ಟೀಚರ್ಸ್ ಸೊಸೈಟಿ ಕಟ್ಟಡ ತೀರ್ಥಹಳ್ಳಿಗೆ ಹೈಟೆಕ್!
– ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿ ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆ
– 10ನೇ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ
– ನೂತನ ಕಟ್ಟದಲ್ಲಿ ಏನೇನಿದೆ?… ಸರ್ವರನ್ನು ಸ್ವಾಗತಿಸಿದ ಮಹಾಬಲೇಶ್ವರ ಹೆಗಡೆ
NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ಇದರ ನೂತನ ಕಟ್ಟಡದ ಉದ್ಘಾಟನೆ ಮತ್ತು 10ನೇ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಸೆ.22 ಭಾನುವಾರ ಬೆಳಿಗ್ಗೆ 10-00 ರಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ನಿ., ತೀರ್ಥಹಳ್ಳಿ ಇದರ ನೂತನ ಕಟ್ಟಡ “ಶಿಕ್ಷಕರ ಸೌಹಾರ್ದ ಭವನ “ದಲ್ಲಿ ನಡೆಯಲಿದೆ. ಅಂದೇ ನೂತನ ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆ ನಡೆಯಲಿದೆ.
ಕಾರ್ಯಕ್ರಮದ ದಿವ್ಯಸಾನಿಧ್ಯ : ಶ್ರೀ ಷ| ಬ್ರ| ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಶ್ರೀಮನ್ ಮಹಾಸಂಸ್ಥಾನ, ಮಳಲಿಮಠ, ಶಿವಮೊಗ್ಗ ಜಿಲ್ಲೆ ಉದ್ಘಾಟಕರು : ಶ್ರೀ ಮಧು ಬಂಗಾರಪ್ಪ, ಸನ್ಮಾನ್ಯ ಪ್ರಾಥಮಿಕ ಮ್ತು ಪ್ರಶಿಕ್ಷ ಸಚಿವರು, ಕರ್ನಾಟಕ ಸರ್ಕಾರ ಇವರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಬಿ.ವೈ. ರಾಘವೇಂದ್ರ, ಶ್ರೀ ಅರಗ ಜ್ಞಾನೇಂದ್ರ, ಶ್ರೀ ಗೋಪಾಲಕೃಷ್ಣ ಬೇಳೂರು, ಶ್ರೀ ಕಿಮ್ಮನೆ ರತ್ನಾಕರ್, ಶ್ರೀ ಡಾ. ಆರ್.ಎಂ.ಮಂಜುನಾಥಗೌಡ, ಶ್ರೀ ಜಿ. ನಂಜನಗೌಡ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಬಲೇಶ್ವರ ಹೆಗಡೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇನ್ನು ಅನೇಕ ಮುಖ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ, ಈ ಉದ್ಘಾಟನಾ ಸಮಾರಂಭದಲ್ಲಿ ಅನೇಕ ರೀತಿಯ ಕಾರ್ಯಕ್ರಮಗಳು ಕೂಡ ನಡೆಯುತ್ತದೆ, ಸರ್ವರಿಗೂ ಕೂಡ ಆದರದ ಸ್ವಾಗತವನ್ನು ಆಡಳಿತ ಮಂಡಳಿ ಕೋರಿದೆ.
ತೀರ್ಥಹಳ್ಳಿಯಲ್ಲೇ ಹೈಟೆಕ್ ಕಟ್ಟಡದಲ್ಲಿ ಏನೇನಿದೆ?
ನೂತನ ಕಚೇರಿ, ಶಾಪಿಂಗ್ ಸ್ಟೋರ್, ಅಪಾರ್ಟ್ಮೆಂಟ್, ಮಿನಿ ಹಾಲ್, ಕಚೇರಿ ಜಾಗಗಳು, ಲಾಡ್ಜ್ ಸೇರಿ ಅತೀ ದೊಡ್ಡ ಕಟ್ಟಡ ಇದಾಗಿದೆ.
ತೀರ್ಥಹಳ್ಳಿ ಬಸ್ ನಿಲ್ದಾಣ ಕೆಳ ಭಾಗದ ಕುವೆಂಪು ಲೇ ಔಟ್ ನಲ್ಲಿ ಇದು ನಿರ್ಮಾಣವಾಗಿದೆ.