ಆಗುಂಬೆ ಘಾಟಿಯಲ್ಲಿ ಬಸ್ಸಲ್ಲೇ ಹೃದಯಾಘಾತ: ಸಾವು
– ಕೊಪ್ಪದ ವ್ಯಕ್ತಿ ಮೃತ: ಆಗುಂಬೆ ಲಯನ್ಸ್ ಸೇವೆ
– ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲು
NAMMUR EXPRESS NEWS
ತೀರ್ಥಹಳ್ಳಿ/ಕೊಪ್ಪ: ಆಗುಂಬೆ ಘಾಟಿಯಲ್ಲಿ ಬಿಎಂಎಸ್ ಬಸ್ಸಿನಲ್ಲಿ ಪರ್ಕಳದಿಂದ ಕೊಪ್ಪಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರು ಹೃದಯ ಅಘಾತದಿಂದ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಬಸ್ ಅಲ್ಲೇ ಕೊಪ್ಪದ ಹರೀಶ್ ಬಳ್ಳಾಲ್ ಎನ್ನುವವರಿಗೆ ತೀವ್ರ ಹೃದಯಘಾತ ಆಗಿದ್ದು ಡ್ರೈವರ್ ಆದ ಪ್ರಹ್ಲಾದವರು ಆಗುಂಬೆಯ ಯಶಸ್ವಿ ಬಸ್ಸಿನ ಡ್ರೈವರ್ ಆದ ದಿನೇಶ್ ಅವರ ಗಮನಕ್ಕೆ ತಂದು ಪ್ರಾಥಮಿಕ ಕೇಂದ್ರಕ್ಕೆ ಬರುವಷ್ಟರಲ್ಲಿ ಹರೀಶ್ ಪ್ರಾಣ ಬಿಟ್ಟಿದ್ದಾರೆ. ಆಗುಂಬೆ ವೈದ್ಯಾಧಿಕಾರಿಯಾದ ಅನಿಕೇತನ್ ಪರೀಕ್ಷಿಸಿ ಮೃತರೆಂದು ತೀರ್ಮಾನಿಸಿದ ನಂತರ ಆಗುಂಬೆಯ ಲಯನ್ಸ್ ಕ್ಲಬ್ ಆಂಬುಲೆನ್ಸ್ ಗೆ ಬಳ್ಳಾಳ್ ಅವರ ಮೃತದೇಹವನ್ನು ಶಿಫ್ಟ್ ಮಾಡಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್ಸನ್ನು ಕಳಿಸಿ ಕೊಟ್ಟಿರುತ್ತಾರೆ. ಕುಟುಂಬದವರಿಗೆ ಮಾಹಿತಿಯನ್ನು ನೀಡಿ ಮುಂದಿನ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.