ಪ್ರತಿ ವರ್ಷ ಇನ್ನು ಉದ್ಯೋಗ ಮೇಳ!
– ರಾಜ್ಯ, ಜಿಲ್ಲಾ ಮಟ್ಟದಲ್ಲಿ ಆಯೋಜನೆ; ಸಿಎಂ ಘೋಷಣೆ!
– ತರಬೇತಿ ಕೇಂದ್ರಗಳ ಸ್ಥಾಪನೆ ಭರವಸೆ
NAMMUR EXPRESS NEWS
ಬೆಂಗಳೂರು: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿ ಸುವ ಉದ್ದೇಶದಿಂದ ಪ್ರತಿ ವರ್ಷ ರಾಜ್ಯ ಮತ್ತು ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ “ಯುವ ಸಮೃದ್ಧಿ ಸಮ್ಮೇಳನ – 2024” ಅಡಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ 1,10,000ಕ್ಕೂ ಅಧಿಕ ಉದ್ಯೋಗವಕಾಶಗಳಿದ್ದು, 600ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಿವೆ. ಈ ಸರ್ಕಾರದ ಅವಧಿವರೆಗೆ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ಪ್ರಸ್ತುತ ರಾಜ್ಯ ಮಟ್ಟದಲ್ಲಿ ಉದ್ಯೋಗ ಮೇಳವನ್ನು ವರ್ಷಕ್ಕೆ ಒಮ್ಮೆ ಆಯೋಜಿಸಲಾಗುವುದರ ಜತೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಕೌಶಲ್ಯ ಅಭಿವೃದ್ಧಿ ನಿಗಮವು ಪ್ರಕಟಣೆ ಮೂಲಕ ತಿಳಿಸಿದ್ದು, ಯೋಜನೆಯ ಗುರಿ ಹಾಗೂ ಕಾರ್ಯಯೋಜನೆ ಬಗ್ಗೆ ವಿವರಿಸಿದೆ. 8ನೇ ತರಗತಿಯಿಂದ 12ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸುವ ಬಗ್ಗೆಯೂ ತಿಳಿಸಲಾಗಿದೆ. ಇ – ಕೌಶಲ್ಯ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಎಲ್.ಎಂ.ಎಸ್) ಭವಿಷ್ಯದ ಕೌಶಲ್ಯಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30ಕ್ಕೂ ಹೆಚ್ಚು ಕೋರ್ಸ್ಗಳನ್ನು ಕಲಿಯಲು ಕೌಶಲ್ಯ ಆಕಾಂಕ್ಷಿಗಳಿಗೆ ಆನ್ಲೈನ್ ವೇದಿಕೆಯನ್ನು ಒದಗಿಸಲಾಗಿದೆ ಎಂದು ಹೇಳಿಕೊಂಡಿದೆ.
ಯುವಜನತೆ ಉದ್ಯೋಗಕ್ಕಾಗಿ ಏನೆಲ್ಲ ಕ್ರಮ?
*ಕರ್ನಾಟಕದಲ್ಲಿ ಅಂದಾಜು ಪ್ರತಿ ವರ್ಷ ಪಿ.ಯು.ಸಿ.ಯಲ್ಲಿ 932450, ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 62437, ಪಾಲಿಟೆಕ್ನಿಕ್ನಲ್ಲಿ 48153, ಪದವಿಯಲ್ಲಿ 480000 ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ.
*ಇವರಲ್ಲಿ ನಿರುದ್ಯೋಗದ ಶೇಕಡಾವಾರು ದರ ಪಿರಿಯೋಡಿಕ್ ಲೇಬರ್ ಫೋರ್ಸ್ ಸರ್ವೆ ಪ್ರಕಾರ ಶೇ. 2.4 ಇದೆ.
* ರಾಜ್ಯದಲ್ಲಿನ ನಿರುದ್ಯೋಗಿ ಯುವಜನತೆಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮುಖೇನ ಇಂದಿನ ಯುವಜನತೆಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವುದರೊಂದಿಗೆ ಕೌಶಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
* ರಾಜ್ಯದ ಯುವ ಜನತೆಗೆ ಉಚಿತ ಅಲ್ಪಾವಧಿ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯಮಶೀಲತೆಯ ನೆರವು ಹಾಗೂ ಜೀವನೋಪಾಯಕ್ಕೆ ಅಡಿಪಾಯವನ್ನು ರೂಪಿಸಿ ಮೌಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸುವ ಗುರಿ ಹೊಂದಲಾಗಿದೆ.
*ಈ ಉದ್ಯೋಗ ಮೇಳದಲ್ಲಿ 1,10,000ಕ್ಕೂ ಅಧಿಕ ಉದ್ಯೋಗವಕಾಶಗಳು ಇದ್ದು, 600ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಿವೆ
*ಈ ಸರ್ಕಾರದ ಅವಧಿವರೆಗೆ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
*ಪ್ರಸ್ತುತ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ವರ್ಷಕ್ಕೆ ಒಮ್ಮೆ ಆಯೋಜಿಸಲಾಗುವುದು. ಜತೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ.
*ಈ ಬಜೆಟ್ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುವನಿಧಿಗೆ ನೋಂದಣಿಯಾದ ಅಭ್ಯರ್ಥಿಗಳಲ್ಲಿ ಕನಿಷ್ಠ 25,000 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಘೋಷಣೆ ಮಾಡಲಾಗಿದೆ.
*ಅದರಂತೆ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಗಳ ಮೂಲಕ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು. ಕಲಿಕೆ ಜತೆಗೆ ಕೌಶಲ್ಯ ಕಾರ್ಯಕ್ರಮ ಅನುಷ್ಠಾನಗೊಳಿಸಲು ಘೋಷಿಸಲಾಗಿದೆ.
*ರಾಜ್ಯದ ಆಯ್ದ 62 ಕಾಲೇಜುಗಳಲ್ಲಿನ ಬಿ.ಎ/ ಬಿ.ಕಾಂ/ ಬಿ.ಬಿ.ಎ/ ಬಿ.ಎಸ್.ಸಿ/ ಪದವಿಯ 5 & 6 ನೇ ಸೆಮಿಸ್ಟರ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ 28 ವಿವಿಧ ಕೈಗಾರಿಕಾ ಬೇಡಿಕೆ ಆಧಾರಿತ ಅಲ್ಪಾವಧಿ ತರಬೇತಿ ನೀಡಲಾಗುವುದು.
*ನೇರವಾಗಿ ಕೈಗಾರಿಕೆ/ ಉದ್ಯಮಗಳ ಪ್ರಮಾಣಪತ್ರವನ್ನು ನೀಡುವ ಮುಖೇನ ಉದ್ಯೋಗಾವಕಾಶವನ್ನು ಕಲ್ಪಿಸಲು 102 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 150 ಉನ್ನತೀಕರಿಸಿದ ಸರ್ಕಾರಿ ಐಟಿಐ, 32 ಜಿಟಿಟಿಸಿ ಮತ್ತು 8 ಕೆಜಿಟಿಟಿಐಗಳ ಮೂಲಕ ತರಬೇತಿ ನೀಡಲು ಕ್ರಮ
*ಕರ್ನಾಟಕ ಕರಿಯರ್ ಪ್ಲಾನಿಂಗ್ ಕಾರ್ಯಕ್ರಮದಡಿ “ನನ್ನ ವೃತ್ತಿ, ನನ್ನ ಆಯ್ಕೆ” ಎಂಬ ಧೇಯವಾಕ್ಯದೊಂದಿಗೆ 8 ನೇತರಗತಿಯಿಂದ 12 ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಇದು 150 ಎನ್.ಎಸ್.ಕ್ಯೂ.ಎಫ್ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುತ್ತಿದೆ.
*ಇ ಕೌಶಲ್ಯ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಎಲ್.ಎಂ.ಎಸ್) ಭವಿಷ್ಯದ ಕೌಶಲ್ಯಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30ಕ್ಕೂ ಹೆಚ್ಚು ಕೋರ್ಸ್ಗಳನ್ನು ಕಲಿಯಲು ಕೌಶಲ್ಯ ಆಕಾಂಕ್ಷಿಗಳಿಗೆ ಆನ್ಲೈನ್ ವೇದಿಕೆಯನ್ನು ಒದಗಿಸಲಾಗಿದೆ.