Happy new year ಮೆಸೇಜ್ ಬಂದೀತು ಹುಷಾರ್..!!
– APK ಫೈಲ್ ಬಳಸಿ ಮೊಬೈಲ್ ಹ್ಯಾಕ್ ಮಾಡಬಹುದು
– ಎಚ್ಚರಿಕೆ ನೀಡಿದ ಸೈಬರ್ ಕ್ರೈಮ್ ಪೋಲೀಸರು
NAMMUR EXPRESS NEWS
ಮಂಗಳೂರು: ಹೊಸ ವರ್ಷ ಆಚರಣೆ ನೆಪ ಬಳಸಿಕೊಂಡು ಸೈಬರ್ ಕ್ರಿಮಿನಲ್ ಗಳು ಸಾರ್ವಜನಿಕರ ಮೊಬೈಲ್ಗಳಿಗೆ ಅಪಾಯಕಾರಿ ಲಿಂಕ್, APK ಫೈಲ್ ಕಳುಹಿಸಿ ಸಾರ್ವಜನಿಕರ ಮೊಬೈಲ್ ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ
ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ‘ಶುಭಾಶಯ’ ಬರಬಹುದು!
ಸಾರ್ವಜನಿಕರು ತಮ್ಮ ಮೊಬೈಲ್ಗೆ ಈ ರೀತಿಯ ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಹಾನಿಕಾರಕ ಲಿಂಕ್ಗಳು, APK ಫೈಲ್ಗಳನ್ನು ವಾಟ್ಸ್ಆ್ಯಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಿಂದ ಸ್ವೀಕರಿಸಿಕೊಂಡಲ್ಲಿ ಅದನ್ನು ತಕ್ಷಣ ಡಿಲೀಟ್ ಮಾಡಲು ಮಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸರು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಇಂತಹಾ ಹಾನಿಕರ ಲಿಂಕ್ ಮತ್ತು APK ಫೈಲ್ ಗಳನ್ನು ಯಾರಿಗೂ ಶೇರ್ ಮಾಡದಿರಿ. ಹಾನಿಕಾರಕ ಲಿಂಕ್ ಮತ್ತು APK ಫೈಲ್ ವಾಟ್ಸ್ ಆ್ಯಪ್ ಗ್ರೂಪ್ಗಳಿಗೆ ನಿಮ್ಮ ಪರಿಚಿತ ವಾಟ್ಸ್ಆ್ಯಪ್ನಿಂದ ಪೋಸ್ಟ್ ಮಾಡಿದಲ್ಲಿ ಆಯಾ ಗ್ರೂಪ್ ಅಡ್ಮಿನ್ ಗಳು ಅಂತಹ ಲಿಂಕ್, ಫೈಲ್ ಪರಿಶೀಲನೆ ಮಾಡಿ ಡಿಲೀಟ್ ಮಾಡುವಂತೆ ಕೂಡಾ ಪೊಲೀಸರು ತಿಳಿಸಿದ್ದಾರೆ.
ಮಸೇಜ್ ಬಂದ್ರೆ ಏನ್ ಮಾಡ್ತಾರೆ.,?? ಏನಾಗಬಹುದು..??!
2025ನೇ ಹೊಸ ವರ್ಷದ ಸಂದರ್ಭವನ್ನು ಬಳಸಿಕೊಂಡು ಸಾರ್ವಜನಿಕರ ಮೊಬೈಲ್ ಗಳಿಗೆ ಸೈಬರ್ ಕ್ರಿಮಿನಲ್ಳು ಹಾನಿಕಾರಕ ಲಿಂಕ್, ಅಪ್ಲಿಕೇಶನ್ ಗಳನ್ನು ಕಳುಹಿಸಿ ಬಳಿಕ ಅವರ ಮೊಬೈಲ್ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ನಂತರ ಹ್ಯಾಕ್ ಮಾಡಿದ ಮೊಬೈಲಿನಿಂದ ಅವರ ವಾಟ್ಸ್ ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು APK ಫೈಲ್ಗಳನ್ನು ದೊಡ್ಡಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಎನ್ನುತ್ತಾರೆ ಪೊಲೀಸರು.
ವಂಚನೆಗೊಳಗಾದರೆ 1930ಕ್ಕೆ ಕರೆ ಮಾಡಿ..!??
ಸೈಬರ್ ಕ್ರೈಮ್ ವಂಚನೆಗೆ ಬೆಳಗಾದಲ್ಲಿ ಕೂಡಲೇ 1930ಕ್ಕೆ ಕರೆಮಾಡಿ ಅಥವಾ www.cyber- crime.gov.in ವೆಬ್ಸೈಟ್ನಲ್ಲಿ ದೂರು ದಾಖಲಿಸಲು ತಿಳಿಸಿದೆ.