ಕರ್ನಾಟಕ ಟಾಪ್ ನ್ಯೂಸ್
ಎದೆ ನೋವು ಅಂತ ಆಸ್ಪತ್ರೆ ಸೇರಿ ಅಲ್ಲೇ ಕಳ್ಳತನ ಮಾಡಿದ!
– ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಆರೈಕೆ ಕೇಂದ್ರ ಸ್ಥಾಪನೆಗೆ ಪತ್ರ
– ಬೆಂಗಳೂರಿಗೆ ನಿಫಾ ವೈರಸ್ ಭೀತಿ!: ಎಲ್ಲೆಡೆ ಅಲರ್ಟ್
– ಟೊಮೆಟೋ ಬೆಳೆ ನಷ್ಟ: ಸಾಲ ತೀರಿಸಲು ಲ್ಯಾಪ್ಟಾಪ್ ಕಳ್ಳತನ!
NAMMUR EXPRESS NEWS
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸಾರ್ವಜನಿಕರ ಆಸ್ವತ್ರೆಗೆ ಎದೆನೋವು ಅಂತ ಆಸ್ಪತ್ರೆಗೆ ಬಂದ ನಕಲಿ ರೋಗಿಯೋರ್ವ ಮಾಡಿದ ಕೆಲಸ ನೋಡಿ ಸಿಬ್ಬಂದಿ ಜೊತೆಗೆ ಜನರು ಸಹ ಬೆಚ್ಚಿ ಬಿದ್ದಿದ್ದು, ಸರಿಯಾಗಿ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಶಂಕರ್ ಎಂಬಾತ ಮೊದಲಿಗೆ ಆಸ್ವತ್ರೆಯ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾನೆ. ಮನಗೆ ಹೋಗದೆ ನೇರವಾಗಿ ಆಸ್ಪತ್ರೆಯ ಮೊದಲನೇ ಮಹಡಿಗೆ ತೆರಳಿದ್ದು ಅಲ್ಲಿ ವಾರ್ಡ್ಗಳ ಒಳಗಡೆ ಹೋಗಿ ನಿದ್ದೆಗೆ ಜಾರಿರುವ ರೋಗಿಗಳ ಹಣ, ಮೊಬೈಲ್ ಮತ್ತು ಬೆಲೆ ಬಾಳವ ್ತುಗಳ್ನ ಎಗರಿಸುವ ಯತ್ನ ಮಾಡಿದ್ದಾನೆ.
ಆದರೆ ಈ ವೇಳೆ ರೋಗಿಯೊಬ್ಬರು ಎಚ್ಚೆತ್ತು ಯಾರು ನೀನು ?ಅಂತಿದ್ದಂತೆ ನಾನು ಆಸ್ಪತ್ರೆ ಸಿಬ್ಬಂದಿ ಡಾಕ್ಟರ್ ಎಂದು ಹೇಳಿ ಅಲ್ಲಿಂದ ಹೊರಗಡೆ ಬಂದಿದ್ದಾನೆ. ಹೀಗಾಗೆ ಅನುಮಾನಗೊಂಡ ಜನರು ಆರೋಪಿಯನ್ನ ಹಿಂಬಾಲಿಸಿದಾಗ ಕಳ್ಳತನ ಮಾಡಲು ಬಂದಿರುವುದು ಗೊತ್ತಾಗಿದ್ದು ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
* ಮೆಟ್ರೋ ನಿಲ್ದಾಣದಲ್ಲಿ ಆರೈಕೆ ಕೇಂದ್ರ ಸ್ಥಾಪಿಸುವಂತೆ BMRCLಗೆ ಪತ್ರ!
ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರ ಸ್ಥಾಪಿಸುವಂತೆ BMRCLಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದಾರೆ.
ಬಿಎಂಟಿಸಿ ಮತ್ತು KSRTC ಬಸ್ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರಗಳು ಇವೆ. ಇದೇ ರೀತಿ ನಮ್ಮ ಮೆಟ್ರೋ ನಿಲ್ದಾಣಗಳಲ್ಲೂ ಆರೈಕೆ ಕೇಂದ್ರ ಸ್ಥಾಪಿಸುವಂತೆ ಸೂಚಿಸಿದ್ದಾರೆ.
* ಬೆಂಗಳೂರಿಗೆ ನಿಫಾ ವೈರಸ್ ಭೀತಿ!
ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್ ಗೆ 23 ವರ್ಷದ ಯುವಕ ಬಲಿಯಾಗಿದ್ದಾನೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸೈಕಾಲಜಿ ಓದುತ್ತಿದ್ದ ಯುವಕ ಕೇರಳದಲ್ಲಿ ನಿಫಾಗೆ ಬಲಿಯಾಗಿದ್ದು, ನಗರಕ್ಕೆ ನಿಫಾ ಟೆನ್ಷನ್ ಕಾಲಿಟ್ಟಿದೆ.
ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದಾಗ ಯುವಕನಿಗೆ ನಿಫಾ ವೈರಸ್ ತಗುಲಿ, ಮೃತಪಟ್ಟಿದ್ದ. ಯುವಕನ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಹೈ ಅಲರ್ಟ್ ಆಗಿದೆ. ಕೇರಳ ಹಾಗೂ ವಿಶೇಷವಾಗಿ ಕರ್ನಾಟಕಕ್ಕೆ ಕಟ್ಟೆಚ್ಚರ ವಹಿಸಲು ಎಚ್ಚರಿಕೆ ನೀಡಿದೆ.
ಈ ಮಧ್ಯೆ ನಿಫಾಗೆ ಬಲಿಯಾದ ಯುವಕನ ಅಂತ್ಯಸಂಸ್ಕಾರಕ್ಕೆ ಕೇರಳಕ್ಕೆ ತೆರಳಿದ್ದ 15 ಸ್ನೇಹಿತರು ಬೆಂಗಳೂರಿಗೆ ಆಪತ್ತು ತಂದಿದ್ದಾರೆ. ಮೃತ ಯುವಕನ ಪ್ರಾಥಮಿಕ ಸಂಪರ್ಕಿತರಾಗಿರುವ ಸ್ನೇಹಿತರ ಟ್ರ್ಯಾಕಿಂಗ್ಗೆ ಇಳಿದ ಆರೋಗ್ಯ ಇಲಾಖೆ ನಿಫಾ ಪರೀಕ್ಷೆಗೆ ಒಳಪಡಿಸಿಲಿದೆ.
* ಟೊಮೆಟೋ ಬೆಳೆ ಲಾಸ್: ಸಾಲ ತೀರಿಸಲು ಲ್ಯಾಪ್ಟಾಪ್ ಕಳ್ಳತನ!
ಬೆಂಗಳೂರು: ಟೊಮೆಟೋ ಬೆಳೆಯಿಂದ ನಷ್ಟ ಆಗಿದ್ದಕ್ಕೆ ಲ್ಯಾಪ್ಟಾಪ್ ಕಳ್ಳತನ ಮಾಡಿ ಮಾರು್ಿದ್ದ ಟೆಕ್ಕಿಯೊಬ್ನನ್ನು ೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಮುರುಗೇಶ ಎಂದು ಗುರುತಿಸಲಾಗಿದ್ದು, ಸಿಸ್ಟಮ್ ಆಡ್ಮಿನ್ ಆಗಿ ಕೆಲಸ ಮಾಡುತ್ತಿದ್ದು,6 ಎಕರೆಯಲ್ಲಿ ಟೊಮೆಟೋ ಬೆಳೆದಿದ್ದ. ಅದಕ್ಕಾಗಿ ಹೊಸೂರಿನಲ್ಲಿ ಸಾಲ ಮಾಡಿದ್ದು, ಆದರೆ ಬೆಳೆ ಕೈಕೊಟ್ಟ ಕಾರಣ ಸಾಕಷ್ಟು ನಷ್ಟವನ್ನು ಅನುಭವಿಸಿದ್ದನು.
ಸಾಲ ತೀರಿಸಲಾಗದೇ ಕಳೆದ ಆರು ತಿಂಗಳಿನಿಂದ ಮುರುಗೇಶ ಲ್ಯಾಪ್ಟಾಪ್ ಸರ್ವಿಸ್, ರಿಪೇರಿ ಮಾಡುವ ಕೆಲಸದಲ್ಲಿ ತೊಡಗಿದ್ದ. ಹೀಗೆ ಕೆಲಸದ ನೆಪ ಹೂಡಿ ಹಲವಾರು ಲ್ಯಾಪ್ಟಾಪ್ ಕದ್ದಿದ್ದ ಎನ್ನಲಾಗಿದೆ.