ಟಾಪ್ 5 ನ್ಯೂಸ್
– ಸೋಡಿಯಂ ಬಳಸಿ ಸ್ಫೋಟ: ಡ್ರೋನ್ ಪ್ರತಾಪ್ ಅರೆಸ್ಟ್ !?
– ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎಂದು ಕತ್ತು ಸೀಳಿಕೊಂಡ ಅರ್ಚಕ!
– ಗಣೇಶನ ಚಿತ್ರವಿರುವ ಬಿಕಿನಿ, ಚಪ್ಪಲಿಗಳ ಮಾರಾಟ: ಆಕ್ರೋಶ
– ದೆಹಲಿಯಲ್ಲೂ ಗೃಹ ಲಕ್ಷ್ಮಿ ಯೋಜನೆ ಘೋಷಣೆ
– ತಮಿಳುನಾಡಿನ ಆಸ್ಪತ್ರೆಗೆ ಬೆಂಕಿ: ಮಗು ಸೇರಿ 7 ಸಾವು
NAMMUR EXPRESS NEWS
ತುಮಕೂರು: ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ನಡೆಸಿದ್ದ ಸ್ಫೋಟ ಪ್ರಕರಣದ ಆರೋಪದಡಿ ಇದೀಗ ಬಿಗ್ಬಾಸ್ ಖ್ಯಾತಿಯ ಮಾಜಿ ಸ್ಪರ್ಧಿ ಡೋನ್ ಪ್ರತಾಪ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮ ಸಮೀಪದ ಕೃಷಿ ಹೊಂಡವೊಂದರಲ್ಲಿ ಪ್ರತಾಪ್ ಸೋಡಿಯಂ ಮೆಟಲ್ ಬಳಸಿಕೊಂಡು, ಅದು ನೀರಿಗೆ ಬೆರೆತಾಗ ಹೇಗೆ ಸ್ಫೋಟವಾಗುತ್ತೆ ನೋಡಿ ಎಂಬ ಎಕ್ಸಪೆರಿಮೆಂಟ್ ಮಾಡಿರುವ ಸೈನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಘಟನೆ ಸಂಬಂಧ BNS ಸೆಕ್ಷನ್ 288, ಸ್ಫೋಟವಸ್ತು ನಿಯಂತ್ರಣ ಕಾಯ್ದೆ 3ರಡಿ ಮಿಡಿಗೇಶಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಿಡಿಗೇಶಿ ಪೊಲೀಸರು ಪ್ರೋನ್ ಪ್ರತಾಪ್ ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರತಾಪ್ ಸೈನ್ಸ್ ಹೆಸರಲ್ಲಿ ಇದೆಂಥಾ ಹುಚ್ಚಾಟ ಮಾಡುತ್ತಿದ್ದಾನೆ ಎಂತಲೂ ಕೆಲ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನೀರಿಗೆ ಸೋಡಿಯಂ ಮೆಟಲ್ ಹಾಕುತ್ತಿದ್ದಂತೆ ಅದು ತಕ್ಷಣ ದೊಡ್ಡ ಮಟ್ಟದಲ್ಲಿ ಸ್ಫೋಟವಾಗಿದ್ದಲ್ಲದೇ, ಶಬ್ದ ಕೂಡ ದೊಡ್ಡ ಪ್ರಮಾಣದಲ್ಲೇ ಕೇಳಿಸಿತ್ತು. ಇದರ ಲೈವ್ ವಿಡಿಯೋವನ್ನು ಪ್ರತಾಪ್ ಹಂಚಿಕೊಂಡಿದ್ದ. ಪ್ರತಾಪ್ ಇದೇನು ಕಿತಾಪತಿಗೆ ಅಂತಾ ಕೆಲ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
– ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎಂದು ಕತ್ತು ಸೀಳಿಕೊಂಡ ಅರ್ಚಕ
ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ.. ಕತ್ತು ಸೀಳಿಕೊಂಡ ಅರ್ಚಕ ವಾರಾಣಸಿಯ ಅರ್ಚಕರೊಬ್ಬರು ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎನ್ನುವ ಬೇಸರಕ್ಕೆ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರ್ಚಕ ಅಮಿತ್ ಶರ್ಮಾ ಎಂಬುವವರು ಮನೆಯ ರೂಮಿನ ಬಾಗಿಲು ಹಾಕಿಕೊಂಡು ಸತತ 24 ಗಂಟೆಗಳ ಕಾಲ ಕಾಳಿ ದೇವಿಯನ್ನು ನಿಷ್ಠೆಯಿಂದ ಪೂಜಿಸಿದ್ದರು. ಆದರೆ, ಆ ತಾಯಿ ದರ್ಶನ ಕೊಡಲಿಲ್ಲ ಎನ್ನುವ ಬೇಸರದಲ್ಲಿ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಡುಗೆ ಮಾಡುತ್ತಿದ್ದ ಪತ್ನಿಗೆ ತಾಯಿ ಕಾಳಿ ನೀನೇ ದಾರಿ ತೋರಿಸು ಎಂದು ಜೋರಾಗಿ ಕೂಗಿದ್ದರು ಎನ್ನಲಾಗಿದೆ.
– ಗಣೇಶನ ಚಿತ್ರವಿರುವ ಬಿಕಿನಿ, ಚಪ್ಪಲಿಗಳ ಮಾರಾಟ.. ಭಾರೀ ಆಕ್ರೋಶ!
ಗಣೇಶನ ಚಿತ್ರವಿರುವ ಬಿಕಿನಿ, ಚಪ್ಪಲಿಗಳ ಮಾರಾಟ.. ಭಾರೀ ಆಕ್ರೋಶ ವ್ಯಕ್ತವಾಗಿದೆ. ಪ್ರಖ್ಯಾತ ವಾಲ್ಮಾರ್ಟ್ ಕಂಪನಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದು, ಇದೀಗ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂಗಳ ದೇವರು ಗಣೇಶನ ಫೋಟೋ ಬಳಸಿ ವಿವಿಧ ವಿನ್ಯಾಸದ ಒಳಉಡುಪು, ಚಪ್ಪಲಿಗಳನ್ನು ತಯಾರಿಸಿ ಆನೈನ್ ಮಾರಾಟ ಶುರು ಮಾಡಿತ್ತು. ಕಂಪನಿ ವಿರುದ್ಧ ಭಾರತ & ಅಮೆರಿಕದಲ್ಲಿರುವ ಹಿಂದುಗಳು ಪ್ರತಿಭಟನೆ ನಡೆಸಿ, ಬಾಯ್ಕಾಟ್ ಅಭಿಯಾನ ಶುರು ಮಾಡಿದ್ದರು. ಇದರ ಬೆನ್ನಲ್ಲೇ ಆ ಎಲ್ಲಾ ಉಡುಪುಗಳ ಮಾರಾಟವನ್ನು ತನ್ನ ಆನೈನ್ ಮಾರುಕಟ್ಟೆಯಿಂದ ತೆಗೆದುಹಾಕಿ ಕ್ಷಮೆಯಾಚಿಸಿದೆ.
ದೆಹಲಿಯಲ್ಲೂ ಗೃಹ ಲಕ್ಷ್ಮಿ ಯೋಜನೆ ಘೋಷಣೆ
ನವದೆಹಲಿ: ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಆಪ್ ಇದೀಗ ಕರ್ನಾಟಕದ ಗೃಹಲಕ್ಷ್ಮಿ ರೀತಿ ಮಹಿಳೆಯರಿಗೆ ಹೊಸ ಭರವಸೆ ನೀಡಿದೆ. ‘ದೆಹಲಿಯ ಎಲ್ಲಾ ಮಹಿಳೆಯರಿಗೆ ತಕ್ಷಣದಿಂದಲೇ ಮಾಸಿಕ 1,000 ರೂಪಾಯಿ ನೀಡಲಾಗುವುದು.
ಚುನಾವಣೆಯಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಈ ಮೊತ್ತವನ್ನು 2,100ಕ್ಕೆ ಏರಿಸಲಾಗುವುದು’ ಎಂದು ಆಪ್ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರವಾಲ್ ಘೋಷಿಸಿದ್ದಾರೆ. ಮಹಿಳಾ ಸಮ್ಮಾನ್ ಯೋಜನೆಗೆ ದೆಹಲಿಯ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರಕಿದೆ. ಇದರಡಿ ಮಹಿಳೆಯರು ಇಂದಿನಿಂದಲೇ ನೋಂದಾಯಿಸಿಕೊಳ್ಳಲು ಪ್ರಾರಂಭಿಸಬಹುದು. ನೊಂದಣಿಯಾದ ಕೂಡಲೇ ಹಣವನ್ನು ನೇರವಾಗಿ ಖಾತೆಗಳಿಗೆ ಜಮೆ ಮಾಡಲಾಗುವುದು’ ಎಂದು ಕೇಜ್ರವಾಲ್ ಹೇಳಿದ್ದಾರೆ. ಇದನ್ನು ಸಿಎಂ ಆತಿಶಿ ‘ಕೇಜ್ರವಾಲ್ರ ಗ್ಯಾರಂಟಿ’ ಎಂದು ಕರೆದಿದ್ದಾರೆ.
ತಮಿಳುನಾಡಿನ ಆಸ್ಪತ್ರೆಗೆ ಬೆಂಕಿ: ಮಗು ಸೇರಿ 7 ಸಾವು
ಚನೈ: ತಮಿಳುನಾಡಿನ ದಿಂಡಿಗಲ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿ ಅವಘಡದ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.ನೂರಕ್ಕೂ ಹೆಚ್ಚು ರೋಗಿಗಳು ಒಳಗೆ ಸಿಲುಕಿಕೊಂಡಿದ್ದು, ಅವರನ್ನು ಸ್ಥಳಾಂತರಿಸಲಾಗಿದೆ. ಈ ಆಸ್ಪತ್ರೆಯು ನಾಲ್ಕು ಮಹಡಿಗಳನ್ನು ಹೊಂದಿದೆ.