ತೆಪ್ಪೋತ್ಸವ ಸಂಭ್ರಮಕ್ಕೆ 1 ಲಕ್ಷ ಜನ ಸೇರುವ ನಿರೀಕ್ಷೆ!
– ತೆಪ್ಪೋತ್ಸವ ಸಂಭ್ರಮ ವೀಕ್ಷಿಸಲು ರಾಜ್ಯದ ವಿವಿಧ ಮೂಲೆಯಿಂದ ಜನ
– ತೀರ್ಥಹಳ್ಳಿಯಲ್ಲಿ ಜನರೇ ಹುಷಾರ್
– ಕಂಡ ಕಂಡಲ್ಲಿ ಪಾರ್ಕಿಂಗ್ ಮಾಡುವ ಹಾಗೆ ಇಲ್ಲ, ಕಳ್ಳರ ಬಗ್ಗೆ ಎಚ್ಚರ
NAMMUR EXPRESS NEWS
ತೀರ್ಥಹಳ್ಳಿ :- ತೀರ್ಥಹಳ್ಳಿ ಪ್ರಸಿದ್ಧ ಶ್ರೀರಾಮೇಶ್ವರ ದೇವರ ಎಳ್ಳಮಾವಾಸೆ ಜಾತ್ರೆಯ ಕೊನೆಯ ದಿನದ ತೆಪ್ಪೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸೇರಿ ಮಲೆನಾಡಿನ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಈಗಾಗಲೇ 50,000ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು. ಸಂಜೆಯ ವೇಳೆಗೆ 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈಗಾಗಲೇ ಪೊಲೀಸ್ ಇಲಾಖೆ ಭದ್ರತೆ ವಹಿಸಲಾಗಿದ್ದು, ಪಾರ್ಕಿಂಗ್ ವ್ಯವಸ್ಥೆಗಳನ್ನು ಕೂಡ ರಸ್ತೆಯ ಪಕ್ಕದಲ್ಲಿ ಮಾಡಲಾಗಿದೆ. ತೀರ್ಥಹಳ್ಳಿ ಪಟ್ಟಣದ ವಿವಿಧ ಮೈದಾನಗಳಲ್ಲಿ ವಾಹನಗಳನ್ನ ನಿಲ್ಲಿಸಿದರೆ ಸೂಕ್ತ ಎಂದು ಪೋಲೀಸ್ ಇಲಾಖೆ ತಿಳಿಸಿದೆ. ಅದಲ್ಲದೆ ಲಕ್ಷಾಂತರ ಜನ ಸೇರುವ ಈ ತೆಪ್ಪೋತ್ಸವದಲ್ಲಿ ಜನ ಜಾಗ್ರತೆ ವಹಿಸಲು ಕೋರಲಾಗಿದೆ. ಇನ್ನು ಜಾತ್ರೆಯಲ್ಲಿ ಕಳ್ಳರು, ಸರಗಳ್ಳರೂ ಇರುವುದರಿಂದ ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗೃತಿ ವಹಿಸಲು ಪೊಲೀಸ್ ಇಲಾಖೆ ಮನವಿ ಮಾಡಿದೆ. ಈಗಾಗಲೇ ತೆಪ್ಪೋತ್ಸವಕ್ಕೆ ಸಿದ್ಧತೆ ನಡೆದಿದ್ದು, ಎಲ್ಲಾ ರೀತಿಯ ಪಟಾಕಿಗಳನ್ನು ಹಾಗೂ ತೆಪ್ಪವನ್ನು ಸಿದ್ದ ಮಾಡಲಾಗಿದೆ. ನದಿಯ ಪಕ್ಕದಲ್ಲಿ ಜನ ಜಾಗೃತಿಯಿಂದ ಸಂಚರಿಸಲು ಮನವಿ ಮಾಡಲಾಗಿದೆ.