ತೀರ್ಥಹಳ್ಳಿ ಟಾಪ್ ನ್ಯೂಸ್
ಡಿಜೆಗೆ ಡ್ಯಾನ್ಸ್ ಮಾಡುತ್ತಲೇ ಕುಸಿದ ಬಿದ್ದ ವ್ಯಕ್ತಿ ಸಾವು!
– ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿಯಲ್ಲಿ ಘಟನೆ
ಡಿಜೆ ಲೈಟಿಗೆ ಅನೇಕರ ಮೊಬೈಲ್ ಡಮಾರ್!
– ತೀರ್ಥಹಳ್ಳಿ ಬಸ್ ಸ್ಟಾಂಡ್ ಗಣಪತಿ ವಿಸರ್ಜನೆ ವೇಳೆ ಘಟನೆ
ತೀರ್ಥಹಳ್ಳಿಯಲ್ಲಿ ಉಳಿದಿದ್ದು ಇನ್ನು 2 ಗಣಪತಿ ಮಾತ್ರ!
– ಛತ್ರಕೇರಿ, ಕೋಳಿಕಾಲು ಗುಡ್ಡ ಗಣಪತಿ ಉತ್ಸವ
NAMMUR EXPRESS NEWS
ತೀರ್ಥಹಳ್ಳಿ ಪಟ್ಟಣದ ಪ್ರತಿಷ್ಠಿತ ಗಣಪತಿಗಳಲ್ಲಿ ಒಂದಾದ ಮುಖ್ಯ ಬಸ್ ನಿಲ್ದಾಣದ ಅದ್ದೂರಿ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಭಾನುವಾರ ರಾತ್ರಿವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆದಿದೆ. ಅಚ್ಚರಿ ಎಂದರೆ ದಗಣೇಶ ವಿಸರ್ಜನೆ ವೇಳೆ ಡಿಜೆಯ ಹೈ ಪವರ್ ಲೈಟಿಗೆ ಹಲವಾರು ಮೊಬೈಲ್ ಗಳು ಹಾನಿಯಾಗಿದೆ ಎಂಬ ಬಗ್ಗೆ ಚರ್ಚೆ ಆಗುತ್ತಿದೆ.
ಫೋಟೋ ಹಾಗೂ ವಿಡಿಯೋ ತೆಗೆಯುತ್ತಿದ್ದ ವೇಳೆ ಮೊಬೈಲ್ ಡಿಸ್ಪ್ಲೇ ಏಕಾಏಕಿ ಹೋಗಿದೆ. ಲೇಸರ್ ಕಿರಣಗಳಿಂದ ಹಲವಾರು ಮೊಬೈಲ್ ಕ್ಯಾಮೆರಾ ಲೆನ್ಸ್ ಗಳನ್ನು ಹಾನಿಗೊಳಿಸಿದೆ. ಕೆವರಿಗೆ ಇದು ತತ್ತಕ್ಷಣ ಗಮನಕ್ಕೆ ಬರದೇ ತುಂಬಾ ಹೊತ್ತು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದರಿಂದ ಹಲವಾರು ಜನರ ಮೊಬೈಲ್ ಡಿಸ್ಪ್ಲೇ ಸಹ ಹಾನಿಯಾಗಿದೆ. ಹತ್ತಾರು ಐಫೋನ್ ಗಳು ಹಾಗೂ ಇತರ ಫೋನ್ ಹಾನಿಯಾಗಿರುವ ಬಗ್ಗೆ ವರದಿ ಆಗಿದೆ.
ಬೇಗುವಳ್ಳಿಯಲ್ಲಿ ಡಿಜೆಗೆ ನೃತ್ಯ ಮಾಡುತ್ತಿರುವಾಗ ಕುಸಿದು ಬಿದ್ದು ಮರಣ
ಬೇಗುವಳ್ಳಿ: ಗಣೇಶ ವಿಸರ್ಜನೆಯ ವೇಳೆ ಡಿಜೆಗೆ ನೃತ್ಯ ಮಾಡುತ್ತಿರುವಾಗ ವ್ಯಕ್ತಿಯೋರ್ವರು ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದು ಆಸ್ಪತ್ರೆ ಹೋಗುವಾಗ ಮೃತಪಟ್ಟಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿಯಲ್ಲಿ ನಡೆದಿದೆ. ಬಿದರಹಳ್ಳಿ ಶಾಮಣ್ಣ(66) ಮೃತರು.ಇವರು ಬೇಗುವಳ್ಳಿ ಗಣೇಶನ ವಿಸರ್ಜನೆಯ ವೇಳೆ ನೃತ್ಯ ಮಾಡುತ್ತಿರುವ ವೇಳೆ ಏಕಾಏಕಿ ಕುಸಿದು ಬಿದ್ದು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತೀರ್ಥಹಳ್ಳಿಯಲ್ಲಿ ಉಳಿದಿದ್ದು ಇನ್ನು 2 ಗಣಪತಿ ಮಾತ್ರ!
ತೀರ್ಥಹಳ್ಳಿ ತಾಲೂಕಿನಲ್ಲಿ ಗಣೇಶ ಉತ್ಸವದ ಸಂಭ್ರಮ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 229 ಗಣಪತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಪೈಕಿ ಮೊದಲ ದಿನವೇ 64, ಎರಡನೇ ದಿನ 1, ಮೂರನೇ ದಿನ 123, 5ನೇ ದಿನ 33, 7ನೇ ದಿನ 4, 9ನೇ ದಿನ 2 ಹಾಗೂ ಸೆ. 19ರಂದು ಛತ್ರಕೇರಿ, ಸೆ. 21ರಂದು ಕೋಳಿಕಾಲು ಗುಡ್ಡ ಗಣಪತಿ ವಿಸರ್ಜನೆ ನಡೆಯಲಿದೆ.
ಕೋಳಿಕಾಲು ಗುಡ್ಡದಲ್ಲಿ ಇಂದು ವಿಠಲ ನಗರ ತಂಡದಿಂದ ಡಾನ್ಸ್, ಛತ್ರಕೇರಿಯಲ್ಲಿ ಸಂಜೆ ಖ್ಯಾತ ಹಾಡುಗಾರ ಶಶಿಕುಮಾರ್ ಕಾರಂತ ತಂಡದಿಂದ ಸುಗಮ ಸಂಗೀತ ಇದೆ.