ಕರ್ನಾಟಕ ಟಾಪ್ ನ್ಯೂಸ್
ದೇವರ ಗರ್ಭ ಗುಡಿಯೊಳಗೆ ಅರ್ಚಕರಿಬ್ಬರ ಪರಸ್ಪರ ಹೊಡೆದಾಟ!
– ಬ್ಯಾಗ್ನಲ್ಲಿ ಜೀವಂತ ಪ್ರಾಣಿ ಸಾಗಾಟ, ಏನಿದು ಘಟನೆ?
– ಹುಬ್ಬಳ್ಳಿ: ಕೌಟುಂಬಿಕ ಸಮಸ್ಯೆ, ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಕೊಲೆ!
– ನೆಲಮಂಗಲದಲ್ಲಿ ಮಹಿಳೆಯ ರುಂಡ ಕತ್ತರಿಸಿದ ಚಿರತೆ!
– ಕುಡಿದ ಮತ್ತಿನಲ್ಲಿ, ಪತ್ನಿಯ ಕತ್ತು ಸೀಳಿರುವ ಪತಿ!
NAMMUR EXPRESS NEWS
ಕಲಬುರಗಿ: ಅರ್ಚಕರಿಬ್ಬರು ದೇವಸ್ಥಾನದ ಗರ್ಭ ಗುಡಿಯೊಳಗೆ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಕಲಬುರಗಿಯ ಗಾಣಗಾಪುರದಲ್ಲಿ ನಡೆದಿದೆ. ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದ ಭಕ್ತರಿಗೆ ದರ್ಶನದ ಲೈನ್ ಬಿಡೋ ವಿಚಾರದಲ್ಲಿ ಅರ್ಚಕರಾದ ಕಿರಣ್ ಭಟ್ ಪೂಜಾರಿ ಮತ್ತು ವಲ್ಲಭಟ್ ಪೂಜಾರಿ ಎಂಬುವವರ ಮಧ್ಯೆ ಪೈಟಿಂಗ್ ನಡೆದಿದೆ.
ಇಬ್ಬರ ಅರ್ಚಕರ ಮಧ್ಯೆ ತಮ್ಮ ಕಡೆಯವರ ಭಕ್ತರಿಗೆ ಮೊದಲು ಬಿಡಬೇಕು. ಇಲ್ಲಾ ನಮ್ಮ ಕಡೆಯವರ ಭಕ್ತರಿಗೆ ಮೊದಲು ಬಿಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಜಗಳ ಶುರುವಾಗಿ ಪರಸ್ಪರ ಹೊಡೆದಾಟ ನಡೆಸಿದ್ದಾರೆ.
ಅರ್ಚಕರ ಜಗಳ ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಇಬ್ಬರು ಅರ್ಚಕರ ವಿರುದ್ಧ ದೂರು ದಾಖಲಾಗಿದೆ.
* ಬ್ಯಾಗ್ನಲ್ಲಿ ಜೀವಂತ ಪ್ರಾಣಿ ಸಾಗಾಟ, ಏನಿದು ಘಟನೆ?
ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಗಾಂಜಾ, ಡ್ರಗ್, ಚಿನ್ನ, ಅಂಬರ್ ಗ್ರೀಸ್ ಹೀಗೆ ಅನೇಕ ಬೆಲೆಬಾಳುವ ವಸ್ತುಗಳನ್ನು ಸಾಗಾಟ ಮಾಡಿ ಪೊಲೀಸರ ಅತಿಥಿಯಾಗ್ತಾರೆ. ಆದರೆ ಇಲ್ಲೊಂದು ಕಡೆ ಜೀವಂತ ಪ್ರಾಣಿಗಳನ್ನು ಸಾಗಿಸಿ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದೊಡ್ಡ ಪ್ರಮಾಣದ ಅಕ್ರಮ ಪ್ರಾಣಿ ಸಾಗಾಣಿಕೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಕೌಲಾಲಂಪುರದಿಂದ ಬಂದ ವಿಮಾನದಲ್ಲಿ ಬರೋಬ್ಬರಿ 40 ಪೆಟ್ಟಿಗೆಗಳಲ್ಲಿ ವಿವಿಧ ಜೀವಿಗಳ ಸಾಗಾಟವನ್ನು ತಡೆಹಿಡಿದಿದ್ದಾರೆ. ವಿವಿಧ ಜಾತಿಯ ಆಮೆಗಳು, ಹಲ್ಲಿಗಳು ಮತ್ತು ಇಲಿಗಳನ್ನು ಅಡಗಿಸಿಟ್ಟು ತರಲಾಗುತ್ತಿತ್ತು. ಅಕ್ರಮವಾಗಿ ವಿದೇಶದಿಂದ ಸಾಗಾಟ ಮಾಡುತ್ತಿದ್ದ ಪ್ರಾಣಿಗಳನ್ನು ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಾಣಿಗಳನ್ನು ತಂದಿದ್ದ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ದೊಡ್ಡ ಆಮೆ, ನಕ್ಷತ್ರ ಆಮೆ, ಕೆಂಪು ಪಾದದ ಆಮೆ, ಹಲ್ಲಿ ಹಾಗೂ ಕೆಂಪು ಇಲಿ ಸೇರಿದಂತೆ ಟ್ರಾಲಿ ಬ್ಯಾಗ್ನಲ್ಲಿ 40 ಬಾಕ್ಸ್ಗಳಲ್ಲಿದ್ದ ವಿವಿಧ ಬಗೆಯ ಪ್ರಾಣಿಗಳನ್ನು ವಶಕ್ಕೆ ಪಡೆಯಲಾಗಿದೆ. ಏರ್ಪೋರ್ಟ್ನಲ್ಲಿ ಪರಿಶೀಲನೆ ವೇಳೆ ಬಾಕ್ಸ್ನಲ್ಲಿ ಪ್ರಾಣಿಗಳಿರುವುದು ಪತ್ತೆ ಆಗಿದೆ. ಕೌಲಲಾಂಪುರದಿಂದ ವಿಮಾನದಲ್ಲಿ ಅಕ್ರಮವಾಗಿ ಪ್ರಾಣಿಗಳನ್ನು ತಂದಿದ್ದರು. ಸದ್ಯ ಅಕ್ರಮ ಪ್ರಾಣಿಗಳ ಸಾಗಾಟ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
* ನೆಲಮಂಗಲದಲ್ಲಿ ಮಹಿಳೆಯ ರುಂಡ ಕತ್ತರಿಸಿದ ಚಿರತೆ!
ಬೆಂಗಳೂರು: ನೆಲಮಂಗಲ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಚಿರತೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಕರಿಯಮ್ಮ (55) ಮೃತಪಟ್ಟ ಮಹಿಳೆ. ಜಾನುವಾರುಗಳಿಗೆ ಮೇವು ತರಲು ಜಮೀನಿಗೆ ಹೋಗಿದ್ದ ವೇಳೆ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿದೆ. ರುಂಡವನ್ನು ಚಿರತೆ ತಿಂದಿದ್ದು, ಕರಿಯಮ್ಮ ಅವರ ಮುಂಡ ಮಾತ್ರ ಪತ್ತೆಯಾಗಿದೆ. ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರಿಯಮ್ಮ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಹುಬ್ಬಳ್ಳಿ: ಕೌಟುಂಬಿಕ ಸಮಸ್ಯೆ, ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಕೊಲೆ!
ಹುಬ್ಬಳ್ಳಿ: ಮನೆಯಲ್ಲಿನ ಕೌಟುಂಬಿಕ ಸಮಸ್ಯೆ ಜಗಳದವರೆಗೆ ಹೋಗಿ, ಕೊನೆಗೆ ಕೋಪಗೊಂಡ ಮೈದುನ ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಸಾಜೀದಾ ನಾಲಬಂದ (38) ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ.
ಆಕೆಯ ಪತಿ ಮಹ್ಮದ್ ಹನೀಫ್ ಗಾಯಗೊಂಡಿದ್ದು, ಕೆಎಂಸಿಆರ್ಐಗೆ ದಾಖಲಿಸಲಾಗಿದೆ. ನಾಸೀರ್ ನಾಲಬಂದ ಕೊಲೆ ಮಾಡಿದ ಆರೋಪಿ.ನಾಸೀರ್ ಮನೆಯಲ್ಲಿ ಅಣ್ಣ, ತಮ್ಮ ಅತ್ತಿಗೆ ಮೂವರು ವಾಸವಾಗಿದ್ದು, ಆಗಾಗ ಅವರ ನಡುವೆ ಜಗಳಗಳು ನಡೆಯುತ್ತಿತ್ತು. ನ. 17ರಂದು ಸಹ ಜಗಳ ನಡೆದಿದ್ದು, ಅದು ವಿಕೋಪಕ್ಕೆ ಹೋದ ಪರಿಣಾಮ ಮೈದುನ ನಾಸಿರ್ ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದಿದ್ದಾನೆ. ತೀವ್ರ ಗಾಯಗೊಂಡಿದ್ದ ಸಾಜೀದಾಳನ್ನು ಕೆಎಂಸಿಆರ್ಐಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕುಡಿದ ಮತ್ತಿನಲ್ಲಿ, ಪತ್ನಿಯ ಕತ್ತು ಸೀಳಿರುವ ಪತಿ!
ಉತ್ತರ ಪ್ರದೇಶ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕತ್ತಿಯಿಂದ ಪತ್ನಿಯ ಕತ್ತು ಸೀಳಿರುವ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, 33 ವರ್ಷದ ಆರೋಪಿ ದೀಪು ಸಿಂಗ್ ಕುಡಿತದ ಚಟ ಹೊಂದಿದ್ದ ಮತ್ತು ಆತ ತನ್ನ ಪತ್ನಿ ಪ್ರಿಯಾಂಕಾ ಜತೆ ಸ್ವಲ್ಪ ಜಗಳವನ್ನೂ ಆಡಿದ್ದ ಎಂದು ಹೇಳಿದ್ದಾರೆ.
ಈ ಕೊಲೆ ನಡೆಯುವಾಗ ಮನೆಯಲ್ಲಿ ಕೇವಲ ಇಬ್ಬರೇ ಇದ್ದರು, ಸಿಂಗ್ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ, ಆರೋಪಿಯ ತಾಯಿ ಮನೆಗೆ ಹಿಂದಿರುಗಿದಾಗ, ತನ್ನ ಸೊಸೆಯ ದೇಹವು ರಕ್ತದಲ್ಲಿ ತೊಯ್ದು ಹೋಗಿರುವುದನ್ನು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಎಸ್ಎಚ್ಒ ಹೇಳಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.