ತೀರ್ಥಹಳ್ಳಿಯಲ್ಲೂ ಕನ್ನಡಕ್ಕೆ ಕುತ್ತು!?
– ಕನ್ನಡ ನಾಮಫಲಕಕ್ಕೆ ತಿಲಾಂಜಲಿ ಇಡ್ತಿದ್ದಾರಾ?
– ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಮನವಿ: ಏನಿದು ಮನವಿ..?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿರುವ ಬಹುತೇಕ, ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ನಾಮಫಲಕವನ್ನು ಆಂಗ್ಲ ಭಾಷೆಯಲ್ಲಿ ಅಳವಡಿಸಿದ್ದು, ಸಣ್ಣದಾಗಿ ಕನ್ನಡದಲ್ಲಿ ಬೋರ್ಡ್ ಹಾಕಲಾಗಿದೆ. ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಥಹಳ್ಳಿ ಕರವೇ ಸ್ಥಳೀಯ ಆಡಳಿತವನ್ನು ಅಗ್ರಹಿಸಿದೆ. ಕರ್ನಾಟಕ ಸರ್ಕಾರದ ಆದೇಶದಂತೆ 70 % ಭಾಗಶಃ ಕನ್ನಡದಲ್ಲಿಯೇ ಇರಬೇಕು ಎಂಬುದಾಗಿದೆ, ಆದರೆ ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಆಂಗ್ಲ ಭಾಷೆಯಲ್ಲಿ ನಾಮಫಲಕ ಅಳವಡಿಸಿದ್ದಾರೆ. ಕೆಲವೊಂದು ಇಂಗ್ಲಿಷಲ್ಲಿ ದೊಡ್ಡದಾಗಿ ನಾಮಫಲಕವನ್ನು ಅಳವಡಿಸಿ ಕನ್ನಡವನ್ನು ಚಿಕ್ಕದಾಗಿ ಸೇರಿಸಿರುತ್ತಾರೆ.
ತಾವುಗಳು ದಯಮಾಡಿ ಇದನ್ನು ಗಮನಿಸಿ. ಈ ಕೂಡಲೇ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಆದೇಶವನ್ನು ಹೊರಡಿಸಬೇಕು. ಹಿಂದೆ ನಾಮಫಲಕಗಳಲ್ಲಿ ಆಗಿರುವ ದೋಷವನ್ನು ಸರಿಪಡಿಸಿಕೊಳ್ಳಲು ಒಂದು ತಿಂಗಳ ಕಾಲಾವಕಾಶವನ್ನು ನೀಡಿ ಸಂಪೂರ್ಣ ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಬರುವಂತೆ ಗಮನಹರಿಸಬೇಕು. ಕನ್ನಡಕ್ಕೆ ಮಾನ್ಯತೆ ಬರುವಂತೆ ಮಾಡಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಕರವೇ ಪ್ರಮುಖರಾದ ಮಲ್ಲಕ್ಕಿ ರಾಘವೇಂದ್ರ, ಯಡೂರು ಸುರೇಂದ್ರ, ಶ್ರೀಕಾಂತ್ ಬೆಟ್ಟಮಕ್ಕಿ, ಜ್ಯೋತಿ ದಿಲೀಪ್,ವಿಕ್ರಮ್ ಶೆಟ್ಟಿ, ಅರ್ಜುನ್, ವಾಣಿ ಗಣೇಶ್ ಸೇರಿ ಹಲವರು ಉಪಸ್ಥಿತರಿದ್ದರು.