ಗ್ಯಾರಂಟಿ ಅವಾಂತರ: ಇಂದೇ ‘ಸಾರಿಗೆ ಬಸ್ ಟಿಕೆಟ್ ದರ’ ಏರಿಕೆ!
* ರಾಜ್ಯ ಸರ್ಕಾರದ ಅಧಿಕೃತ ಆದೇಶ
* ಶೇ.15ರಷ್ಟು ಪ್ರಯಾಣದರ ಏರಿಕೆ
NAMMUR EXPRESS NEWS
ಬೆಂಗಳೂರು: ಪ್ರಯಾಣ ದರ ಪರಿಷ್ಕರಣೆಗಾಗಿ ನಿಗಮದ ಸಿಬ್ಬಂದಿ ವೇತನ ವೆಚ್ಚ ಇಂಧನ ವೆಚ್ಚ ಮತ್ತು ನಿರ್ವಹಣಾ ವೆಚ್ಚವನ್ನು ಪರಿಗಣಿಸಲಾಗುತ್ತಿದೆ. ಪುಸ್ತುತ ರೂ. 9.56 ಕೋಟಿ ಮೊತ್ತವನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗುತ್ತಿದೆ. ಸಿಬ್ಬಂದಿ ವೆಚ್ಚ ಸೇರಿ ವಾರ್ಷಿಕವಾಗಿ 3, 650 ಕೋಟಿ ನಿಗಮಕ್ಕೆ ಹೊರೆಯಾಗುತ್ತಿದೆ. ಆದ್ದರಿಂದ ಶೇ.15ರಷ್ಟು ಪ್ರಯಾಣದರ ಒಟ್ಟು ಸಭೆಯನ್ನು ನಿರ್ಣಯಿಸಿ, ಅದರಂತೆ ಪುಸ್ತಕವನ್ನು ಸಲ್ಲಿಸಲು ಸೂಚಿಸಲಾಗಿದೆ.
ಶಕ್ತಿ ಯೋಜನೆಯ ಅನುಷ್ಠಾನದ ನಂತರ ರಾಜ್ಯದಲ್ಲಿ ಸುಮಾರು ಅರವತ್ನಾಲ್ಕು ಲಕ್ಷ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ನಾಲ್ಕು ನಿಗಮಗಳು ಸುಮಾರು 1,01,648 ಸಿಬ್ಬಂದಿಗಳನ್ನು ಹೊಂದಿದ್ದು, ಆಯಾನಿಗಮಗಳು ಸದರಿ ಸಿಬ್ಬಂದಿಗಳ ಸಂಬಳ ಮತ್ತು ಭತ್ಯೆಗಳನ್ನು ನಿಗಮಗಳ ಆದಾಯದ ಮೂಲಕ ಮಾತ್ರ ಪಾವತಿಸುತ್ತಿದ್ದಾರೆ. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ 2024-25ನೇ ಆರ್ಥಿಕ ವರ್ಷ 1ನೇ ಏಪ್ರಿಲ್ನಿಂದ 30ನೇ ನವೆಂಬರ್ವರೆಗೆ ಒಟ್ಟು ಆದಾಯ ರೂ. 8418.46 ಕೋಟಿ, ನಾಲ್ಕು ಸಂಸ್ಥೆಗಳು ಒಟ್ಟು ರೂ.9511.41 ಕೋಟಿ ವೆಚ್ಚವನ್ನು ಮಾಡುತ್ತವೆ. ಪ್ರಸ್ತುತ 2024-25ನೇ ಆರ್ಥಿಕ ವರ್ಷದ ನಿವ್ವಳ ಕೊರತೆಯು ರೂ.1092.95 ಕೋಟಿಗಳಷ್ಟಿದೆ.ರಸ್ತೆ ನಾಲ್ಕು ಸಾರಿಗೆ ಸಂಸ್ಥೆಗಳು ಪ್ರಸ್ತುತ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ.
* ನಾಲ್ಕು ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊಣೆಗಾರಿಕೆ!
ಕೋವಿಡ್-19ರ ಸಾಂಕ್ರಾಮಿಕ ರೋಗದಿಂದ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ಕೆಲವು ಮಹಾನಗರಗಳ ಸಂಪೂರ್ಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಹಾಗೂ ಇನ್ನೂ ಕೆಲವು ಮಹಾನಗರಗಳ ಅನುಸೂಚಿಗಳನ್ನು ಕಡಿಮೆಗೊಳಿಸಿರುವ ನಿಗಮಗಳು ಒಟ್ಟು 24 ಮಹಾನಗರಗಳವರೆಗೆ ಶೂನ್ಯದಿಂದ ಕಡಿಮೆ ಆದಾಯವನ್ನು ಗಳಿಸಿವೆ. ಈ ರೀತಿ ಯಾವುದೇ ಆದಾಯವಿಲ್ಲದ ಕಾರಣ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ ರೂ.85/- ರಿಂದ ರೂ.90/-ವರೆಗೆ ಮತ್ತು ಇತರ ಶಾಸನಬದ್ಧ ಪಾವತಿಗಳು ಸಿಬ್ಬಂದಿಗಳ ಭವಿಷ್ಯ ನಿಧಿ, ನಿವೃತ್ತ ನೌಕರರ ವೇತನ, ಗ್ರಾಚ್ಯುಟಿ, ಪೂರೈಕೆದಾರರ ಬಾಕಿ ಬಿಲ್ಗಳು, ಡೀಸೆಲ್ ಸರಬರಾಜು ಬಿಲ್, ವಾಹನದ ವಾಹನ ಪಾವತಿ ಮಾಡಿರುವುದು ಮತ್ತು ಇತರ ಬಿಲ್ಗಳ ಬಾಕಿಯಿಂದಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊಣೆಗಾರಿಕೆ ಉಂಟಾಗಿದೆ. ನಾಲ್ಕು ಸಾರಿಗೆ ಸಂಸ್ಥೆಗಳಿಗೆ 31-12-2024ರ ಅಂತ್ಯಕ್ಕೆ ರೂ.6520.14 ಕೋಟಿಗಳ ಆರ್ಥಿಕ ಹೊಣೆಗಾರಿಕೆ ಕೋಡಿಕೃತವಾಗಿದೆ.
ಮುಂದುವರೆದು, 01.03.2023ರಂದು ನಿಗಮಗಳ ಸಿಬ್ಬಂದಿಗಳ ವೇತನ ಪರಿಷ್ಕರಣೆಯನ್ನು ಶೇಕಡ 15ರಷ್ಟು ಪರಿಷ್ಕರಿಸಲಾಗಿದೆ.
ನೌಕರರ ವೇತನ ಪರಿಷ್ಕರಣೆಯಿಂದಾಗಿ ದೈನಂದಿನ ವೇತನದ ವೆಚ್ಚವು ರೂ.12.85 ಕೋಟಿಗಳಿಂದ ರೂ.18.36 ಕೋಟಿಗಳಿಗೆ ಹೆಚ್ಚಾಗಿದ್ದು, ಪ್ರತಿ ದಿನಕ್ಕೆ ರೂ.5.51 ಕೋಟಿ ಹೆಚ್ಚುವರಿ ಹೊರೆಯಾಗಿರುತ್ತದೆ. ಜೊತೆಗೆ, ಸಾರಿಗೆ ನೌಕರರು ಇತ್ತೀಚೆಗೆ ಮತ್ತೊಮ್ಮೆ ವೇತನ ಪರಿಷ್ಕರಣೆಗಾಗಿ ಬೇಡಿಕೆ ಸಲ್ಲಿಸುತ್ತಾರೆ. ಸಾರಿಗೆ ನಿಗಮಗಳಿಂದ ಆಚರಣೆ ಮಾಡುತ್ತಿರುವ ವಿವಿಧ ಮಾದರಿಯ ಬಸ್ಗಳಿಗೆ ಹಾಲಿ ಪ್ರತಿ ಕಿ.ಮೀ.ಗೆ ವಿಧಿಸುತ್ತಿರುವ ದರಗಳನ್ನು ನೆರೆ ರಾಜ್ಯಗಳಿಗೆ ಹೋಲಿಸಿದಾಗ ದರ ಕಡಿಮೆಯಾಗಿದೆ, ತುಲನಾತ್ಮಕ ಕೋಶಕ ಈ ಕೆಳಕಂಡಂತಿದೆ.