ಜಾತ್ರೆಯ 2 ಗಂಟೆಗಳ ಲಾಭ ಯೋಧರಿಗೆ ಸಮರ್ಪಣೆ!
– ತೀರ್ಥಹಳ್ಳಿ ಜಾತ್ರೆಯಲ್ಲಿ ಮಾನವೀಯ ಸೇವೆಯ ಕಾರ್ಯಕ್ರಮ ಉದ್ಘಾಟನೆ
– ಸ್ವಪ್ನ ಫ್ಯಾನ್ಸಿ ಸ್ಟೋರ್ ಮಾಲಿಕರಾದ ಶಿವಾನಂದ ಅವರ ದೇಶ ಸೇವೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಆಗುಂಬೆ ಮಾರ್ಗ ಬಸ್ ನಿಲ್ದಾಣದ ಸ್ವಪ್ನ ಫ್ಯಾನ್ಸಿ ಸ್ಟೋರ್ ಮಾಲಿಕರಾದ ಶಿವಾನಂದ ಬಾಳೆಬೈಲು ಇವರು ಎಳ್ಳಮಾವಾಸ್ಯೆ ಜಾತ್ರೆ ಪ್ರಯುಕ್ತ ರಥಬೀದಿಯ ಶ್ರೀರಾಮೇಶ್ವರ ಸೌಹಾರ್ದ ಸೊಸೈಟಿ ಮುಂಭಾಗ ಸಣ್ಣ ಫ್ಯಾನ್ಸಿ ಐಟಮ್ ಅಂಗಡಿ ತೆರೆದಿದ್ದು, ಪ್ರತಿದಿನದ ಎರಡು ಘಂಟೆಗಳ ವ್ಯಾಪಾರದ ಮೊತ್ತವನ್ನು ಇತ್ತೀಚಿಗೆ ಕಾಶ್ಮೀರ ಕಣಿವೆಯಲ್ಲಿ ಅಪಘಾತಕ್ಕೀಡಾಗಿ ವೀರ ಮರಣವನ್ನಪ್ಪಿದ ನಮ್ಮ ದೇಶ ಕಾಯುವ 4 ಜನ ಸೇನಾನಿಗಳ ಕುಟುಂಬಕ್ಕೆ ನೀಡುವ ಮಹಾತ್ಕಾರ್ಯ ಮಾಡಿರುತ್ತಾರೆ.
ನಮಗೆ ಅನ್ನ ನೀಡಿರುವ ರೈತರು , ಯಾವುದೇ ಭಯವಿಲ್ಲದೆ ನಿದ್ದೆ ಮಾಡಲು, ನೆಮ್ಮದಿಯ ಜೀವನವನ್ನು ಗಳಿಸಲು ಕಾರಣಕರ್ತರಾದ ಯೋಧರು ಅವರ ಸೇವೆ ನಮ್ಮ ಕರ್ತವ್ಯ ಎಂದು ಆರ್ ಎಸ್ ಎಸ್ ಮುಖಂಡರಾದ ದಿನೇಶ್ ಭಾರತೀಪುರ ಅವರು ಹೇಳಿದರು. ವೀರ ಯೋಧರಾದ ಮಹೇಶ್, ದಯಾನಂದ, ಧರ್ಮರಾಜ, ಅನೂಪ್ ಅವರು ಇತ್ತೀಚಿಗೆ ಗಡಿ ರಕ್ಷಡೆಗೆ ತೆರಳುತ್ತಿದ್ದಾಗ ವೀರಮರಣವನ್ನು ಹೊಂದಿರುವ ನಾಲ್ವರ ಕುಟುಂಬಕ್ಕೆ ಸಹಾಯಾರ್ಥವಾಗಿ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯ ಮಳಿಗೆಯಲ್ಲಿ ಪ್ರತಿದಿನದ ಆರಂಭದ 2 ಗಂಟೆಗಳ ವ್ಯಾಪಾರದ ಸಂಪೂರ್ಣ ಮೊತ್ತವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ಅರ್ಪಿಸಲಾಗುವುದು ಎಂದು ಸ್ವಪ್ನ ಫ್ಯಾನ್ಸಿ ಸ್ಟೋರ್ ಮಾಲಿಕರು ಹೇಳಿದರು. ನಮ್ಮ ದೇಶದಲ್ಲಿ ಬಹಳಷ್ಟು ವರ್ಷಗಳಿಂದ ಯುದ್ಧಗಳು ನಡೆಯುತ್ತಲೇ ಇವೆ ಹುತಾತ್ಮರಾದ ಸೈನಿಕರಿಗೋಸ್ಕರ ಈ ಎರಡು ಗಂಟೆಗಳನ್ನು ಮೀಸಲಿಡುತ್ತಿದ್ದೇವೆ, ವ್ಯಾಪಾರದಲ್ಲಿ ಈ ಎರಡು ಗಂಟೆಗಳನ್ನು ಅವರಿಗೆ ಸಲ್ಲಿಸಬೇಕು ಎಂಬ ಉದ್ದೇಶ ನಮ್ಮದು. ಪ್ರಾರಂಭದ ಎರಡು ಗಂಟೆಗಳ ಕಾಲ ಅದೆಷ್ಟೇ ಲಾಭ ಗಳಿಸಿದರೂ ಅದನ್ನು ಯೋಧರಿಗೆ ಸಲ್ಲಿಸುತ್ತೇವೆ ಎರಡು ಗಂಟೆಯಲ್ಲಿ ನಡೆದ ವ್ಯಾಪಾರದ ಲಾಭವನ್ನು ನಾವು ಪಡೆಯದೆ ಯೋಧರಿಗೆ ಮೀಸಲಿಟ್ಟ ಡಬ್ಬಿಯಲ್ಲಿ ಶೇಖರಿಸಿ ಇಡಲಾಗುವುದು ಅದನ್ನು ಯೋಧರ ಕುಟುಂಬಕ್ಕೆ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು. ದೇಶರಕ್ಷಣೆ ಮಾಡುವ ಯೋಧರ ಕುಟುಂಬಕ್ಕೆ ಧೈರ್ಯ ತುಂಬುವ ಈ ಮಹತ್ಕಾರ್ಯದ ಸರಳ ಉದ್ಟಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯ ನಿರ್ವಾಹಕ ಭಾರತೀಪುರ ದಿನೇಶ್ ಭಟ್, ಡಾII ಜೀವಂಧರ್ ಜೈನ್ ರಾಮೇಶ್ವರ ಜಾತ್ರಾ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಡಾ.ಸುಂದರೇಶ್ ಪಟ್ಟಣ ಪಂಚಾಯ್ತಿ ಸದಸ್ಯೆ ಜ್ಯೋತಿ ಮೋಹನ್ ಇನ್ನಿತರರು ಉಪಸ್ತಿತರಿದ್ದರು.