ಡಿ.14,15ರಂದು ತೀರ್ಥಹಳ್ಳಿಯಲ್ಲಿ ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯ
– ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಅಂಗವಾಗಿ ಪಂದ್ಯಾವಳಿ
– ಸುಮಾರು 16 ತಂಡಗಳ ಸರ್ಕಾರಿ ಕ್ರಿಕೆಟ್ ಪಂದ್ಯಾಟ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ತೀರ್ಥಹಳ್ಳಿ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಪ್ರಯುಕ್ತ ಸರಕಾರಿ ನೌಕರರ ಕ್ರಿಕೆಟ್ ಪಂದ್ಯಾಟ ಡಿ. 14 ಮತ್ತು 15ರಂದು ಯು. ಆರ್. ಅನಂತ ಮೂರ್ತಿ ಕ್ರೀಡಾಗಂಣದಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಅಯೋಜಿಸಲಾಗಿದೆ. 16 ಇಲಾಖೆಗಳು ಪಾಲ್ಗೊಳ್ಳಲಿದ್ದು, ಸುಮಾರು 16 ತಂಡಗಳ ಸರಕಾರಿ ಅಧಿಕಾರಿಗಳು ಮತ್ತು ನೌಕರರು ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ರಕ್ಷಣಾಧಿಕಾರಿ ಎಸ್.ವಿ.ಮಿಥುನ್ ಕುಮಾರ್ , ಮಾಜಿ ಗೃಹ ಸಚಿವರು ಮತ್ತು ಶಾಸಕರು ಅರಗ ಜ್ಞಾನೇಂದ್ರ ಹಾಗೂ ಎಂಎಡಿಬಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆರ್. ಎಂ ಮಂಜುನಾಥ್ ಗೌಡರು ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕರು ರಾಜ್ಯದ ಮಾಜಿ ಶಿಕ್ಷಣ ಸಚಿವರು ಕಿಮ್ಮನೆ ರತ್ನಾಕರ್, ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ ಶಬನಮ್, ಸುಶೀಲ ಶೆಟ್ಟಿ, ಗಣಪತಿ, ಗೀತಾರಮೇಶ್, ಪಂಚಾಯತ್ ಎಲ್ಲಾ ಸದಸ್ಯರು ಮುಂದಾಳತ್ವ ವಹಿಸಲಿದ್ದಾರೆ. ಕರ್ನಾಟಕದ ಹೆಸರು ನಾಮಕರಣಗೊಂಡು ಈಗಾಗಲೇ ಐವತ್ತು ವರ್ಷ ಮುಗಿಸಿ ಐವತ್ತೊಂದು ವರ್ಷಕ್ಕೆ ಪಾದರ್ಪಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಸಂಭ್ರಮಾಚರಣೆಯ ಅಂಗವಾಗಿ ಈ ಪಂದ್ಯಾಟವನ್ನು ಆಯೋಜಿಸಲಾಗಿದೆ. ವಿಶೇಷ ಅಧಿಕಾರಿಗಳು ಕೂಡ ಭಾಗವಹಿಸಲಿದ್ದು ಎಲ್ಲರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಪಂದ್ಯಾಟ ಕೂಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಎರಡು ದಿನಗಳ ಕಾಲ ಎಲ್ಲಾ ಅಧಿಕಾರಿಗಳು ಈ ಟೂರ್ನಮೆಂಟ್ನಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅಸಾದಿ ಈ ಮೂಲಕ ವಿನಂತಿಸಿಕೊಂಡಿದ್ದಾರೆ.