ಕರ್ನಾಟಕ ಟಾಪ್ ನ್ಯೂಸ್
– ರಾಯಚೂರು: ಬೀದಿ ನಾಯಿಗಳ ದಾಳಿಗೆ ಕೋಮಾ ಸ್ಥಿತಿ ತಲುಪಿದ ಯುವತಿ!
– ಬೆಂಗಳೂರು: ಟ್ರಕ್ ಡಿಕ್ಕಿ: ಖಾಸಗಿ ಬಸ್ ಪಲ್ಟಿ, ಹತ್ತು ಮಂದಿಗೆ ಗಾಯ!
– ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಬರ್ಬರ ಹತ್ಯೆ
– ನಂಜನಗೂಡು: ಅಸಭ್ಯ ಚಿತ್ರ ಬಿಡಿಸಿ ಮನೆ ಮುಂದೆ ಇಡುತ್ತಿದ್ದ ಕಾಮುಕನ ಬಂಧನ
– ಬೆಳಗಾವಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ
NAMMUR EXPRESS NEWS
ರಾಯಚೂರು: ಬೀದಿ ನಾಯಿಗಳು ದಾಳಿ ಮಾಡಿದಾಗ ಅವುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಯುವತಿ ಒಬ್ಬಳು ಕೋಮಾ ಸ್ಥಿತಿಗೆ ತಲುಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರಿನ ಬಡ್ಡಿಪೇಟೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಕೋಮಾ ಸ್ಥಿತಿ ತಲುಪಿದೆ ಯುವತಿಯನ್ನು ಮಹಾದೇವಿ (20) ಎಂದು ತಿಳಿದುಬಂದಿದೆ. ಡಿ. 11ಕ್ಕೆ ದೇವಾಲಯಕ್ಕೆ ಹೋಗುವ ವೇಳೆ ನಾಯಿಗಳು ದಾಳಿ ಮಾಡಿವೆ. ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಬಲವಾದ ಪೆಟ್ಟಾಗಿದೆ. ಕೆಳಗೆ ಬಿದ್ದ ಯುವತಿಯನ್ನು ನಾಯಿಗಳು ಎಳೆದಾಡಿವೆ. ಯುವತಿಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬಳ್ಳಾರಿಯಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರೆಫರ್ ಮಾಡಿದ್ದಾರೆ. ಆದರೆ ತೀವ್ರ ಬಡತನವಿರುವ ಕಾರಣ ಪುನಃ ರಾಯಚೂರು ಜಿಲ್ಲಾಸ್ಪತ್ರೆಗೆ ಕರೆತರಲಾಯಿತು ಎಂದು ಪಾಲಕರು ತಿಳಿಸಿದ್ದಾರೆ. ತನ್ನದಲ್ಲದ ತಪ್ಪಿಗೆ ಬೀದಿ ನಾಯಿಗಳ ದಾಳಿಗೆ ಚಿಂತಾಜನಕ ಸ್ಥಿತಿಗೆ ತಲುಪಿದ್ದು, ಈಗ ನಗರಸಭೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಪಾಲಕರು ವ್ಯಕ್ತಪಡಿಸಿದ್ದಾರೆ.
* ಬೆಂಗಳೂರು: ಟ್ರಕ್ ಡಿಕ್ಕಿ: ಖಾಸಗಿ ಬಸ್ ಪಲ್ಟಿ, ಹತ್ತು ಮಂದಿಗೆ ಗಾಯ!
ಬೆಂಗಳೂರು: ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಯು-ಟರ್ನ್ ಮಾಡುತ್ತಿದ್ದ ಖಾಸಗಿ ಬಸ್ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದ್ದು, ಬಸ್ ಪಲ್ಟಿಯಾಗಿದೆ.
ಪಲ್ಟಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಮಿಳುನಾಡಿನ ಶ್ರೀಪೆರಂಬದೂರು ಸಮೀಪದ ತಾಂಡಲಂ ಬಳಿ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಖಾಸಗಿ ಬಸ್ಸೆಂದು ಟ್ರಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಪಕ್ಕಕ್ಕೆ ಉರುಳಿ ಬಿದ್ದಿರುವುದು ವಿಡಿಯೋದಲ್ಲಿದೆ. ಸ್ಥಳದಲ್ಲಿದ್ದ ಜನರು ಸಂತ್ರಸ್ತರಿಗೆ ಸಹಾಯ ಮಾಡಲು ಬಸ್ ಬಳಿ ಧಾವಿಸಿದರು.
* ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಬರ್ಬರ ಹತ್ಯೆ
ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹಾಗರಗಾ ಪ್ರದೇಶದಲ್ಲಿರುವ ಮುಜಾಹಿರ್ ನಗರ ಬಡಾವಣೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಅರ್ಫಾತ್ ಕಾಲೋನಿ ನಿವಾಸಿ ಖಲೀಲ್ ಅಹ್ಮದ್ ಅಲಿಯಾಸ್ ಹಮಾಲ್ ವಾಡಿ ಖಲೀಲ್(48), ಮಿಜಗುರಿ ನಿವಾಸಿ ಅಲಿ ಪಟೇಲ್(40) ಕೊಲೆಯಾದವರು ಎಂದು ತಿಳಿದುಬಂದಿದೆ. ಕಲಬುರಗಿ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
* ನಂಜನಗೂಡು: ಅಸಭ್ಯ ಚಿತ್ರ ಬಿಡಿಸಿ ಮನೆ ಮುಂದೆ ಇಡುತ್ತಿದ್ದ ಕಾಮುಕನ ಬಂಧನ
ನಂಜನಗೂಡು: ಮಹಿಳೆಯರು, ಯುವತಿಯರ ಬಗ್ಗೆ ಅಸಭ್ಯವಾಗಿ ಲೈಂಗಿಕ ಚಿತ್ರಗಳನ್ನು ಬಿಡಿಸಿ ಹೆಸರುಗಳನ್ನು ನಮೂದಿಸಿ ಮನೆಗಳ ಮುಂದೆ ಇಡುತ್ತಿದ್ದ ಸೈಕೋಪಾತ್ನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹುಲ್ಲಹಳ್ಳಿಯ ವರದರಾಜಸ್ವಾಮಿ ಬಡಾವಣೆ ನಿವಾಸಿ ಶಿವಣ್ಣ (54) ಸಿಕ್ಕಿಬಿದ್ದ ವ್ಯಕ್ತಿ. ಸುಮಾರು ಮೂರ್ನಾಲ್ಕು ವರ್ಷಗಳಿಂದ ವರದರಾಜಸ್ವಾಮಿ ಬಡಾವಣೆ ಮಹಿಳೆಯರ ಬಗ್ಗೆ ಅಸಭ್ಯವಾಗಿ ಚಿತ್ರಗಳನ್ನು ಬಿಳಿ ಹಾಳೆಯಲ್ಲಿ ಬರೆದು ಹೆಸರುಗಳನ್ನು ಉಲ್ಲೇಖಿಸಿ ಅವರ ಮನೆಗಳ ಮುಂದೆ ಇಡುತ್ತಿದ್ದ. ಇದರಿಂದಾಗಿ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಿದ್ದವು. ಕೆಲವು ಮದುವೆ ಸಂಬಂಧಗಳೂ ಮುರಿದು ಬಿದ್ದಿದ್ದವು. ಮನೆಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದ ಅಸಭ್ಯ ಚಿತ್ರಗಳುಳ್ಳ ಚೀಟಿಗಳು ಗ್ರಾಮವನ್ನೇ ಬೆಚ್ಚಿ ಬೀಳಿಸಿತ್ತು. ಆ ವ್ಯಕ್ತಿಯನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಗ್ರಾಮಸ್ಥರು ಹಲವಾರು ದಿನಗಳಿಂದ ಹೊಂಚು ಹಾಕುತ್ತಿದ್ದರು. ನಿನ್ನೆ ತಡರಾತ್ರಿ ಸೈಕಲ್ನಲ್ಲಿ ಬಂದ ಶಿವಣ್ಣ ಮನೆ ಮುಂದೆ ಚೀಟಿಯನ್ನು ಇಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಧರ್ಮದೇಟು ಕೊಟ್ಟ ಗ್ರಾಮಸ್ಥರು ಹುಲ್ಲಹಳ್ಳಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಇಂತಹ ಕಾಮುಕ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬೆಳಗಾವಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ
ಬೆಳಗಾವಿ: ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿಗಾಗಿ ಒತ್ತಾಯಿಸಿ ನಡೆಸುತ್ತಿರುವ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಸುವರ್ಣಸೌಧದ ಬಳಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯದವರು ಪ್ರತಿಭಟನೆ ತೀವ್ರಗೊಳಿಸಿದ್ದು, ಈ ವೇಳೆ ಪ್ರತಿಭಟನಾಕಾರರ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಬ್ಯಾರಿಕೇಡ್ ಗಳನ್ನು, ಪೊಲೀಸರನ್ನು ತಳ್ಳಿ ಸುವರ್ಣಸೌಧದತ್ತ ಮುನ್ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ತಡೆಯಲು ಯತ್ನಿಸಿದ್ದಾರೆ. ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ.
ರೋಗಿಗಳನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಲಾಗಿದೆ. ಲಾಠಿ ಏಟಿಗೆ 20ಕ್ಕೂ ಹೆಚ್ಚು ಜನರು ಗಂಭೀರವಾಗಿದ್ದಾರೆ. ಲಾಠಿ ಚಾರ್ಜ್ ಮಾಡುತ್ತಿದ್ದಂತೆ ಮತ್ತೊಂದೆಡೆ ಪ್ರತಿಭಟನಾಕಾರರ ಆಕ್ರೋಶ ಮತ್ತಷ್ಟು ಹೆಚ್ಚಿದ್ದು, ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ಪ್ರದರ್ಶನ. ಪೊಲೀಸ್ ವಾಹನಗಳು, ಕಾರುಗಳ ಗಾಜು ಪುಡಿಪುಡಿಯಾಗಿವೆ. ಘಟನೆಯಲ್ಲಿ ಹಲವು ಪ್ರಕರಣಗಳಿವೆ. ವೇಳೆ ಬಸವಜಯ ಮೃತ್ಯುಂಜಯ ಹಾಗೂ ಶಾಸಕ ಯತ್ನಾಳ್, ಬೆಲ್ಲದ್ ಸೇರಿ ಹಲವು ಮುಖಂಡರನ್ನು ಈ ಸ್ವಾಮೀಜಿ ವಶಕ್ಕೆ ಪಡೆದಿದ್ದಾರೆ.