ಹೊಸನಗರ –ತೀರ್ಥಹಳ್ಳಿ ಕೋಳಿ ಬೆಳೆಗಾರರ ಸಂಘ, ಬೋರ್ಡ್ ಸದಸ್ಯರ ಮಹಾಸಭೆ
– ಕೋಳಿ ಸಾಕಿದ ಮಲೆನಾಡ ರೈತರಿಗೆ ಹಣ ನೀಡದೆ ವಂಚಿಸಿದ ಘಟನೆ
– ವಂಚನೆಗೆ ಒಳಗಾದ 18 ಜನ ರೈತರಿಗೆ ಚೆಕ್ ವಿತರಣೆ!
NAMMUR EXPRESS NEWS
ತೀರ್ಥಹಳ್ಳಿ: ಹೊಸನಗರ –ತೀರ್ಥಹಳ್ಳಿ ತಾಲ್ಲೂಕು ಕೋಳಿ ಬೆಳೆಗಾರರ ಸಂಘ(ರಿ) ಇದರ ಬೋರ್ಡ್ ಸದಸ್ಯರ ಸಭೆಯು ಶ್ರೀಧರ ಪುರ ಸಭಾಭವನದಲ್ಲಿ ಅಂಕಿತ್ ಮೇಕೇರಿ ಇವರ ಅದ್ಯಕ್ಷತೆಯಲ್ಲಿ ನಡೆಯಲಾಯಿತು. ಈ ಸಭೆಯಲ್ಲಿ ಕಳೆದ ಎರಡು ವರ್ಷದ ಹಿಂದೆ ಅಲ್ಲಾರಿಪ್ ಕೋಳಿ ಕಂಪನಿಯ ಮಾಲಿಕರಿಂದ ಮಲೆನಾಡು ಭಾಗದ ರೈತರಿಗೆ ಇಂಟಿಗ್ರೇಶನ್ ನಲ್ಲಿ ಕೋಳಿ ಸಾಕಿದ ರೈತರಿಗೆ ಹಣ ನೀಡದೆ ವಂಚಿಸಿದ ಘಟನೆ ನಗರ ಪೋಲಿಸ್ ಸ್ಟೇಶನ್ ನಲ್ಲಿ 2 ವರ್ಷದ ಹಿಂದೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಹೊಸನಗರ –ತೀರ್ಥಹಳ್ಳಿ ತಾಲ್ಲೂಕು ಕೋಳಿ ಬೆಳೆಗಾರರ ಸಂಘ(ರಿ) ಕಂಪನಿಯ ವಿರುದ್ದ ಹೋರಾಟ ನಡೆಸಿ ಚೆಕ್ ಬೌನ್ಸ್ ಕೇಸ್ ನಡೆಸಿ ಹೊಸನಗರ ಮತ್ತು ಸಾಗರ 2 ನ್ಯಾಯಾಲಯದಲ್ಲಿ ಕೇಸ್ ಗೆದ್ದು ವಂಚನೆಗೆ ಒಳಗಾದ ಮಲೆನಾಡು ಭಾಗದ ಸುಮಾರು 18 ಜನ ರೈತರಿಗೆ ಚೆಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾದ್ಯಕ್ಷರಾದ, ಶ್ರೀ ಕೆ.ಬಿ ಕುಮಾರ್ ಹಾಗೂ ಸಂಘದ ಕಾರ್ಯದರ್ಶಿಗಳಾದ ಮಾರುತಿ ಹೆಚ್ ಜಿ ಹಾಗೂ ಈ ಸಂಘದ ಉಪಾದ್ಯಕ್ಷರಾದ ಶ್ರೀ ಶಶಿ ಮದುಕರ್ ಶೆಟ್ಟಿ ಶ್ರೀ ಕೋಟೇಶ್ ಸುರೇಶ್ ಬೈಸೆ, ಶ್ರೀನಿವಾಸ್ ಶೆಟ್ರು ಮತ್ತಿಮನೆ, ಶ್ರೀ ಜಯಾರಂ ಸಂಪೆಕಟ್ಟೆ ರವರು ಉಪಸ್ಥಿತರಿದ್ದರು.
18 ಜನ ರೈತರಿಗೆ ಚೆಕ್ ವಿತರಿಸಲು ಸಹಕರಿಸಿದ ಮಾಜಿ ಗೃಹ ಸಚಿವರು, ಶಾಸಕರು ಆರಗ ಜ್ಞಾನೇಂದ್ರ ಅವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ರೈತ ಭಾಂದವರು ಆರಕ್ಷಕ ಸಿಬ್ಬಂದಿ ವರ್ಗದವರಿಗೆ ಸಂಘದ ಪರವಾಗಿ ಹೊಸನಗರ ತೀರ್ಥಹಳ್ಳಿ ಕೋಳಿ ಬೆಳೆಗಾರರ ಅಧ್ಯಕ್ಷರು ಅಂಕಿತ್ ಮೆಕೇರಿ ಈ ಮೂಲಕ ಧನ್ಯವಾದ ಸಮರ್ಪಿಸಿದರು.