ಕುಡುಮಲ್ಲಿಗೆ ಸೊಸೈಟಿ : ಸಹಕಾರ ಭಾರತಿ ತಂಡ ಭರ್ಜರಿ ಗೆಲುವು!
– 12 ಸ್ಥಳದಲ್ಲಿ 10 ಸ್ಥಾನ ಗಳಿಸಿ ಅಭೂತಪೂರ್ವ ಜಯ!
– ಗೆಲುವು ಸಾಧಿಸಲು ಸಹಕರಿಸಿದವರಿಗೆ ಧನ್ಯವಾದ ಸಮರ್ಪಣೆ
NAMMUR EXPRESS NEWS
ತೀರ್ಥಹಳ್ಳಿ: ಕುಡುಮಲ್ಲಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಕುಡುಮಲ್ಲಿಗೆ ಡಿ. 29 ಭಾನುವಾರದಂದು ಕುಡುಮಲ್ಲಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಹಕಾರ ಭಾರತಿ ತಂಡ ಭರ್ಜರಿ ಗೆಲುವನ್ನು ಸಾಧಿಸಿದೆ. ಕುಡುಮಲ್ಲಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತ ನೀಡಿ ಆಶೀರ್ವಾದಿಸಿದ್ದು, ಒಟ್ಟು 12 ಸ್ಥಾನದಲ್ಲಿ 10 ಸ್ಥಾನಗಳಲ್ಲಿ ಅಭೂತಪೂರ್ವ ಜಯಗಳಿಸಲು ಅನೂವು ಮಾಡಿದ ಎಲ್ಲಾ ಷೇರುದಾರ ರೈತ ಬಂಧುಗಳಿಗೆ ಹಾಗೂ ಹಗಲಿರಳು ಶ್ರಮಿಸಿ ಸಹಕಾರ ಭಾರತಿ ತಂಡ ಜಯಗಳಿಸಲು ಸಹಕಾರಿಯಾದ ಸಂಘಟನೆ ಮತ್ತು ಪರಿವಾರದ ಎಲ್ಲ ಕಾರ್ಯಕರ್ತ ಬಂಧುಗಳಿಗೂ ಈ ಮೂಲಕ ಧನ್ಯವಾದಗಳನ್ನು ಸಮರ್ಪಿಸಲಾಗಿದೆ.
ಚುನಾವಣೆಯಲ್ಲಿ ವಿಜೇತರಾದವರ ಪಟ್ಟಿ ಹೀಗಿದೆ!
ಅಂಜುರ ಕುಡುಮಲ್ಲಿಗೆಯವರು 390 ಮತ ಪಡೆದು 128 ಅಂತರದಲ್ಲಿ, ಪ್ರಶಾಂತ್ ಕುಕ್ಕೆ 372 ಮತ ಪಡೆದು, 110 ಅಂತರದಲ್ಲಿ, ಸುಧಾಕರ ಹಕ್ಲುಮನೆ 343 ಮತ ಪಡೆದು, 81ಅಂತರದಲ್ಲಿ, ಅಶೋಕ್ ಕುಕ್ಕೆ 340 ಮತ ಪಡೆದು ಅಂತರ 78, ಭಾಸ್ಕರ್ ಶೆಟ್ಟಿ ಪಡೆದ ಮತ 323 ಅಂತರ 72, ಅನಂತಮೂರ್ತಿ ಹೊದಲ ಪಡೆದ ಮತ 271 ಅಂತರ 57, ರಚನಾ ಸುಧೀರ್ ಪಡೆದ ಮತ 268 ಅಂತರ 32, ಸುಕನ್ಯಾ ಪಡೆದ ಮತ 267 ಅಂತರ 31, ರವಿ ಹಲ್ಯಾಪುರ ಪಡೆದ ಮತ 188 ಅಂತರ 77 ಹಾಗೂ ಸುನಂದಾ ಬಾಳಗಾರು ಅವರು 159 ಮತ ಪಡೆದು 24 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.ವಿಜೇತರಾದ ಸಹಕಾರ ಭಾರತಿ ತಂಡ ಈ ಮೂಲಕ ಕೃತಜ್ಞತೆ ಸಲ್ಲಿಸಿದೆ.