ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕಂಪನ!?
– ಶಿರಸಿ, ಯಲ್ಲಾಪುರ, ಅಂಕೋಲಾ, ಜೋಗ ಭಾಗದಲ್ಲಿ ಭೂ ಕಂಪನ
– ಫೆಂಗಲ್ ಚಂಡಮಾರುತಕ್ಕೆ ಮೂವರು ಬಲಿ!
NAMMUR EXPRESS NEWS
ಶಿರಸಿ: ರಾಜ್ಯದ ಮಲೆನಾಡು ಭಾಗದ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗದಲ್ಲಿ ಭಾನುವಾರ ಭೂ ಕಂಪನದ ಅನುಭವ ಆಗಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ-ಯಲ್ಲಾಪುರ, ಅಂಕೋಲಾ, ಕುಮಟಾ, ಶಿವಮೊಗ್ಗ ಜಿಲ್ಲೆಯ ಜೋಗಜಲಪಾತ ಭಾಗಗಳಲ್ಲಿ ನಿಗೂಢ ಶಬ್ದ ಕೇಳಿ ಬಂದಿದ್ದು, ಭೂಕಂಪದ ಅನುಭವವಾಗಿದೆ. ಜನಸಾಮಾನ್ಯರು ಇದರಿಂದಾಗಿ ಆತಂಕಕ್ಕೀಡಾಗಿದ್ದಾರೆ. ಮದ್ಯಾಹ್ನ 12 ಗಂಟೆಯ ವೇಳೆಗೆ ನಿಗೂಢವಾದ ಶಬ್ದ ಕೇಳಿಸಿ ಬಂದಿದ್ದು ಭೂಮಿ ಅಲುಗಾಡಿದ ಅನುಭವವಾಗಿದೆ. ಕೆಲವರು ತಮ್ಮ ಮನೆ ನಡುಗಿದ ಅನುಭವ ಆಗಿದೆ, ನಂತರ ಮೂರ್ನಾಲ್ಕು ಸೆಕೆಂಡುಗಳ ಕಾಲ ಸೂಕ್ಷ್ಮವಾಗಿ ನಡುಗಿದ ಅನುಭವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶಿರಸಿ ತಾಲೂಕಿನ ಮತ್ತೀಘಟ್ಟಾ, ಸಂಪಖಂಡ, ಹೆಗಡೆಕಟ್ಟಾ, ಹುಲೇಕಲ್, ವಾನಳ್ಳಿ, ಯಲ್ಲಾಪುರ ತಾಲೂಕಿನ ಚವತ್ತಿ, ಸಿದ್ದಾಪುರ ತಾಲೂಕಿನ ಕಾನಸೂರು, ತಟ್ಟಿಕೈ, ಮಾವಿನಗುಂಡಿ, ಹಲಗೇರಿ, ಹೆಗ್ಗರಣಿ, ಹಾರ್ಸಿಕಟ್ಟಾ, ಶಿವಮೊಗ್ಗ ಜಿಲ್ಲೆಯ ಜೋಗಜಲಪಾತ ಭಾಗಗಳಲ್ಲಿ ಇದ್ದಕ್ಕಿದ್ದಂತೆ ಭೂಮಿ ನಡುಗಿದ ಅನುಭವವಾಗಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಭೂಕಂಪವೇ ಆಗಿದ್ದರೆ ಗುಡುಗಿನ ಶಬ್ದ ಕೇಳಿ ಬರುತ್ತಿರಲಿಲ್ಲ. ಆದರೆ ಗುಡುಗಿದ ರೀತಿ ಶಬ್ದವೂ ಕೂಡ ಕೇಳಿ ಬಂದಿದೆ ಎನ್ನುವುದು ಸಾರ್ವಜನಿಕರ ಮಾಹಿತಿ. ಅಲ್ಲದೇ ಶಿರಸಿ ನಗರದಲ್ಲಿಯೂ ಈ ಅನುಭವವಾಗಿದೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕೆಲವು ಮಾಧ್ಯಮಗಳು ಜನಾಭಿಪ್ರಾಯ ಸಂಗ್ರಹಿಸಿ ಸುದ್ದಿ ಮಾಡಿವೆ.
ಫೆಂಗಲ್ ಚಂಡಮಾರುತಕ್ಕೆ ಮೂವರು ಬಲಿ!
ಫೆಂಗಲ್ ಚಂಡಮಾರುತ ಭಾನುವಾರ ಮುಂಜಾನೆ 2 ಗಂಟೆಗೆ ತಮಿಳುನಾಡು ಕರಾವಳಿಯನ್ನು ತಲುಪಿದೆ. ವಿದ್ಯುದಾಘಾತ ಹಾಗೂ ಭೂಕುಸಿತದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. 16 ಗಂಟೆಗಳ ಬಳಿಕ ಏರ್ಪೋರ್ಟ್ ತೆರೆಯಲಾಗಿದೆ. ವಿಮಾನಗಳ ಕಾರ್ಯಾಚರಣೆ ಆರಂಭವಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯ ಹಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಈ ಪ್ರದೇಶದಲ್ಲಿ ಹವಾಮಾನ ಬದಲಾವಣೆ, ಉಬ್ಬರವಿಳಿತ ಮತ್ತು ಭಾರೀ ಮಳೆ ನಿರೀಕ್ಷಿಸಲಾಗಿದೆ. ಚೆನೈ ಸೇರಿ ತಮಿಳುನಾಡು ಸಂಪರ್ಕ ಸಮಸ್ಯೆ ಆಗುವ ಸಾಧ್ಯತೆ ಇದೆ. ಇನ್ನು ರಾಜ್ಯದಲ್ಲೂ ಮೋಡ ಕವಿದ ವಾತಾವರಣ ಇದೆ.