ತೀರ್ಥಹಳ್ಳಿ ತುಂಗಾ ನದಿಯಲ್ಲಿ ಬೋಟಿಂಗ್ ಜೋರು!
– ಡಿ.29ರಿಂದ ಜ.2 ವರೆಗೆ ಬೋಟಿಂಗ್ ಉತ್ಸವ
– ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವದಲ್ಲಿ ತುಂಗಾ ನದಿಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದು ಜಾತ್ರೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ. ಕಳೆದ ವರ್ಷ ಕೂಡ ಈ ಬೋಟಿಂಗ್ ಉತ್ತಮ ಸ್ಪಂದನೆ ಸಿಕ್ಕಿತು. ಈ ವರ್ಷ ವಿಶೇಷವಾಗಿ ಜನಸಾಗರವೇ ಸೇರುತ್ತಿದ್ದಾರೆ. ತುಂಗಾ ನದಿಯ ಸಂಪೂರ್ಣ ವೀಕ್ಷಣೆಯನ್ನು ಬೋಟಿಂಗ್ ಅಲ್ಲಿ ಮಾಡಬಹುದು. ಇದು ಒಂದು ರೋಮಾಂಚನಕಾರಿ ಆಟವಾಗಿದೆ. ಈ ಬೋಟಿಂಗ್ ನಲ್ಲಿ ಅತಿ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ. ತುಂಗಾ ನದಿಯಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ದಿ. 29ನೇ ಭಾನುವಾರದಿಂದ ಜ.2 ಗುರುವಾರದವರೆಗೆ ಮಾಡಲಾಗಿದೆ.
ತೀರ್ಥಹಳ್ಳಿಯ ತುಂಗಾ ತೀರದಲ್ಲಿ ಬೋಟಿಂಗ್ ‘ ಅಡ್ವೆಂಚರ್ಸ್’ ಮತ್ತು ತುಂಗಾ ವಾಟರ್ ಸ್ಪೋರ್ಟ್ಸ್ ತೀರ್ಥಹಳ್ಳಿ ಮುಂದಾಗಿದ್ದು ತೀರ್ಥಹಳ್ಳಿಯಲ್ಲಿ ಬೋಟಿಂಗ್ ಉತ್ಸವವನ್ನು ಪ್ರಸ್ತುತ ಪಡಿಸುತ್ತಿದೆ. ಎಲ್ಲ ವಯಸ್ಸಿನವರೂ ಬೋಟಿಂಗ್ ಥ್ರಿಲ್ ಅನುಭವಿಸಬಹುದಾಗಿದೆ. ಮಕ್ಕಳು ಮತ್ತು ಫ್ಯಾಮಿಲಿಗೆ ಇದೊಂದ್ ಎಂಟರ್ಟೈನ್ಮೆಂಟ್ ಆಗಿದೆ. ತುಂಗಾ ನದಿ ನೀರಿನಲ್ಲಿ ಬೋಟಿಂಗ್ ಮಾಡುತ್ತಾ ಸುತ್ತಲಿನ ಪ್ರಕೃತಿ ಸೌಂದರ್ಯ ಸವಿಯುವುದರೊಂದಿಗೆ ಒಂದು ಅಡ್ವೆಂಚರಸ್ ಅನುಭವ ಹೊಂದಲು ಹಾಗೂ ಇದರೊಂದಿಗೆ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯ್ತಿ (ಶಾಲಾ-ಕಾಲೇಜು ಗುರುತಿನ ಪತ್ರ ಕಡ್ಡಾಯ).