- ಅರೋಗ್ಯ ಹಾಗೂ ತುರ್ತು ಸೇವೆ ಎಂದಿನಂತೆ ಲಭ್ಯ
- ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಇಲ್ಲ
- ಸರ್ಕಾರಿ ಶಾಲೆಗೆ ಶಿಕ್ಷಕರು ಬರಲಿಲ್ಲ.. ಸರ್ಕಾರದ ಸಂಧಾನ?
NAMMUR EXPRESS NEWS
ಬೆಂಗಳೂರು: ಸರ್ಕಾರಿ ನೌಕರರ ಸಂಘದ ಬಂದ್ ಹಿನ್ನೆಲೆ ರಾಜ್ಯದ ಬಹುತೇಕ ರಾಜ್ಯ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾತಿ ಆಗದೆ ಜನರಿಗೆ ಭಾರೀ ತೊಂದರೆಯಾಗಿದೆ
ಬಂದ್ ಹಿನ್ನೆಲೆ ಎಲ್ಲೆಡೆ ಮೌನ ಕಾಣುತ್ತಿದೆ.
ಲಿಖಿತ ಹೇಳಿಕೆ ಆಗುವವರೆಗೆ ನಾವು ಹೋರಾಟ ಕೈ ಬಿಡುವುದಿಲ್ಲ ಎಂದು ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹೇಳಿದ್ದಾರೆ.
ಕಂದಾಯ, ಶಿಕ್ಷಣ ಇಲಾಖೆ ಸೇರಿ ಎಲ್ಲಾ ಇಲಾಖೆ ನೌಕರರು ಕೆಲಸಕ್ಕೆ ಗೈರಾಗಿದ್ದಾರೆ. ಈ ನಡುವೆ ಸಿಎಂ ಹಣಕಾಸು ಇಲಾಖೆ ಯ ಸಭೆ ಕರೆದಿದ್ದು ನಿರ್ಧಾರ ಹೊರ ಬೀಳಲಿದೆ. ಸರಕಾರಕ್ಕೆ ನೌಕರರ ನಡೆ ಇಕ್ಕಟ್ಟಿಗೆ ಕಾರಣವಾಗಿದೆ
ಅರೋಗ್ಯ ಹಾಗೂ ತುರ್ತು ಸೇವೆ ಎಂದಿನಂತೆ ಲಭ್ಯ
ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡಿ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ ನೌಕರರ ವರ್ಗದವರು, ಕರ್ನಾಟಕ ರಾಜ್ಯ ಸ ನೌಕರರ ಸಂಘದ ಮುಷ್ಕರದ ಮಾರ್ಗ ಸೂಚಿಯಂತೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು ಮಾನವೀಯತೆ ದೃಷ್ಟಿಯಿಂದ ತಾಲೂಕು ಆಸ್ಪತ್ರೆ, ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ಸೇವೆಗಳಾದ ಎಮರ್ಜೆನ್ಸಿ ಐಸಿಯು, ಡಯಾಲಿಸಿಸ್, ಹೆರಿಗೆ ವಿಭಾಗಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಲು ತೀರ್ಮಾನಿಸಲಾಯಿತು.
ಕಸ ತೆಗೆಯದ ನೌಕರರು!
ಮನೆಯ ಮುಂದೆ ಕಸವನ್ನೂ ತೆಗೆಯದೆ ಪ್ರತಿಭಟನೆಲ್ಲಿ ಭಾಗಿಯಾಗಿರುವ ಪೌರನೌಕರರು ಸರ್ಕಾರಿ ನೌಕರರ ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಬೆಂಬ ಸೂಚಿಸಿದ್ದಾರೆ. ಬೆಳಿಗ್ಗೆನೆ ನಗರದ ಕೆಲ ಬಡಾವಣೆಗಳಲ್ಲಿನ ಮನೆಗಳ ಮುಂದೆ ಕಸದ ಬುಟ್ಟಿಗಳು ಹಾಗೆ ಇರುವುದು ಕಂಡು ಬಂದಿದೆ. ಖಾಸಗಿ ಆಸ್ಪತ್ರೆಗಳ ಕಸಗಳನ್ನ ಹಾಗೆ ಬಿಡಲಾಗಿದೆ.
ಶಾಲೆಗಳು ಓಪನ್ ಇಲ್ಲ, ಪರೀಕ್ಷೆಗೆ ತೊಂದರೆ
ಅನುದಾನ, ಅನುದಾನ ರಹಿತ ಸರ್ಕಾರಿ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರು ಮುಷ್ಕರದಲ್ಲಿ ಭಾಗಿಯಾಗುವುದರಿಂದ ಶಾಲೆ ಕಾಲೇಜುಗಳು ಬಂದ್ ಆಗಲಿವೆ. ಅಲ್ಲದೆ ಪ್ರಥಮ ಪಿಯುಸಿ ಸೈನ್ಸ್ ಪರೀಕ್ಷೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ತುಟಿಕ್ ಪಿಟಿಕ್ ಎನ್ನದ ರಾಜಕಾರಣಿಗಳು!
7ನೇ ವೇತನಕ್ಕೆ ಅಗ್ರಹಿಸಿ ರಾಜ್ಯದ ಸರ್ಕಾರಿ ವ್ಯವಸ್ಥೆ ಮಲಗಿದದೆ. ಕೋಟಿ ಕೋಟಿ ಜನಕ್ಕೆ ಇದರಿಂದ ತೊಂದರೆ ಆಗುತ್ತಿದೆ. ಆದರೆ ಸರ್ಕಾರ, ಜನ ನಾಯಕರು ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ.
ಬಿಜೆಪಿ ಸರ್ಕಾರದ ಭರವಸೆ ಈಡೇರಿಲ್ಲ!
ಕಳೆದ 1 ವರ್ಷದ ಹಿಂದೆ ಸಿಎಂ ವೇತನ ಪರಿಷ್ಕರಣೆ ಭರವಸೆ ನೀಡಿದ್ದರು. ಆದರೆ ಈ ತನಕ ಸಿಎಂ ಭರವಸೆ ಈಡೇರಿಲ್ಲ. ವೇತನ ಆಯೋಗ ಪರಿಶೀಲನೆ ಭರವಸೆ ನೀಡಿದೆ. ಆದರೆ ಎಲ್ಲವೂ ಚರ್ಚೆ ಹಂತದಲ್ಲಿ ಇದೆ. ನಾವು ಸರ್ಕಾರಕ್ಕೆ ಪ್ರತಿಭಟನೆ ಬಗ್ಗೆ ಗಮನಕ್ಕೆ ತಂದಿದ್ದೇವೆ. ಆದರೂ ಸರ್ಕಾರ ನಮ್ಮ ಬೇಡಿಕೆ ಬಗ್ಗೆ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ರಾಜ್ಯದ ಎಲ್ಲ ಸರ್ಕಾರಿ ನೌಕರರು ಒಗಟ್ಟಾಗಿ ಅನಿರ್ಧಿಷ್ಟ ಅವಧಿ ಹೋರಾಟ ಮಾಡಬೇಕು. ಎಲ್ಲ ವೃಂದ ಸಂಘಗಳು ಕೈಜೋಡಿಸಕೆಂದು ಷಡಕ್ಷರಿ ಮನವಿ ಮಾಡಿದ್ದರು.