ಆಗುಂಬೆ ಬಳಿಗೆ ಬಂದ ಕಾಡಾನೆ..!
– ಜನರಿಗೆ ಭಯ, ಫಸಲು ಹಾನಿಯ ಭೀತಿ
– ಮಲೆನಾಡಿಗೆ ಕಾಡಾನೆ ಕಂಟಕ
NAMMUR EXPRESS NEWS
ತೀರ್ಥಹಳ್ಳಿ : ವಿಶ್ವ ಪ್ರಸಿದ್ಧ ಆಗುಂಬೆಯ ಬಳಿ ಆನೆ ಒಂದು ಪತ್ತೆಯಾಗಿದ್ದು ಇದೀಗ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿಗೆ ಸುಮಾರು 20 ವರ್ಷದ ಆನೆಯೊಂದು ಓಡಾಡುತ್ತಿದ್ದು. ಆದರೆ ಇದುವರೆಗೆ ಯಾವುದೇ ಕ್ಯಾಮೆರಾದ ಕಣ್ಣಿಗೂ ಬಿದ್ದಿಲ್ಲ, ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಒಂಟಿ ಸಲಗ ಒಂದು ಓಡಾಡುತ್ತಿದ್ದು ಆಸ್ತಿಪಾಸ್ತಿಯನ್ನು ಹಾನಿ ಮಾಡಿದ್ದು, ಹಲವರನ್ನ ಬಲಿ ಕೂಡ ಪಡೆದಿತ್ತು, ಇದೀಗ ಈ ಆನೆ ಬೇರೆ ಆನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆಯು ಗಮನಿಸಬೇಕು ಹಾಗೂ ಸ್ಥಳೀಯರ ಭಯವನ್ನು ಹೋಗಲಾಡಿಸಬೇಕೆಂದು ನಮ್ಮೂರ್ ಎಕ್ಸ್ಪ್ರೆಸ್ ಮನವಿ ಮಾಡುತ್ತದೆ. ಈಗಾಗಲೇ ಕೊಪ್ಪ, ಎನ್.ಆರ್ ಪುರ, ಹೊಸ ನಗರ ಗಡಿಯಲ್ಲಿ ಆನೆಗಳ ಕಾಟ ಹೆಚ್ಚಾಗಿದೆ.