ಟಾಪ್ ನ್ಯೂಸ್ ಕರ್ನಾಟಕ
ಗಣೇಶನ ಬಿಡಲು ಹೋಗಿ ಮೂವರ ದುರ್ಮರಣ
– ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಘಟನೆ: ಅಪ್ಪ, ಮಗ ಸಾವು
ಚಿತ್ರದುರ್ಗ: ಹೊಸದುರ್ಗದಲ್ಲಿ ಬಾವಿಗೆ ಬಿದ್ದು ಅಮ್ಮ, ಮಗು ಸಾವು
ಬೆಂಗಳೂರು: ಯುವಕನ ಬಲಿ ಪಡೆದ ನಿಫಾ ವೈರಸ್: ತುರ್ತು ಸಭೆ
ಬೆಂಗಳೂರು: ಬೀದಿನಾಯಿ ಕಾಟ: ಸಹಾಯಕ್ಕಾಗಿ ಹೆಲ್ಪ್ ಲೈನ್..!
NAMMUR EXPPRESS NEWS
ತುಮಕೂರು: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾರಸಂದ್ರ ಗ್ರಾಮ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ತಂದೆ, ಮಗ ಸೇರಿ ಮೂವರು ಸಾವನ್ನಪ್ಪಿರುವಂತಹ ದುರ್ಘಟನೆ ಸಂಭವಿಸಿದೆ.
ಮೃತರನ್ನು ತಂದೆ ಮಗ, 46 ವರ್ಷದ ರೇವಣ್ಣ, 26 ವರ್ಷದ ಶರತ್ ಹಾಗೂ ದಯಾನಂದ ಎಂದು ಗುರುತಿಸಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ.
ಏನಿದು ಘಟನೆ?: ಗ್ರಾಮದಲ್ಲಿ ಕೂರಿಸಲಾಗಿದ್ದ ಗಣಪತಿಯನ್ನು ಮೆರವಣಿಗೆಯಲ್ಲಿ ಕೆರೆಯ ಬಳಿ ತರಲಾಗಿತ್ತು. ವಿಸರ್ಜನೆಯ ವೇಳೆ ಶರತ್ ಮತ್ತು ದಯಾನಂದ್ ಮೂರ್ತಿಯನು ಕೆರೆಯಲ್ಲಿ ಮುಳುಗಿಸಲು ಮುಂದಾದರು.ಆದರೆ ಕೆರೆಯಲ್ಲಿ ಕೆಸರಿದ್ದ ಕಾರಣ ಅವರ ಕಾಲು ಅಲ್ಲೇ ಹೂತುಕೊಂಡಿತು. ಇಬ್ಬರಿಗೂ ಈಜು ಬಾರದ ಕಾರಣ ಏನು ಮಾಡುವುದೆಂದು ತಿಳಿಯದೇ ಇಬ್ಬರೂ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ಕಂಡ ರೇವಣ್ಣ ಕೂಡಲೇ ನೀರಿಗೆ ಹಾರಿದ್ದಾರೆ. ವಿಷಾದವೆಂದರೆ ಅವರಿಗೂ ಈಜು ಬರುತ್ತಿರಲಿಲ್ಲ. ಕೊನೆಗೆ ಮೂವರೂ ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಚಿತ್ರದುರ್ಗ: ಹೊಸದುರ್ಗದಲ್ಲಿ ಬಾವಿಗೆ ಬಿದ್ದು ಅಮ್ಮ, ಮಗು ಸಾವು
ಚಿತ್ರದುರ್ಗ: ಬಾವಿಗೆ ಬಿದ್ದು ತಾಯಿ, ಮಗು ಮೃತಪಟ್ಟಿರುವ ಘಟನೆ ಹೊಸದುರ್ಗದಲ್ಲಿ ನಡೆದಿದೆ. ಹೊಸದುರ್ಗ ತಾಲ್ಲೂಕಿನ ಚನ್ನಸಮುದ್ರದಲ್ಲಿ (ಪುರ) ಗ್ರಾಮದ ನಿವಾಸಿ ಆಶಾ (34) ತನ್ನ ಹಾಗೂ 5 ತಿಂಗಳ ಮಗು ಭಾನುವಾರ ಮೃತಪಟ್ಟಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಬಲಿ!
ಬೆಂಗಳೂರು ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ 24 ವರ್ಷ ವಿದ್ಯಾರ್ಥಿ ನಿಫಾಗೆ ಸಾವನ್ನಪ್ಪಿರುವಂತಹ ಘಟನೆ ಕೇರಳದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಮಲಪ್ಪುರಂ ಮೂಲದವರು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗೆ ಅಕ್ಯೂಟ್ ರೆಸ್ಪಿರೇಟರಿ ಡಿಸ್ಟೆಸ್ ಸಿಂಡೋಮ್ (ಎಆರ್ಡಿಎಸ್) ಕಾಣಿಸಿಕೊಂಡಿದ್ದು, ವಿದ್ಯಾರ್ಥಿಯ ರಕ್ತ ಹಾಗೂ ಸಿರಂ ಸ್ಯಾಂಪಲ್ನಲ್ಲಿ ನಿಫಾ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಸೆಪ್ಟೆಂಬರ್ 8 ರಂದು ಕೇರಳದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಸರ್ಕಾರ ಈ ಸಂಬಂಧ ತುರ್ತು ಸಭೆ ಕರೆದಿದೆ.
ಬೀದಿನಾಯಿ ಕಡಿತ: ಸಹಾಯಕ್ಕಾಗಿ ಹೆಲ್ಪ್ ಲೈನ್ ಬಿಡುಗಡೆ
ಬೆಂಗಳೂರು: ರಾಜಧಾನಿಯಲ್ಲಿ ಬೀದಿನಾಯಿಗಳ ಕಾಟ ತಡೆಯಲು ಬಿಬಿಎಂಪಿ ಪಶುಪಾಲನಾ ವಿಭಾಗದ ಮೂಲಕ ಬೀದಿನಾಯಿ ಕಡಿತ ಪ್ರಕರಣಗಳ ನಿರ್ವಹಣೆಗೆ ಹೆಲ್ಪ್ ಲೈನ್ ಬಿಡುಗಡೆ ಮಾಡಲಾಗಿದೆ.
ಬೀದಿನಾಯಿಗಳ ಕಡಿತ ಹಾಗೂ ರೇಬಿಸ್ಗೆ ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಿ ಪ್ರಕಟೆ ಹೊರಿಸಿದ್ಾರೆ. 6364893322 ಹಾಗೂ 1533 ಸಹಾಯವಾಣಿ ಬಿಡುಗಡೆ ಮಾಡಿರೋ ಪಾಲಿಕೆ, ಇದರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯ ಡಾಗ್ ಕೆನಲ್ ಹೆಚ್ಚಳಕ್ಕೂ ತಯಾರಿ ನಡೆಸಿದೆ. ಇನ್ನು ಸಂತಾನಹರಣ, ರೋಗ ನಿರೋಧಕ ಚುಚ್ಚುಮದ್ದು ನೀಡೋದನ್ನ ಕೂಡ ಹೆಚ್ಚಿಸಲು ಚಿಂತನೆ ನಡೆಸಿದೆ.