ಹಿರಿಯ ನಾಗರೀಕರಿಗೆ ಉಚಿತ ಆಯುಷ್ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ
– ಡಿ.14ಕ್ಕೆ ತೀರ್ಥಹಳ್ಳಿ ಬ್ರಾಹ್ಮಣ ಸಂಘದಿಂದ ಗಾಯತ್ರಿ ಮಂದಿರದಲ್ಲಿ ಕಾರ್ಯಕ್ರಮ
– ಆಸಕ್ತಿ ಇರುವ ಹಿರಿಯ ನಾಗರೀಕರಿಗಾಗಿ 15 ದಿನಗಳ ಉಚಿತ ಯೋಗ ಮತ್ತು ಪ್ರಾಣಾಯಾಮ ತರಗತಿ ಆಯೋಜನೆ
NAMMUR EXPRESS NEWS
ತೀರ್ಥಹಳ್ಳಿ: ಜಿಲ್ಲಾಳಿತ, ಜಿಲ್ಲಾಪಂಚಾಯತ್, ಆಯುಷ್ ಇಲಾಖೆ ಶಿವಮೊಗ್ಗ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಸಾಲೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾ॥ ಹಿರಿಯರ ಬಳಗ ಇವರುಗಳ ಸಹಯೋಗದೊಂದಿಗೆ ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಡಿಸೆಂಬರ್ 14ರ ಶನಿವಾರ ದಂದು ತೀರ್ಥಹಳ್ಳಿ ಗಾಯತ್ರಿ ಮಂದಿರದಲ್ಲಿ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಹಿರಿಯ ನಾಗರೀಕರಿಗೆ ಉಚಿತ ಆಯುಷ್ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ಸಾಲೂರು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿ ಡಾ||ರವಿಶಂಕರ ಉಡುಪ ಅವರು ಆಹಾರ ಮತ್ತು ಆರೋಗ್ಯ ಕುರಿತು ಉಪನ್ಯಾಸ ನೀಡುವರು.
ಸಮಾಜದ ಎಲ್ಲಾ ವರ್ಗದ ಹಿರಿಯ ನಾಗರೀಕರು ಈ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕಾಗಿ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಆಯುಷ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಹಾಗೂ ಸಾಲೂರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ವಿನಂತಿಸಿದ್ದಾರೆ. ಹಿರಿಯ ನಾಗರಿಕರಿಗೆ ಕಾರ್ಯಕ್ರಮಕ್ಕೆ ಅದರದ ಸ್ವಾಗತವನ್ನ ಕೋರಿದ್ದಾರೆ. ಶಿಬಿರದ ನಂತರ ಆಸಕ್ತ ಹಿರಿಯ ನಾಗರೀಕರಿಗಾಗಿ 15 ದಿನಗಳ ಉಚಿತ ಯೋಗ ಮತ್ತು ಪ್ರಾಣಾಯಾಮ ತರಗತಿಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಡಾ.ಮನೋಹರರಾವ್ ಎನ್.ಎಸ್
ಮೊ :9108673750. ಡಾ ರವಿಶಂಕರ ಉಡುಪ : 9448871576