ತುಳುನಾಡು ಸಿರಿ ಸೌಹಾರ್ದ ಸಹಕಾರಿಯಿಂದ ಉಚಿತ ಅರೋಗ್ಯ ಶಿಬಿರ
– ಸೆ.12ರಂದು ತೀರ್ಥಹಳ್ಳಿಯಲ್ಲಿ ಆಯೋಜನೆ
– ಷೇರುದಾರರು, ಜನತೆ ಸದುಪಯೋಗಪಡಿಸಿಕೊಳ್ಳಲು ರಾಘವೇಂದ್ರ ಶೆಟ್ಟಿ ಮನವಿ
NAMMUR EXPRESS NEWS
ತೀರ್ಥಹಳ್ಳಿ: ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ ತೀರ್ಥಹಳ್ಳಿ ತಾಲ್ಲೂಕು ಇವರ ಆಶ್ರಯದಲ್ಲಿ
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಭಾಗಿತ್ವದಲ್ಲಿ 12 ಸೆಪ್ಟೆಂಬರ್ 2023 ಮಂಗಳವಾರ ತೀರ್ಥಹಳ್ಳಿಯಲ್ಲಿ
ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅಂದೇ ಷೇರುದಾರರ ಸಭೆ ನಡೆಯಲಿದೆ.
ಮಣಿಪಾಲ ನುರಿತ ತಜ್ಞರಿಂದ ಸಮಾಲೋಚನೆ ರಕ್ತದ ಸಕ್ಕರೆ ಅಂಶದ ಪರೀಕ್ಷೆ (GRBS) | ಬಿಪಿ (BP) ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆ ಮತ್ತು ಸಲಹೆ ಇರಲಿದೆ. 12 ಸೆಪ್ಟೆಂಬರ್ ಮಂಗಳವಾರ ಸಮಯ ಬೆಳಗ್ಗೆ 8-00 ರಿಂದ ಮಧ್ಯಾಹ್ನ 1-00ರವರೆಗೆ ತೀರ್ಥಹಳ್ಳಿ ಮಾಧವ ಮಂಗಲ ಸಭಾಭವನ, ತುಂಗಾತೀರ ಇಲ್ಲಿ ಆರೋಗ್ಯ ಶಿಬಿರ ನಡೆಯಲಿದೆ.
ಷೇರುದಾರ ಸದಸ್ಯರು ಹಾಗೂ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ ತೀರ್ಥಹಳ್ಳಿ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಮತ್ತು ಎಲ್ಲಾ ನಿರ್ದೇಶಕರು ಮನವಿ ಮಾಡಿದ್ದಾರೆ.
ಶಿಬಿರದಲ್ಲಿ ಲಭ್ಯವಿರುವ ಚಿಕಿತ್ಸಾ ವಿಭಾಗಗಳು
1. ಚರ್ಮ ರೋಗ ತಪಾಸಣಾ ವಿಭಾಗ
2, ಕಿವಿ, ಮೂಗು, ಗಂಟಲು ತಪಾಸಣಾ ವಿಭಾಗ
3. ಸಮುದಾಯ ದಂತ ಚಿಕಿತ್ಸಾ ವಿಭಾಗ
4. ಕೀಲು ಮತ್ತು ಮೂಳೆ ತಪಾಸಣಾ ವಿಭಾಗ
5. ಸ್ತ್ರೀ ರೋಗ ತಪಾಸಣಾ ವಿಭಾಗ
6. ಜನರಲ್ ಮೆಡಿಸಿನ್
ಶಿಬಿರಕ್ಕೆ ನೋಂದಾವಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9448617498, 9480282858 9741626317 9113231844