- ಸರ್ಕಾರಿ ನೌಕರರ ವೇತನ ಹೆಚ್ಚಳ, ನಿಜವಾಗಿ ಕೆಲಸ ಮಾಡೋರಿಗೆ ಇಲ್ಲ?
- ಹಗಲು ರಾತ್ರಿ ದುಡಿದರೂ ಬದುಕು ಸಾಗಿಸೋದು ಕಷ್ಟ!
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಲಾಗಿದೆ. ಆದ್ರೆ ನಿಜವಾಗಿಯೂ ಅತೀ ಹೆಚ್ಚು ಕೆಲಸ ಮಾಡುವ ದಿನಗೂಲಿ, ಹೊರ ಗುತ್ತಿಗೆ ನೌಕರರ ಗೋಳು ಕೇಳೋರಿಲ್ಲವಾಗಿದೆ.
ಸರ್ಕಾರಿ ನೌಕರರಿಗೆ ಉತ್ತಮ ಸೌಲಭ್ಯ ಇದೆ. ಜೊತೆಗೆ ಅಧಿಕಾರಿಗಳು ಬಹಳಷ್ಟು ಸಂಬಳ ಪಡೆಯುತ್ತಾರೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ದಿನಗೂಲಿ, ಹೊರ ಗುತ್ತಿಗೆ ನೌಕರರಿಗೆ ಇನ್ನು ಸಂಬಳ ಹೆಚ್ಚಿಲ್ಲ. ಜೊತೆಗೆ 3-4 ತಿಂಗಳು ಸಂಬಳವೇ ಸಿಗಲ್ಲ. ಆದರೆ ಸಂಘಗಳು ಗಟ್ಟಿಯಾಗಿಲ್ಲದ ಕಾರಣ ಅವರಿಗೆ ದನಿ ಇಲ್ಲದಾಗಿದೆ.
ವಯಸ್ಸಿನ ಆಧಾರದಲ್ಲಿ ಸರ್ಕಾರಿ ನೌಕರರಿಗೆ 70 ಸಾವಿರ ಸಂಬಳ ಇದ್ದರೆ ಗುತ್ತಿಗೆ ಆಧಾರದ ನೌಕರರಿಗೆ 15 ಸಾವಿರ ಸಂಬಳ ಇರುತ್ತದೆ. ಆದರೆ ಅತೀ ಹೆಚ್ಚು ಕೆಲಸ ಮತ್ತು ಶ್ರಮ ಅರೆಕಾಲಿಕ ನೌಕರರದ್ದಾಗಿದೆ.
ಬಹುತೇಕ ಬಡವರು, ಅಂಗವಿಕಲರು, ಓದಿದವರು ದಿನಗೂಲಿ, ಹೊರ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಆದ್ರೆ ಸರ್ಕಾರ ಅವರಿಗೆ ಯಾವುದೇ ಉತ್ತಮ ಸೌಲಭ್ಯ ನೀಡುತ್ತಿಲ್ಲ ಎಂಬ ಆರೋಪ ಇದೀಗ ವ್ಯಕ್ತವಾಗುತ್ತಿದೆ.
ಎಲ್ಲಾ ಇಲಾಖೆಯಲ್ಲೂ ಕೆಲಸ!
ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ದಿನಗೂಲಿ ಹೊರಗುತ್ತಿಗೆ, ತಾತ್ಕಾಲಿಕವಾಗಿ ನೇಮಕವಾದಂತಹ ನೌಕರರೂ ಸಹ ಕರ್ತವ್ಯ ಮಾಡುತ್ತಿದ್ದು ಖಾಯಂ ನೌಕರರಂತೆಯೇ ದಿನದ 24 ಗಂಟೆಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಪೂರ್ಣ ವೇತನ ಹೋಗಲಿ, ಖಾಯಂ ನೌಕರರ ಯಾವುದೇ ಸೌಲಭ್ಯಗಳನ್ನು ಸರ್ಕಾರ ಒದಗಿಸಿಲ್ಲ. ಹೋಗಲಿ ಇವರ ಜೊತೆಯಲ್ಲೆ ಕೆಲಸ ಮಾಡುವ ಜೊತೆಗಾರ ನೌಕರರೂ ಸಹ ಸಾಥ್ ನೀಡ್ತಾ ಇಲ್ಲ. ಇದರಿಂದ ಒತ್ತಡದ ನಡುವೆ ಮೇಲಿನ ಅಧಿಕಾರಿಗಳ ಆಳಾಗಿ ಕೆಲಸ ಮಾಡುತ್ತಿದ್ದಾರೆ.
ಆದರೆ ರಾಜ್ಯದಲ್ಲಿ ನಡೆದ ಮುಷ್ಕರದಲ್ಲೂ ಮಾತಿಲ್ಲ.
ಬಡ ಕಾರ್ಮಿಕರ ಮೇಲೆ ಕರುಣೆ ಇಲ್ಲವೇ?
ಸರ್ಕಾರ ಬಡಪಾಯಿ ಹಂಗಾಮಿಯವರ ಕಡೆ ಯಾಕೆ ನೋಡಲ್ಲ. ಖಾಯಂ ನೌಕರರ ಅರ್ಧ ಸಂಬಳದಲ್ಲಿ ದಿನ ಪೂರ್ತಿ ದುಡಿಯುವ ಇವರ ಬಗ್ಗೆ ಸರ್ಕಾರ ನೋಡ್ತಾಇಲ್ಲ. ಕೋಟಿಗಟ್ಟಲೆ ಖರ್ಚು ಭರಿಸುವ ಈ ಸರ್ಕಾರಕ್ಕೆ ಹಂಗಾಮಿ ನೌಕರರಿಗೆ ಸಾವಿರ ನೀಡಲು ಸಾಧ್ಯವಿಲ್ಲವೆ?.ಅಲ್ಲದೆ ಇವರಲ್ಲಿ ಕೆಲವರು 60 ವರ್ಷ ತುಂಬಿದ್ದಾರೆ, ಕೆಲವರು ಅಂಗವಿಕಲರಿದ್ದಾರೆ, ಬಹುತೇಕರು ಇದೇ ಸಂಬಳ ನಂಬಿದವರಿದ್ದಾರೆ. ಇವರ ಮೇಲೆ ಸರ್ಕಾರಕ್ಕೆ ಕರುಣೆ ಇಲ್ಲವೇ..?.