2025 ಹೊಸ ವರ್ಷಕ್ಕೆ ಸ್ವಾಗತ!
– ಹೊಸ ವರ್ಷದ ಸಂಭ್ರಮದಲ್ಲಿ ಮಿಂದೆದ್ದ ಜನ
– ಹಳೆ ವರ್ಷದ ಕಹಿ ಮರೆಯಾಗಿ ಹೊಸ ವರ್ಷತರಲಿ ಹೊಸತನ
NAMMUR EXPRESS NEWS
ಬೆಂಗಳೂರು: ಹಳೆ ವರ್ಷ ಮರೆಯಾಗಿ ಹೊಸ ವರ್ಷ ಬಂದಿದೆ. ಹೊಸ ವರ್ಷ ತಮ್ಮೆಲ್ಲರಿಗೂ ಹೊಸ ಹರುಷವನ್ನು ತರಲಿ. 2025 ರ ಹೊಸ ವರ್ಷವನ್ನು ರಾಜ್ಯದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲೂ ಹೊಸ ವರ್ಷದ ಸಂಭ್ರಮವನ್ನು ಆಚರಣೆ ಮಾಡಲಾಯಿತು. ಬೆಂಗಳೂರಿನ ಬ್ರಿಗೇಡ್ ರೋಡ್, ಕೋರಮಂಗಲ, ಜಯನಗರ ಸೇರಿದಂತೆ ಎಲ್ಲೆಡೆ ಜನರಿಂದ ತುಂಬಿ ಹೋದವು. ಸಾವಿರಾರು ಜನರು ಹೊಸ ವರ್ಷವನ್ನು ತುಂಬಾ ಸಂಭ್ರಮದಿಂದ ಸ್ವಾಗತವನ್ನು ಮಾಡಿದರು.
ಹೋಟೆಲ್ ಗಳು, ರೆಸ್ಟೋರೆಂಟ್ಗಳು, ಪಬ್ ಗಳು ಯುವ ಜನರಿಂದ ತುಂಬಿ ಹೋಗಿದ್ದವು. ಹೊಸ ವರ್ಷದ ಸಂಭ್ರಮದಲ್ಲಿ ಪಾರ್ಟಿ, ಡಾನ್ಸ್, ಪಟಾಕಿ ಸಂಭ್ರಮದ ಮೂಲಕ ಅದ್ದೂರಿಯಾಗಿ ನಡೆಯಿತು. ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಹೊಸ ವರ್ಷವನ್ನು ಹಬ್ಬದಂತೆ ಜನತೆ ಸಂಭ್ರಮಿಸಿದರು. ಎಲ್ಲೆಡೆ ಡಿಜೆ ಸೌಂಡ್, ಊಟದ ವ್ಯವಸ್ಥೆ ಮಾಡಲಾಗಿತ್ತು. ತೀರ್ಥಹಳ್ಳಿ ಪಟ್ಟಣ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲೂ ಕೂಡ ಹೊಸ ವರ್ಷದ ಸಂಭ್ರಮ ಕಳೆಕಟ್ಟಿದೆ.
ದೇಗುಲಗಳಲ್ಲಿ ವಿಶೇಷ ಪೂಜೆ
ಹೊಸ ವರ್ಷದ ಅಂಗವಾಗಿ ವಿಶೇಷವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಹೊಸ ವರ್ಷ ಸರ್ವರಿಗೂ ಹೊಸತನವನ್ನು ತರುವ ಭರವಸೆಯನ್ನು ನೀಡಿದೆ. ಹೊಸ ವರ್ಷದ ಶುಭಾಶಯಗಳು, ಹೊಸ ಕೆಲಸವನ್ನ ಹೊಸತಾಗಿ ಆರಂಭ ಮಾಡಿ. ತಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.