ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಉಚಿತ ಕಿವಿಯ ಶ್ರವಣ ತಪಾಸಣೆ
– ಜ.5 ರಂದು ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ
– ಅಂತರಾಷ್ಟ್ರೀಯ ಸಂಸ್ಥೆಯಿಂದ ಅನುಭವ ಪಡೆದಿರುವ ತಜ್ಞರಿಂದ ಈ ಶಿಬಿರ
– ನೋಂದಾಯಿಸಿದ 30 ಜನರು ಈ ಸೌಲಭ್ಯ ಪಡೆದುಕೊಳ್ಳಬಹುದು
NAMMUR EXPRESS NEWS
ತೀರ್ಥಹಳ್ಳಿ: ತುಳುನಾಡ ಸಿರಿ ಸೌಹಾರ್ದ ಸಹಕಾರಿ ಸಂಘ (ನಿ ) ತೀರ್ಥಹಳ್ಳಿ ಇವರ ಆಶ್ರಯದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ಬಂಟರ ಸಂಘ ತೀರ್ಥಹಳ್ಳಿ, ರೋಟರಿ ಕ್ಲಬ್ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಪ್ರಪ್ರಥಮ ಬಾರಿಗೆ ತೀರ್ಥಹಳ್ಳಿಯಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ ನಡೆಯುತ್ತಿದೆ.
ನೋಂದಾಯಿಸಿದ 30 ಸಾರ್ವಜನಿಕರಿಗೆ ತುಳುನಾಡ ಸಂಘ ಆಯೋಜಿಸಿದ ಸಂಸ್ಥೆಗಳಿಂದ ಕಿವಿಯ ಶ್ರವಣ ಸಾಧನದ ಮೊತ್ತದ 40% ಸಂಘದವರು ಭರಿಸಲಾಗುತ್ತದೆ. ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ. ನೋಂದಣಿ ಕಡ್ಡಾಯವಾಗಿದ್ದು ಇಂದೇ ನೊಂದಾಯಿಸಿಕೊಳ್ಳಿ. ಸಂಸ್ಥೆ ಈ ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಮ್ಮ ಪ್ರೀತಿ ಪಾತ್ರರಿಗೆ ಕೇಳಿಸಿಕೊಳ್ಳುವ ಸಂತೋಷವನ್ನು ನೀಡಿ. ಜನವರಿ 5 ಭಾನುವಾರ ಬೆಳಗ್ಗೆ 10 ಗಂಟೆಗೆ ಮಾರಿಕಾಂಬ ಸಭಾಭವನ ಹಳೆ ಪೊಲೀಸ್ ಸ್ಟೇಷನ್ ಹತ್ತಿರ, ನಾಡ್ತಿ ಸೊಪ್ಪುಗುಡ್ಡೆ ತೀರ್ಥಹಳ್ಳಿ ಇಲ್ಲಿ ಉಚಿತ ಶ್ರವಣ ತಪಾಸಣೆ ಹಾಗೂ ಶ್ರವಣ ಯಂತ್ರಗಳ ವಿತರಣೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9902344399, 9481179490, 9901184246, 9113231844