ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ
– ಫೆಬ್ರುವರಿ 13 ರಿಂದ 28ರವರೆಗೆ ಪರೀಕ್ಷೆ
– ವಿಷಯವಾರು ಪರೀಕ್ಷೆ ವೇಳಾಪಟ್ಟಿ: ಯಾವತ್ತು ಯಾವ ಪರೀಕ್ಷೆ…?
NAMMUR EXPRESS NEWS
2023-24ನೇ ಸಾಲಿನ ಕರ್ನಾಟಕ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಬಿಡುಗಡೆ ಮಾಡಿದೆ. ಕರ್ನಾಟಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ 2024 ರ ಫೆಬ್ರುವರಿ 13ರಿಂದ 28ರವರೆಗೆ ವಾರ್ಷಿಕ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ವಿಷಯವಾರು ವೇಳಾಪಟ್ಟಿಯನ್ನು ಮಂಡಲಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಚೆಕ್ ಮಾಡಬಹುದು.
ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ವಿಷಯವಾರು ವೇಳಾಪಟ್ಟಿ 2024
* ಕನ್ನಡ : 13-02-2024
* ಅರೇಬಿಕ್ : 13-02-2024
* ಹಿಂದಿ : 14-02-2024
* ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ : 15-02-2024
* ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಅಂಡ್ ವೆಲ್ನೆಸ್ : 16-02-2024
* ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ : 17-02-2024
*ಇತಿಹಾಸ, ಭೌತಶಾಸ್ತ್ರ : 19-02-2024
*ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ : 20-02-2024
*ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ : 21-02-2024
*ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ : 22-02-2024
*ಗಣಿತ, ಶಿಕ್ಷಣ ಶಾಸ್ತ್ರ : 23-02-2024
*ಅರ್ಥಶಾಸ್ತ್ರ : 24-02-2024
*ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ : 26-02-2024
*ಇಂಗ್ಲಿಷ್ : 27-02-2024
*ಭೂಗೋಳಶಾಸ್ತ್ರ ಮತ್ತು ಜೀವಶಾಸ್ತ್ರ : 28-02-2024
ಪರೀಕ್ಷೆಗೆ ಸಿದ್ಧತೆ: ವಿದ್ಯಾರ್ಥಿಗಳೇ ಗುಡ್ ಲಕ್
ಕರ್ನಾಟಕ ರಾಜ್ಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಆರಂಭವಾಗಲು ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದ್ದು, ಈ ಪರೀಕ್ಷೆ ಬರೆಯಲಿರುವವರು ಸಕಲ ಸಿದ್ಧತೆ ನಡೆಸಿಕೊಳ್ಳಿ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜನವರಿ 16 ರಿಂದ 30ರವರೆಗೆ ರಾಜ್ಯದಾದ್ಯಂತ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಆಯಾ ಕಾಲೇಜುಗಳಲ್ಲಿ ನಡೆಸಲಿದೆ. ಇದಕ್ಕೆ ಅಗತ್ಯ ಸೂಚನೆಯನ್ನು ಕೆಎಸ್ಇಎಬಿ ಜಿಲ್ಲಾ ಉಪನಿರ್ದೇಶಕರುಗಳಿಗೆ ನೀಡಿದೆ.