ಕರಾವಳಿ ಟಾಪ್ ನ್ಯೂಸ್
* ಉಡುಪಿ: ಚಿರತೆಯ ಹಾವಳಿಗೆ ಸಾಕು ನಾಯಿ ಬಲಿ!
* ಮಂಗಳೂರು: ಮಂಗನ ಕಾಯಿಲೆ ಭೀತಿ!
* ಪುತ್ತೂರು:ವೃದ್ಧನ ಕೊಳೆತ ಮೃತದೇಹ ಪತ್ತೆ
* ಸುಳ್ಯ:ಎರಡು ಕಾರು ಪರಸ್ಪರ ಡಿಕ್ಕಿ: ತಂದೆ ಮಗಳು ಬಚಾವ್!
NAMMUR EXPRESS NEWS
ಉಡುಪಿ: ಉಡುಪಿಯ ಪೆರ್ಡೂರು ಸಮೀಪ ಚಿರತೆಯ ದಾಳಿಯಿಂದ ಜನತೆ ಆತಂಕಗೊಂಡಿದ್ದು, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಚಿರತೆಗಳು ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿದ್ದು, ಇತ್ತೀಚಿಗೆ ಪೆರ್ಡೂರು ಗೋರೇಲ್ನಲ್ಲಿ ಹರಿನಾರಾಯಣ ಭಂಡಿಯವರ ಮನೆಯ ಸಾಕು ನಾಯಿ ಚಿರತೆಯ ಹಾವಳಿಗೆ ಬಲಿಯಾಗಿದ್ದು ಸ್ಥಳೀಯರಲ್ಲಿ ಭಯ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ತಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಜನರು ತಮ್ಮ ಮನೆಯ ಪರಿಸರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
* ಮಳೂರಿನ್ಿ ಮಂಗನ ಕಾಯಿಲೆ ಭೀತಿ
ಮಂಗಳೂರು: ಕೇರಳದಲ್ಲಿ ನಿಫಾ ಬೆನ್ನಲ್ಲೇ ಮಂಗನ ಕಾಯಿಲೆ ಭೀತಿ ಉಂಟಾಗಿದ್ದು, ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ವಿಶೇಷ ನಿಗಾ ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಆಫ್ರಿಕನ್ ದೇಶಗಳಲ್ಲೂ ಮಂಗನ ಕಾಯಿಲೆ ಹರಡಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಬಂದರಿನ ಮೂಲಕ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಪ್ರತ್ಯೇಕ ಆ್ಯಂಬುಲೆನ್ಸ್ ಸನ್ನದ್ಧವಾಗಿದೆ. ಮಂಗನ ಕಾಯಿಲೆ ಪೀಡಿತ ರೋಗಿಗಳ ಚಿಕಿತ್ಸೆಗೆಂದು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಕಾದಿರಿಸಲಾಗಿದೆ.
* ಪುತ್ತೂರು:ವೃದ್ಧನ ಕೊಳೆತ ಮೃತದೇಹ ಪತ್ತೆ
ಪುತ್ತೂರು: ವಾರದ ಹಿಂದೆಯೇ ವೃದ್ಧ ಪತಿ ಮನೆಯೊಳಗೆ ಮೃತಪಟ್ಟಿದ್ದರೂ ಅನಾರೋಗ್ಯ ಪೀಡಿತ ಪತ್ನಿಗೆ ಗೊತ್ತಾಗದ ಕಾರಣ ಕೊಳೆತುಹೋಗಿದ್ದ ಮೃತದೇಹಕ್ಕೆ ಸೆ.18ರಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮುಕ್ತಿ ನೀಡಿದರು.
ಬಲ್ನಾಡು ಗ್ರಾಮದ ದೇರಾಜೆ ಅಟ್ಲಾರು ನಿವಾಸಿ ರಮೇಶ್ ರಾವ್ (70) ಮೃತಪಟ್ಟವರು. ಮಕ್ಕಳಿಲ್ಲದ ದಂಪತಿ ಮಾತ್ರ ಮನೆಯಲ್ಲಿದ್ದರು. ಪತ್ನಿ ತೀವ್ರ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದು ಪತಿಯೇ ಮನೆಯ ದೈನಂದಿನ ಜವಾಬ್ದಾರಿ ನಿರ್ವಹಿಸುತ್ತಿದ್ದು,
ಹತ್ತಿರದ ಮನೆಯವರು ಪರಿಶೀಲಿಸಿದಾಗ ಮನೆ ಯಜಮಾನ ಮೃತಪಟ್ಟಿರುವುದು ಬೆಳಕಿಗೆ ಬಂತು. ಮೃತದೇಹ ಕೊಳೆತು ನಾರುತ್ತಿತ್ತು. ಸಂಪ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
* ಸುಳ್ಯ:ಎರಡು ಕಾರು ಡಿಕ್ಕಿ: ತಂದೆ ಮಗಳು ಬಚಾವ್!
ಸುಳ್ಯ: ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಒಂದು ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಮಾಣಿ – ಮೈಸೂರು ಹೆ್ದಾರಿಯ ಸುಳ್ಯ ನಗರದ ಪರಿವಾಾನದ ಉಡುಪಿ ಾರ್ಡನ್ ಬಳಿ ಸಂಭವಿಸಿದೆ
ಸುಳ್ಯದಿಂದ ಪರಿವಾರಕಾನದ ಬಳಿ ಇರುವ ಗ್ಯಾರೇಜ್ಗೆ ಹೋಗುತ್ತಿದ್ದ ಆಲ್ಟೋ ಕಾರು ಮುಖ್ಯ ರಸ್ತೆಯಿಂದ ಗ್ಯಾರೇಜ್ ಕಡೆಗೆ ತಿರುಗಿದಾಗ ಮಡಿಕೇರಿ ಕಡೆಯಿಂದ ಬರುತ್ತಿದ್ದ ಮತ್ತೊಂದು ಕಾರು ಹಿಂಬದಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಆಲ್ಟೋ ಕಾರು ಚರಂಡಿಗೆ ಬಿದ್ದಿದೆ. ಅದರಲ್ಲಿದ್ದ ತಂದೆ ಮತ್ತು ಮಗಳು ಪಾರಾಗಿದ್ದಾರೆ. ಎರಡೂ ಕಾರುಗಳು ಜಖಂಗೊಂಡಿವೆ.