ತೀರ್ಥಹಳ್ಳಿಯಲ್ಲಿ ಆಯುಧ ಪೂಜೆ, ವಿಜಯದಶಮಿ ಸಂಭ್ರಮ
– ಪಟ್ಟಣದಲ್ಲಿ ಜನವೋ ಜನ: ಹೂವು, ಹಣ್ಣಿಗೆ ಡಿಮ್ಯಾಂಡ್
– ಆಯುಧ ಪೂಜೆಗೆ ವಾಹನ ಸ್ಟಾಂಡ್, ಅಂಗಡಿಗಳು ಸ್ವಚ್ಛ
– ಸರ್ಕಾರಿ ಕಚೇರಿಗಳಲ್ಲಿ ಇಂದೇ ಆಯುಧ ಪೂಜೆ ಆಚರಣೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸೇರಿ ಎಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ತೀರ್ಥಹಳ್ಳಿ ದಸರಾಕ್ಕೆ ಈ ಬಾರಿ ವಿಶೇಷ ಮೆರುಗು ನೀಡಲಾಗಿದೆ. ರಾಜ್ಯ ಮಟ್ಟದ ಕವಿಗೋಷ್ಠಿ ಗುರುವಾರ ನಡೆದಿದ್ದು, ಸಂಜೆ ಕುಶಾವತಿ ಪಾರ್ಕಲ್ಲಿ ಯುವ ದಸರಾ ನಡೆಯಲಿದೆ.
ಆಯುಧ ಪೂಜೆ ಹಾಗೂ ವಿಜಯದಶಮಿಯಂದು ಕುಶಾವತಿ ಪಾರ್ಕಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ದಸರಾ ಹಬ್ಬಕ್ಕೆ ಇಡೀ ತೀರ್ಥಹಳ್ಳಿ ಸಿಂಗಾರಗೊಂಡಿದೆ.
ನೀರಿನ ಶುದ್ಧೀಕರಣದ ಘಟಕ ಪಂಪ ಹೌಸ್ನಲ್ಲಿ ಆಯುಧ ಪೂಜೆ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಬಾಳೆ ಬೈಲಿನಲ್ಲಿರುವ ನೀರಿನ ಶುದ್ಧೀಕರಣದ ಘಟಕ ಪಂಪ ಹೌಸ್ನಲ್ಲಿ ಆಯುಧ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ, ಹಾಗೂ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತೀರ್ಥಹಳ್ಳಿ ತಾಲೂಕು ಕಚೇರಿ, ತಾಲೂಕು ಪಂಚಾಯತ್ ಅಲ್ಲಿ ಪೂಜೆ
ತೀರ್ಥಹಳ್ಳಿ ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯತ್ ಅಲ್ಲಿ ವಿಶೇಷ ಪೂಜೆ ನಡೆಯಿತು. ತಹಸೀಲ್ದಾರ್ ಜಕ್ಕಣ್ಣಗೌಡ, ಇಒ ಶೈಲಾ, ತಾಪಂ ಮ್ಯಾನೇಜರ್ ರಾಘವೇಂದ್ರ ಸೇರಿ ಸಿಬ್ಬಂದಿ ಇದ್ದರು.
ಹೂವು, ಹಣ್ಣು, ಬಟ್ಟೆ ಖರೀದಿ ಜೋರು
ತೀರ್ಥಹಳ್ಳಿ ಪಟ್ಟಣದಲ್ಲಿ ಹೂವು, ಹಣ್ಣು ಬಟ್ಟೆ ಖರೀದಿ ಜೋರಾಗಿದೆ. ಶಿವಮೊಗ್ಗ ಬಸ್ ನಿಲ್ದಾಣದಿಂದ ಆಗುಂಬೆ ಬಸ್ ನಿಲ್ದಾಣದವರೆಗೆ ಹೂ ಅಂಗಡಿಗಳು ಕಾಣಿಸುತ್ತಿವೆ.
ಆಟೋ, ಕಾರು ಸ್ಟಾಂಡ್, ಅಂಗಡಿಗಳು ಆಯುಧ ಪೂಜೆಗೆ ಸಿದ್ಧ
ತೀರ್ಥಹಳ್ಳಿಯ ಆಟೋ, ಕಾರು, ಗೂಡ್ಸ್ ನಿಲ್ದಾಣ ಸ್ವಚ್ಛತೆ ಮಾಡಿ ಆಯುಧ ಪೂಜೆಗೆ ಸಿದ್ಧ ಮಾಡಲಾಗಿದೆ. ಇನ್ನು ಅಂಗಡಿಗಳು ಕೂಡ ಪೂಜೆ ಮಾಡಲು ಸ್ವಚ್ಛ ಮಾಡಲಾಗುತ್ತಿದೆ.