ಛೇ..ರಾಮೇಶ್ವರ: ಜಾತ್ರೆ ರಾಜಕೀಯ!
– ಸಮಿತಿ ಗೊಂದಲ: ದೇವರ ಜಾತ್ರೆಯಲ್ಲೂ ರಾಜಕೀಯ
– ದೇವರ ಹೆಸರಲ್ಲಿ ಕಿತ್ತಾಟ: ಭಕ್ತರೆ ಜಾತ್ರೆ ಮಾಡ್ತಾರೆ ಬಿಟ್ಟು ಬಿಡಿ!
NAMMUR EXPRESS NEWS
ತೀರ್ಥಹಳ್ಳಿ: ಐತಿಹಾಸಿಕ ತೀರ್ಥಹಳ್ಳಿ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಜಾತ್ರೆ ಸಂಬಂಧ ಕರೆದ ಒಂದು ಸಭೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿ ಕೊನೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಆಗಲಿಲ್ಲ. ಜಾತ್ರೆ ಸಂಬಂಧ ನಡೆದ ಪೂರ್ವಭಾವಿ ಸಭೆ ಭಾರಿ ಗದ್ದಲಕ್ಕೆ ವೇದಿಕೆ ಕಲ್ಪಿಸಿತು. ಸಂಚಾಲಕರು ಯಾರಾಗಬೇಕು ಎಂಬ ವಿಚಾರಕ್ಕೆ ಪೈಪೋಟಿ ನಡೆಯಿತು. ಹಿಂದಿನ ಲೆಕ್ಕಪತ್ರ ಸಲ್ಲಿಕೆ ಸಮರ್ಪಕವಾಗಿ ಆಗಿಲ್ಲ ಎಂಬ ಕಾರಣಕ್ಕೆ ಪರಸ್ಪರರ ಮಾತಿನ ಚಕಮಕಿ ನಡೆಯಿತು. ತಾ ಮೇಲು ನಾ ಮೇಲು ಎಂದು ಕೂಗಿದರು. ಗುರಾಯಿಸಿದರು. ರಾಜಕೀಯ ಮೇಲಾಟ ಕೂಡ ನಡೆಯಿತು. ಇದೆಲ್ಲದರ ನಡುವೆ ತೀರ್ಥಹಳ್ಳಿ ಇಬ್ಬರು ನಾಯಕರಾದ ಶಾಸಕರಾದ ಆರಗ ಜ್ಞಾನೇಂದ್ರ ಮತ್ತು ಸಹಕಾರ ನಾಯಕರಾದ ಮಂಜುನಾಥ ಗೌಡ ತಾವೇ ನಿಂತು ಮಾಡುವುದಾಗಿ ತಿಳಿಸಿದರು. ಅಧಿಕಾರಿಗಳು ಮೂಕ ಪ್ರೇಕ್ಷಕರಾದ್ರು. ಇದೆಲ್ಲ ನಡೆದಿದ್ದು ತೀರ್ಥಹಳ್ಳಿಯಲ್ಲಿ ಅಂದರೆ ನಾಚಿಕೆಯಾಗುತ್ತೆ ಅಂತ ಜನ ಪಟ್ಟಣದ ಹೋಟೆಲ್ ಅಲ್ಲಿ ಟೀ ಕುಡಿಯುತ್ತಾ ಮಾತನಾಡುವಂತಾಯಿತು. ರಾಮೇಶ್ವರನ ಹೆಸರಲ್ಲಿ ರಾಜಕೀಯ ಬೇಡ, ನಾವೇ ಭಕ್ತರು ಮಾಡುತ್ತೇವೆ ಎಂದು ಭಕ್ತರು ಅಲ್ಲಲ್ಲಿ ಮಾತನಾಡುತ್ತಿದ್ದರು.