ಭತ್ತದ ಕೊಯ್ಲು ಈ ವಾರ ಕಷ್ಟ ಕಷ್ಟ!
– ಒಂದು ವಾರ ಮಳೆ ಸಾಧ್ಯತೆ: ಅಡಿಕೆ ಕೊಯ್ಲಿಗೆ ತೊಂದರೆ?
– ಸೈಕ್ಲೋನ್ ಎಫೆಕ್ಟ್: ಭಾರೀ ಚಳಿ, ಮತ್ತೆ ಮಳೆ
NAMMUR EXPRESS NEWS
ಬೆಂಗಳೂರು: ಬಂಗಾಳಕೊಲ್ಲಿಯ ಚಂಡಮಾರುತದ (ಪೆಂಗಾಲ್) ಪ್ರಭಾವದಿಂದ ಉತ್ತರ ಭಾರತ ಕಡೆಯಿಂದ ಶುಶ್ಕ ಹಾಗೂ ಶೀತ ಗಾಳಿ ಸೆಳೆಯಲ್ಪಡುತ್ತಿರುವುದರಿಂದ ಉತ್ತಮ ಛಳಿಯ ವಾತಾವರಣ ಸೃಷ್ಟಿಯಾಗಿದೆ. ರಾತ್ರಿ ಭಾರೀ ಚಳಿ ಹೆಚ್ಚಾಗುತ್ತಿದೆ.
ಪೆಂಗಾಲ್ ಚಂಡಮಾರುತವು ನವೆಂಬರ್ 30ರಂದು ಉತ್ತರ ತಮಿಳುನಾಡು ಕರಾವಳಿಯ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಿದೆ. ರಾಜ್ಯದಲ್ಲಿ ಛಳಿಯ ವಾತಾವರಣವು ಕಡಿಮೆಯಾಗಿ ಮಳೆ ಆರಂಭವಾಗುವ ಮುನ್ಸೂಚನೆ ಇದೆ.
ಡಿಸೆಂಬರ್ 2 ಅಥವಾ 3ರಂದು ಚಂಡಮಾರುತವು ಕೇರಳದ ಕಾಸರಗೋಡು ಹಾಗೂ ಕಣ್ಣೂರು ಮಧ್ಯೆ ಅರಬ್ಬಿ ಸಮುದ್ರಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಈ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ಇರುವಷ್ಟು ಸಮಯವೂ ( ಬಂಗಾಳಕೊಲ್ಲಿ ಕಡೆಯಿಂದ ಗಾಳಿ ಸೆಳೆಯಲ್ಪಡುವುದರಿಂದ) ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಹಿಂಗಾರು ರೀತಿಯ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ಸುಮಾರು ಡಿಸೆಂಬರ್ ಮೊದಲ ವಾರ ಪೂರ್ತಿ ಮಳೆಯ ಸಾಧ್ಯತೆ ಇದೆ. ಈ ಪ್ರಯುಕ್ತ ರೈತರು ಭತ್ತದ ಕೊಯ್ಲನ್ನು ಒಂದು ವಾರ ಮುಂದೂಡುವುದು ಹಾಗೂ ಈಗಾಗಲೇ ಕೊಯ್ಲು ಮಾಡಿದ್ದಲ್ಲಿ ಫಸಲು ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು ಸೂಕ್ತ. ಅಡಿಕೆ ಕೊಯ್ಲು ಬಗ್ಗೆ ಗಮನಿಸಬೇಕಿದೆ. ಶನಿವಾರ ಮೋಡ ಕವಿದ ವಾತಾವರಣ ಎಲ್ಲೆಡೆ ಕಂಡು ಬಂತು.