ಸೀಬಿನಕೆರೆ ಶಾಲೆಯಲ್ಲಿ ಮಕ್ಕಳ ಸಂಭ್ರಮ!
– ಕೃಷ್ಣ ವೇಷ ಮತ್ತು ಛದ್ಮವೇಷ: ಮಕ್ಕಳ ಪ್ರತಿಭೆಗೆ ಸಾಕ್ಷಿ
– ಗಮನ ಸೆಳೆದ 70ಕ್ಕೂ ಹೆಚ್ಚು ಮಕ್ಕಳ ವಿವಿಧ ವೇಷ
NAMMUR EXPRESS NEWS
ತೀರ್ಥಹಳ್ಳಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀರ್ಥಹಳ್ಳಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೀಬಿನಕೆರೆ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ಶಾಲೆಯಲ್ಲಿ ಕೃಷ್ಣ ವೇಷ ಮತ್ತು ಛದ್ಮವೇಷ ಸ್ಪರ್ಧೆ ನೂರಾರು ಮಕ್ಕಳ ಪ್ರತಿಭೆಗೆ ಸಾಕ್ಷಿಯಾಯಿತು.
ಎಸ್.ಡಿ.ಎಂ.ಸಿ., ಹಿರಿಯ ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಸ.ಹಿ.ಪ್ರಾ.ಶಾಲೆ ಸೀಬಿನಕೆರೆ ಹಾಗೂ ಪೋಷಕರು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ಕೃಷ್ಣ ವೇಷ ಮತ್ತು ಛದ್ಮವೇಷ ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹತುಲ್ಲಾ ಅಾದಿ, ಿಇಓ ಗಣೇಶ, ಪಟ್ಟಣ ಪಂಚಾಯತ್ ಸದಸ್ಯರಾದ ರತ್ನಾಕರ್ ಶೆಟ್ಟಿ, ತೀರ್ಪುಗಾರರಾದ ವಸಂತಿ, ಸಾವಿತ್ರಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮದಾಸ್ ಪ್ರಭು,
ಸಾವಿತ್ರಿ ಮುಖ್ಯ ಉಪಾಧ್ಯಯರು ಸೇರಿ ಪೋಷಕರು, ಶಾಲಾ ಸಿಬ್ಬಂದಿ ಹಾಜರಿದ್ದರು.
70ಕ್ಕೂ ಹೆಚ್ಚು ಮಕ್ಕಳ ವಿವಿಧ ವೇಷ!
ಅಂಗನವಾಡಿ, ಶಾಲೆಯ ಸುಮಾರು 70ಕ್ಕೂ ಮಕ್ಕಳು ವಿವಿಧ ವೇಷ ಹಾಕಿ ಸ್ಪರ್ಧೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು.