾಗೆ ಹೇಳೋದು ಇವರ ಚಾತಿ.
ಭ್ರಷ್ಟಾಚಾರ ರಹಿತ ರಾಜಕಾರಣಿ!
ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಎಲ್ಲವೂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಸಿದ್ದರಾಮಯ್ಯ ಕರ್ನಾಟಕದ “ನಾನ್ ಕರಪ್ಟ್ ರಾಜಕಾರಣಿಗಳ ಪೈಕಿ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು. ಸಿದ್ದರಾಮಯ್ಯ ಎಂದಾಕ್ಷಣ ಮೇಲ್ನೋಟಕ್ಕೆ “ಅಹಿಂದ ನಾಯಕ ಎಂದು ಬಿಂಬಿತವಾದರೂ ಎಲ್ಲ ವರ್ಗದ ಬಡವರ ಬಗ್ಗೆ ಪ್ರೀತಿ ಇಟ್ಟುಕೊಂಡಿರುವವರು ಸಿದ್ದರಾಮಯ್ಯ.
ಕುವೆಂಪು, ಬಸವಣ್ಣ, ಅಂಬೇಡ್ಕರ್ ಸಿದ್ಧಾಂತದಲ್ಲಿ ನಂಬಿಕೆಯುಳ್ಳ ಸಂವಿಧಾನವೇ ಶ್ರೇಷ್ಠ ಎಂದು ಸರ್ವಕಾಲಕ್ಕೂ ಪ್ರತಿಪಾದಿಸುವ ನಾಯಕ, ದೇವರಾಜ ಅರಸು ಅವರ ನಂತರ ಅಹಿಂದ ವರ್ಗಕ್ಕೂ ದೊಡ್ಡ ಮಟ್ಟದಲ್ಲಿ ಶಕ್ತಿ ತುಂಬಿದವರು ಸಿದ್ದರಾಮಯ್ಯ.
ಸಿದ್ದರಾಮಯ್ಯ ಊಟಕ್ಕೂ ಪರದಾಟ ನಡೆಸಿದವರು!
ಸಿದ್ದರಾಮಯ್ಯ ಅವರು ಮೂಲತಃ ಹಳ್ಳಿಗಾಡಿನ ಹಿನ್ನೆಲೆಯ ಬಡ ರೈತನ ಕುಟುಂಬದಿಂದ ಬಂದವರು. ಅವರೇ ಸಾಕಷ್ಟು ಬಾರಿ ಹೇಳಿಕೊಂಡಿರುವಂತೆ ಉನ್ನತ ವ್ಯಾಸಂಗ ಮಾಡುವಾಗ ಹಾಸ್ಟೆಲ್ನಲ್ಲಿ ಕೊಠಡಿ ಸಿಗದೆ ಪ್ರತ್ಯೇಕ ರೂಂ ಮಾಡಿಕೊಂಡು ಹೋಟೆಲ್ನಲ್ಲಿ ಸಾಂಬಾರ್ ತಂದು ಅನ್ನ ಮಾಡಿಕೊಂಡು ಊಟ ಮಾಡಿ ಶಿಕ್ಷಣ ಪೂರೈಸಿದವರು. ಸಿದ್ದರಾಮಯ್ಯ ರಾಜಕಾರಣಕ್ಕೆ ಬರಬೇಕು ಎಂದು ಬಯಸಿ ಬಂದವರಲ್ಲ. ವಕೀಲಿ ವೃತ್ತಿ ಆಯ್ಕೆ ಮಾಡಿಕೊಂಡು ತಾಲೂಕು ಬೋರ್ಡ್ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿ ಆರ್ಥಿಕ ತಜ್ಞರೇ ಅಚ್ಚರಿಗೊಳ್ಳುವಂತೆ ದಾಖಲೆಯ 14 ಬಾರಿ ಬಜೆಟ್ ಮಂಡಿಸಿ ರಾಜ್ಯದ ಆರ್ಥಿಕತೆ ಹಳಿ ತಪ್ಪದಂತೆ ನೋಡಿಕೊಂಡವರು.
45 ವರ್ಷದ ಸಾರ್ವಜನಿಕ ಜೀವನ
ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ಸಿದ್ಧಾಂತದಿಂದ ಪ್ರಭಾವಿತರಾದವರು ಸಿದ್ದರಾಮಯ್ಯ. ರಾಜಕೀಯ ಪ್ರವೇಶ ಆಕಸ್ಮಿಕ. ಕಾನೂನು ಪದವಿ ನಂತರ ಮೈಸೂರು ಕೋರ್ಟ್ ನಲ್ಲಿ ವಕೀಲರಾಗಿ ಕಾರ್ಯನಿರ್ವ ಹಿಸುವ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ನಂಜುಂಡಸ್ವಾಮಿಯವರು ಸಿದ್ದರಾಮಯ್ಯ ಅವರ ಮಾತಿನ ಶೈಲಿ, ಹೋರಾಟ ಸ್ವಭಾವ, ಬಡವರು, ರೈತರ ಪರ ಬದ್ಧತೆ ನೋಡಿ ರಾಜಕೀಯ ಕ್ಷೇತ್ರಕ್ಕೆ ಇಳಿಯುವಂತೆ ನೀಡಿದ ಪ್ರೇರಣೆಯಿಂದ ರಾಜಕಾರಣಕ್ಕೆ ಪ್ರವೇಶ ಮಾಡಿ 45 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ.
ಸಿದ್ದರಾಮಯ್ಯ
ಕರ್ನಾಟಕದ 24ನೇ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ 76ನೇ ವರ್ಷದ ಜನ್ಮದಿನ ಶುಭಾಶಯಗಳು.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023