ಬಿಲ್ಲವ, ಈಡಿಗ ಪಂಗಡಗಳ ವಿಶ್ವ ಸಮ್ಮೇಳನ: ತೀರ್ಥಹಳ್ಳಿ ತಂಡದ ನಾಟಕ
– ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಸರ್ವರಿಗೂ ಸ್ವಾಗತ
– 50 ಜನರ ತಂಡ ಮಂಗಳೂರು ಪಯಣ
ಮಂಗಳೂರು ಸಮೀಪದ ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸುವರ್ಣ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ನಡೆಯುತ್ತಿರುವ ಬಿಲ್ಲವ, ತೀಯಾ, ಆರ್ಯ ಈಡಿಗ, ದೀವರು, ನಾಮಧಾರಿ ಸೇರಿದಂತೆ 26 ಪಂಗಡಗಳ ವಿಶ್ವ ಸಮ್ಮೇಳನ ಹಾಗೂ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಜ.24ರಿಂದ 26 ರವರೆಗೆ ನಡೆಯಲಿದೆ.
ಸಮ್ಮೇಳನದಲ್ಲಿ ತೀರ್ಥಹಳ್ಳಿಯ ಬಿಲ್ಲವ ಸಮಾಜ ಹಾಗೂ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀರ್ಥಹಳ್ಳಿ ಸಹಬಾಗಿತ್ವದಲ್ಲಿ ಮಂಜುನಾಥ್ ಜೈಪುರ ಹಾಗೂ ವಿಶಾಲ್ ಕುಮಾರ್ ಅವರ ನೇತೃತ್ವದಲ್ಲಿ ಪ್ರವೀಣ್ ಮಂಡಗದ್ದೆಯ ನಿರ್ದೇಶನದಲ್ಲಿ ಕಲಾ ತಂಡ ಭಾಗವಹಿಸುತ್ತಿದೆ. ವಿಶ್ವದ ಬಿಲ್ಲವ, ಈಡಿಗ ಪಂಗಡಗಳಿಂದ 25 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಕೊಟ್ಟಿದ್ದು ಅದರಲ್ಲಿ ತೀರ್ಥಹಳ್ಳಿಗೂ ಒಂದು ಅವಕಾಶ ಕೊಡಲಾಗಿದೆ. ಸಂಜೆ 7 ಗಂಟೆಯಿಂದ ನಾಟಕ ನಡೆಯಲಿದೆ.
ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಲಾಗಿದೆ