ಆಳ್ವಾಸ್ ವಿರಾಸತ್.. ಕೃಷಿ, ಕಲೆ, ಸಾಂಸ್ಕೃತಿಕ ಹಬ್ಬ!
– ಹೂವಲ್ಲೇ ಅರಳಿದ ದೇವರುಗಳು… ಕಲೆ ಕಲರವ
– ನೂರಾರು ಮಳಿಗೆ, ನೂರಾರು ಹೊಸತನ
– ಡಿ. 15ರವರೆಗೆ ಅವಕಾಶ: ಒಮ್ಮೆ ಕುಟುಂಬದೊಂದಿಗೆ ಭೇಟಿ ನೀಡಿ…!
NAMMUR EXPRESS NEWS
ಮೂಡುಬಿದಿರೆ: ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಮೂಡುಬಿದಿರೆಯಲ್ಲಿ ಡಿ. 10ರಿಂದ ಶುರುವಾಗಿದ್ದು, ಪ್ರದರ್ಶನ ಮತ್ತು ಮಾರಾಟ ಮಹಾಮೇಳ, ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು, ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಲಕ್ಷ ಲಕ್ಷ ಜನರ ಮನ ಸೆಳೆಯುತ್ತಿದೆ. ಇಡೀ ಆಳ್ವಾಸ್ ಕ್ಯಾಂಪಸ್ ಜನರಿಂದ ತುಂಬಿ ಹೋಗಿದೆ. ನೂರಾರು ಮಳಿಗೆಗಳು ಗಮನ ಸೆಳೆಯುತ್ತಿವೆ. ನೀವೊಮ್ಮೆ ನೋಡಲೇಬೇಕಾದ ಮೇಳ ಇದು. ಡಿ. 15ರವರೆಗೆ ಅವಕಾಶ ಇದೆ. ಒಮ್ಮೆ ಕುಟುಂಬ ಸಮೇತ ಭೇಟಿ ನೀಡಿ..!