ವಿಶ್ವ ಮಟ್ಟದಲ್ಲಿ ರಾಜ್ಯದ ಅಂಧ ಓಟಗಾರ್ತಿ ಸಾಧನೆ!
– ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ರಕ್ಷಿತಾ ರಾಜುಗೆ 5ನೇ ಸ್ಥಾನ
– ಮಲೆನಾಡಿನ ಕೊಟ್ಟಿಗೆಹಾರದ ಆಟಗಾರ್ತಿ
– ಇನ್ನಷ್ಟು ಸೌಲಭ್ಯ ಸಿಕ್ಕರೆ ಸಾಧನೆ ಸಾಧ್ಯತೆ
NAMMUR EXPRESS NEWS
ಕೊಟ್ಟಿಗೆಹಾರ( ಮೂಡಿಗೆರೆ): ಕರ್ನಾಟಕದ ಅಂಧ ಓಟಗಾರ್ತಿ ರಕ್ಷಿತಾ ರಾಜು ಪ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಜುಲೈ6ರಿಂದ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ ನಲ್ಲಿ ಭಾರತ ಪ್ರತಿನಿಧಿಸಿ 5ನೇ ಸ್ಥಾನ ಪಡೆದಿದ್ದಾರೆ.
ಕೀನ್ಯಾ, ರಷ್ಯಾ, ಪೋಲೆಂಡ್, ಚೀನಾ, ಭಾರತ ಕ್ರೀಡಾಪಟುಗಳು ಭಾಗವಹಿಸಿದ್ದು ಜು.8 ರಂದು ಶನಿವಾರ ನಡೆದ ಮಹಿಳೆಯರ 1500ಮೀ ಕ್ರೀಡಾಕೂಟದಲ್ಲಿ ರಕ್ಷಿತಾರಾಜು ಟಿ11ವಿಭಾಗದಲ್ಲಿ ( 5:26.47ಸೆಕೆಂಡುಗಳಲ್ಲಿ )ಮೂರನೇ ಸ್ಥಾನ ಪಡೆದು ಪೈನಲ್ ಗೆ ಪ್ರವೇಶಿಸಿದ್ದರು.
ಆದರೆ ಜು10 ಸೋಮವಾರದಂದು ನಡೆದ 1500ಮೀ ಓಟದಲ್ಲಿ (5:24.95 ಸೆಕೆಂಡುಗಳಲ್ಲಿ)ರಕ್ಷಿತಾ 5 ನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಅವರ ಕೋಚ್ ರಾಹುಲ್ ಬಾಲಕೃಷ್ಣ ತಿಳಿಸಿದ್ದಾರೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?
HOW TO APPLY : NEET-UG COUNSELLING 2023