* ನಟ ದರ್ಶನ್ ಆ್ಯಂಡ್ ಗ್ಯಾಂಗ್ಗೆ ಸೆ. 30ರವರೆಗೆ ನ್ಯಾಯಾಂಗ ಬಂಧನ!
* ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಗೆ ಡೇಟ್ ಫಿಕ್ಸ್!!
* ಮೆಟ್ರೋದಲ್ಲಿ ಅವಘಡ, ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನ!ವ್ಯಕ್ತಿ ಬಚಾವ್
* ಚಾಕು ಇರಿದು ಯುವಕನ ಕೊಲೆ ಮಾಡಿದ ರೌಡಿಶೀಟರ್!!
* ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ,ಐವರ ದುರ್ಮರಣ!
NAMMUR EXPRESS NEWS
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಆ್ಯಂಡ್ ಗ್ಯಾಂಗ್ಗೆ ಸೆ. 30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ. ಮಂಗಳವಾರ ತನಿಖಾಧಿಕಾರಿ ಚಂದನ್ ಅವರು ನ್ಯಾಯಾಲಯಕ್ಕೆ ಹಾರ್ಡ್ ಡಿಸ್ಕ್ಗಳಲ್ಲಿ ಟೆಕ್ನಿಕಲ್ ಎವಿಡೇನ್ಸ್ ಹಾಗೂ 17 ಪ್ರತಿಗಳನ್ನು ಸಲ್ಲಿಕೆ ಮಾಡಿದರು.
ಈ ವೇಳೆ ಸಿಎಫ್ಎಸ್ಎಲ್ ವರದಿಯನ್ನು ತೆರೆಯಲು ವಕೀಲರು ಅನುಮತಿ ಕೋರಿದರು. ಸಿಎಸ್ಎಫ್ಎಲ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಿದ್ೇವ. ನೀವು ಅನುಮತಿ ಕೊ್ಟರೆ ಪ್ರಕರಣದ 17 ಆರೋಪಿಗಳಿಗೂ ಸೀಲ್ ಓಪನ್ ಮಾಡಿ ಜೆರಾಕ್ಸ್ ಮಾಡಿ ಕಾಪಿ ಕೊಡುತ್ತೇವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದರು. ಈ ವೇಳೆ ಮುಂದಿನ ವಿಚಾರಣೆಯ ಒಳಗೆ ಸಿಎಸ್ಎಫ್ಎಲ್ ಜೆರಾಕ್ಸ್ ಪ್ರತಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದರು.
* ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಗೆ ಡೇಟ್ ಫಿಕ್ಸ್!!
ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪಿಎಸ್ಐ ಪರೀಕ್ಷೆಯನ್ನು ಅಕ್ಟೋಬರ್ 3ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.
ಈ ಹಿಂದೆ ಸೆ.22ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆ ದಿನಾಂಕದಂದೇ ಯುಪಿಎಸ್ಸಿ ಮುಖ್ಯ ಪರೀಕ್ಷೆ ಇದ್ದ ಕಾರಣ ಈ ಪರೀಕ್ಷೆಯನ್ನು ಮುಂದೂಡಲಾಗಿತ್ತು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ವಯೋಮಿತಿ ಸಡಿಲಿಕೆಯ ಲಾಭ ಪಡೆಯುವವರು ಸೇರಿ ಇತರ ಅರ್ಹರು ಸೆ.28ರವರೆಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಗೆ ಸೆ.29 ಕೊನೆಯ ದಿನ. ಈ ಹಿಂದೆ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ ಎಂದು ಪ್ರಸನ್ನ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಹುದ್ದೆಗಳಿಗೆ ಈ ಹಿಂದೆ ನಿಗದಿಪಡಿಸಿದ್ದ ದಿನಾಂಕಗಳಂದೇ ಪರೀಕ್ಷೆ ನಡೆಯಲಿದೆ. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಅ.26 ರಂದು ನಡೆಸಲಾಗುತ್ತದೆ. ಅದರ ನಂತರ ಎಲ್ಲರಿಗೂ ಅ.27ರಂದು ಪತ್ರಿಕೆ- 1 ಮತ್ತು 2ರ ಪರೀಕ್ಷೆ ನಡೆಯಲಿದೆ ಎಂದು ಹೇಳಿದ್ದಾರೆ.
* ನಮ್ಮ ಮೆಟ್ರೋದಲ್ಲಿ ಯುವಕನೊರ್ವ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನ!
ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅವಘಡಗಳು ಮುಂದುವರಿದಿದೆ. ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಫ್ಲಾಟ್ ಫಾರ್ಮ್ನಿಂದ ಯುವಕನೊರ್ವ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಿಹಾರ ಮೂಲದ 30 ವರ್ಷದ ಸಿದ್ದಾರ್ಥ್ ಎಂಬಾತ ಮೆಟ್ರೋ ಟ್ರ್ಯಾಕಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದಾನೆ.
ಸೆ. 17ರಂದು ರ ಘಟನೆ ನಡೆದಿದ್ದು, 2-20 ರಿಂದ ಮೆಟ್ರೋ ಸಂಚಾರ ಸ್ಥಗಿತಗೊಿಸಲಾಗಿತ್ತು. ನೇರಳೆ ಮಾರ್ಗದ ವೈಟ್ ಫೀಲ್ಡ್ ನಿಂದ ಚೆಲ್ಲಘಟ್ಟ ಮಾರ್ಗದಲ್ಲಿ ರೈಲು ಸ್ಥಗಿತಗೊಂಡಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ರೈಲು ಬರುತ್ತಿದ್ದಂತೆ ಟ್ರ್ಯಾಕ್ಗೆ ಜಿಗಿದಿದ್ದ. ಘಟನೆಯ ನಂತರ ತಕ್ಷಣವೇ ತುರ್ತು ಟ್ರಿಪ್ ಸಿಸ್ಟಮ್ಅನ್ನು ನಿರ್ವಹಿಸಲಾಗಿದೆ.
ಮೆಟ್ರೋ ಸ್ಟೇಷನ್ ಕಂಟ್ರೋಲರ್ ತಂಡದವರು ಕೂಡಲೇ ಯುವಕನನ್ನು ರಕ್ಷಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಯಾವುದೇ ಗಂಭೀರ ಗಾಯಗಳು ಆಗಿಲ್ಲ ಎನ್ನಲಾಗಿದೆ. ಇಡೀ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳನ್ನು ಪುನರಾರಂಭಿಸಲಾಯಿತು. 2:13 ರಿಂದ 2.30 ರವರೆಗೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬದಲು ಮೈಸೂರು ರಸ್ತೆಯಲ್ಲಿ ಶಾರ್ಟ್ ಲೂಪ್ನಲ್ಲಿ 2 ರೈಲುಗಳನ್ನು ಓಡಿಸಲಾಯಿತು.
* ಚಾಕು ಇರಿದು ಯುವಕನ ಕೊಲೆ ಮಾಡಿದ ರೌಡಿಶೀಟರ್!!
ಬೆಂಗಳೂರು: ಬೆಂಗಳೂರಿನ ಬನಶಂಕರಿಯಲ್ಲಿ ಯುವಕನೊಬ್ಬನ ಕೊಲೆಯಾಗಿದೆ. ಕಾವೇರಿ ನಗರದಲ್ಲಿ ಘಟನೆ ನಡೆದಿದೆ. ವಿಕ್ರಂ (21) ಮೃತ ದುರ್ದೈವಿ. ರೌಡಿಶೀಟರ್ ವಸಿಂ (28) ಎಂಬಾತ ಕೊಲೆ ಮಾಡಿದ ಆರೋಪಿ ಆಗಿದ್ದಾನೆ.
ಆರೋಪಿ ವಸಿಂನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಕೆಲ ವರ್ಷಗಳ ಹಿಂದೆ ವಿಕ್ರಂ ಆರೋಪಿ ವಸೀಂಗೆ ಹಲ್ಲೆ ಮಾಡಿದ್ದ. ಹೀಗಾಗಿ ವಸೀಂ ಮನಸ್ಸಿನಲ್ಲಿ ದ್ವೇಷ ಬೆಳೆಸಿಕೊಂಡಿದ್ದು,ಇವತ್ತು ಕಾವೇರಿ ನಗರದ 8ನೇ ಕ್ರಾಸ್ನಲ್ಲಿ ವಿಕ್ರಂ ಸ್ನೇಹಿತನ ಜತೆ ನಿಂತಿದ್ದರು. ಈ ವೇಳೆ ಚಾಕುವಿನಿಂದ ನೇರ ಎದೆಗೆ ಇರಿದು ವಸೀಂ ಎಸ್ಕೇಪ್ ಆಗಿದ್ದರು.
ಕೂಡಲೇ ಗಾಯಾಳು ವಿಕ್ರಂನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆ ನಡೆದು ಕೆಲವೇ ಗಂಟೆಯಲ್ಲಿ ಆರೋಪಿ ವಸೀಂನನ್ನು ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ,ಐವರ ದುರ್ಮರಣ!
ಬೆಂಗಳೂರು: ಅತಿವೇಗವಾಗಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂದ ಐವರು ವ್ಯ್ತಿಗಳ ದುರ್ಮರಣ ಹೊಂದಿರುವಂತಹ ಟನೆ ಜಿಲ್ಲೆಯ ಮಾಗಡಿ ತಾಲೂಕಿನ ಗುಡೆಮಾರನಹಳ್ಳಿ ಬಳಿ ದುರಂತ ಸಂಭವಿಸಿದೆ. ಮೃತರು ತುಮಕೂರು ಜಿಲ್ಲೆಯ ಕುಣಿಗಲ್ ಮೂಲದವರೆಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.
ಸಂಬಂಧಿಕರ ತಿಥಿ ಕಾರ್ಯ ಮುಗಿಸಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಕುಣಿಗಲ್ನಿಂದ ಬೆಂಗಳೂರು ಕಡೆ ಅತಿವೇಗವಾಗಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಮಾರುತಿ ಸುಜುಕಿ ಎರ್ಟಿಗಾ ಕಾರಿನ ಏರ್ಬ್ಯಾಗ್ ಓಪನ್ ಆದರೂ ಕಾರಿನಲ್ಲಿದ್ದ ನಾಯಿ ಮರಿ ಹೊರತುಪಡಿಸಿ ಉಳಿದವರೆಲ್ಲರೂ ಸಾವನ್ನಪ್ಪಿದ್ದಾರೆ.
ಗಾಯಗೊಂಡಿರುವ ನಾಯಿ ಮರಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಪಘಾತ ಸ್ಥಳಕ್ಕೆ ಕುದೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.