ಅರ್ಜುನ ಆನೆಗೆ ಗಣೇಶೋತ್ಸವ ಅರ್ಪಣೆ ಮಾಡಿದ ದೇವಂಗಿ!
– ಅದ್ದೂರಿ ಗಣೇಶೋತ್ಸವ: 5 ದಿನಗಳ ಕಾಲ ಸಂಭ್ರಮ
– ಯುವತಿ ಚಿಕಿತ್ಸೆಗೆ ಸಹಕಾರ ಮಾಡಿದ ಗಜಾನನ ನಾಟ್ಯ ಸಂಘ
– ಶಾಂತಿಯುತ ಗಣೇಶ ಆಚರಣೆ: ಸಾರ್ವಜನಿಕರ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಅದ್ದೂರಿ ಗಣೇಶೋತ್ಸವಗಳಲ್ಲಿ ಒಂದಾದ ದೇವಂಗಿ ಗಣೇಶೋತ್ಸವ ಈ ಬಾರಿ ಅದ್ದೂರಿಯಾಗಿ ನೆರವೇರಿತು. 5 ದಿನಗಳ ಕಾಲ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿ ಕೊನೆ ದಿನ ಪಟಾಕಿ, ವಿವಿಧ ವೇಷ ಭೂಷಣಗಳೊಂದಿಗೆ ಮೆರವಣಿಗೆ ಮಾಡಿದ್ದು ಸಾವಿರಾರು ಜನ ಸೇರಿದರೂ ಶಾಂತಿಯುತ ಆಚರಣೆ ಮಾಡಿ ತಾಲೂಕಲ್ಲೆ ಮಾದರಿ ಆಯಿತು.
ಅರ್ಜುನ ಆನೆಗೆ ಗಣೇಶೋತ್ಸವ ಅರ್ಪಣೆ ಮಾಡಿದ ದೇವಂಗಿ!
ಅರ್ಜುನ ಆನೆ ಸಾವನ್ನಪ್ಪಿದ್ದರೂ ಕೂಡ ಅದಕ್ಕೆ ಸಿಗಬೇಕಾದ ನ್ಯಾಯ ಇಂದಿಗೂ ಕೂಡ ಸಿಕ್ಕಿಲ್ಲ. ಮೈಸೂರು ದಸರಾದಲ್ಲಿ ಿಂಹ ನಡಯಲ್ಲಿ ಹಪಾಠಿಗಳ ಜೊತೆ ಗಾಂಭೀರ್ಯದಿಂದ ಹೆಜ್ಜೆ ಹಾಕಿ, ಸತತ 8 ಬಾರಿ ಚಿನ್ನದ ಅಂಬಾರಿಯನ್ನ, ನಾಡ ದೇವತೆಯನ್ನು ಹೊತ್ತ ಅರ್ಜುನನಿಗೆ ಈ ಗಣೇಶೋತ್ಸವ ಅರ್ಪಣೆ ಮಾಡಲಾಗಿದೆ. ಈ ಬಾರಿ ಟಿ ಶರ್ಟ್ ಮೇಲೇಯೂ ಅರ್ಜುನ ಲೋಗೋ ಹಾಕಿ ಅರ್ಪಣೆ ಮಾಡಿದ್ದಾರೆ.
ಕಾಣಿಕೆ ಡಬ್ಬಿ ಇಡದೆ ಆಸ್ಪತ್ರೆಯಲ್ಲಿದ್ದ ಬಾಲಕಿಗೆ ಸಹಕಾರ
ಗಣೇಶೋತ್ಸವದಲ್ಲಿ ಈ ಬಾರಿ ಗಣೇಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ಹಣ ಸಂಗ್ರಹಿಸಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶಾಂತಿಯುತ ಗಣೇಶ ಹಬ್ಬ ಆಚರಣೆ
ಸಾವಿರಾರು ಜನ ಸೇರಿದರೂ ಶಾಂತಿಯುತವಾಗಿ ಗಣೇಶ ಹಬ್ಬ ಆಚರಣೆ ಮೂಲಕ ಧಾರ್ಮಿಕ ಸಮಾಗಮಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸಂಘ 98ನೇ ವರ್ಷದ ಗಣಪತಿ ಉತ್ಸವವನ್ನು ಅದ್ದೂರಿಯಾಗಿ ಮಾಡಿದೆ.
ಯುವಕರ ಒಗ್ಗಟ್ಟು: ಎಲ್ಲೆಡೆ ಮೆಚ್ಚುಗೆ
ತೀರ್ಥಹಳ್ಳಿ ತಾಲೂಕಲ್ಲೇ ವಿಭಿನ್ನವಾಗಿ ಗಣೇಶ ಹಬ್ಬ ಆಚರಣೆ ಮಾಡುವ ಮೂಲಕ ಗಜಾನನ ನಾಟ್ಯ ಸಂಘದ ಯುವಕರು ಹಾಗೂ ಸಂಘದ ಎಲ್ಲರ ಸೇವೆ ಮೆಚ್ಚುಗೆಗೆ ಪಾತ್ರವಾಯಿತು.