ತೀರ್ಥಹಳ್ಳಿಯ ವಾಗ್ದೇವಿ ಸಂಸ್ಥೆಗೆ 25 ವರ್ಷದ ರಂಗು
– ಹತ್ತು ಹಲವು ಕಾರ್ಯಕ್ರಮಗಳ ಆಯೋಜನೆ
– ಹೆಸರಾಂತ ವ್ಯಕ್ತಿಗಳಿಂದ ಮಾರ್ಗದರ್ಶನ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕುವೆಂಪು ರಸ್ತೆಯ ವಾಗ್ದೇವಿ ಶಾಲೆಗೆ 25 ವರ್ಷ ತುಂಬಿದ ಸಂಭ್ರಮದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತೀರ್ಥಹಳ್ಳಿ ವಾಗ್ದೇವಿ ಶಾಲೆಯ ಕಚೇರಿಯಲ್ಲಿ ನ. 26ರಂದು ವಾಗ್ದೇವಿ ಸಂಸ್ಥೆಯ ಸತ್ಪಥ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಕೆ.ಎಸ್.ಜಗದೀಶ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ತೀರ್ಥಹಳ್ಳಿಯ ವಾಗ್ದೇವಿ ಸಂಸ್ಥೆಗೆ 25 ವರ್ಷದ ಸಂಭ್ರಮದಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
1999ರಲ್ಲಿ ವಾಗ್ದೇವಿ ಸಂಸ್ಥೆಯ ಸ್ಥಾಪನೆಯಾಗಿದ್ದು, ಕಾರ್ಯಕ್ರಮದ ಆಚರಣೆಯ ಪ್ರಯುಕ್ತ ಸಂಸ್ಥೆಯ ಮಕ್ಕಳಿಗೆ ಸ್ಪೂರ್ತಿ ತುಂಬುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ವಾಗ್ದೇವಿ ಸಂಸ್ಥೆ 25ನೇ ವರ್ಷದ ಪ್ರಯುಕ್ತ ನವೆಂಬರ್ 26, ನವೆಂಬರ್ 27, ನವೆಂಬರ್ 29 , ಡಿಸೆಂಬರ್ 5, ಡಿಸೆಂಬರ್ 6 ಹಾಗೂ ಡಿಸೆಂಬರ್ 7 ರಂದು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಪ್ರತಿ ವರ್ಷವೂ ಮಕ್ಕಳಿಗೆ ಮಾರ್ಗದರ್ಶಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಸಂಸ್ಥೆಯು ಮಾಡುತ್ತಾ ಬಂದಿದೆ. ನ್ಯಾಯಾಂಗಕ್ಕೆ ಸಂಬಂಧ ಪಟ್ಟ ವಿಚಾರಕ್ಕೆ ನ್ಯಾಯಾಧೀಶರನ್ನು, ಕಾನೂನಿಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆಯವರನ್ನು, ಕರೆ ತಂದು ಮಕ್ಕಳಿಗೆ ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡುತ್ತೇವೆ. ವಿಜ್ಞಾನ ವಾಣಿಜ್ಯ ವಿಭಾಗಕ್ಕಾಗಿ ಹೆಸರಾಂತ ವ್ಯಕ್ತಿಯಿಂದ ಮಾರ್ಗದರ್ಶನ ಮಾಡಲಾಗುತ್ತದೆ.
ಶಿಕ್ಷಣದ ಬಗ್ಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಉಪಯೋಗವಾಗುವ ರೀತಿಯಲ್ಲಿ ಮಾಹಿತಿಯನ್ನು ನೀಡುವುದರ ಜೊತೆಗೆ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕೋದ್ಯಮದ ಬಗ್ಗೆಯೂ ಜ್ಞಾನವನ್ನು ತಿಳಿಸಬೇಕು. ಇದರ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸತ್ಪಥ ಎಜುಕೇಶನ್ ಟ್ರಸ್ಟ್ ಖಜಾಂಚಿ ಶಶಿಧರ್ ಹೆಚ್ ಪಿ ಉಪಸ್ಥಿತರಿದ್ದರು.