ಅಂತರಾಷ್ಟ್ರೀಯ ಮಟ್ಟಕ್ಕೆ ಮಹಮದ್ ನಿಯಾಜ್!
– ಕರಾಟೆ ಸ್ಪರ್ಧೆಯಲ್ಲಿ ಗಮನ ಸೆಳೆದ ಕೋಣಂದೂರು ಹುಡುಗ
– ಚಿತ್ರಕಲೆಯಲ್ಲಿ ಪ್ರಾಪ್ತಿ ಪೇಟೆ ಶೆಣೈ ಪ್ರಥಮ ಸ್ಥಾನ
NAMMUR EXPRESS NEWS
ಕೋಣಂದೂರು: ತೀರ್ಥಹಳ್ಳಿ ತಾಲೂಕು ರಾಷ್ಟ್ರೀಯ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಮಹಮದ್ ನಿಯಾಜ್ ಈಚೆಗೆ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಮಾರ್ಷಲ್ ಆರ್ಟ್ ಸಂಸ್ಥೆ ಮಹಾರಾಷ್ಟದಲ್ಲಿ ಜ.18ರಿಂದ 21ರವರೆಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕೌಶಲ್ ವೈಯಕ್ತಿಕ (ಕತಾ)ಹಾಗೂ ಕೌಶಲ್ (ಗುಂಪು ಕತಾ ವಿಭಾಗ )ನಲ್ಲಿ ದ್ವಿತೀಯ ಸ್ಥಾನ ಪಡೆದು ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಪಡೆದಿರುತ್ತಾನೆ. ಈತ ರಿಪ್ಪನ್ ಪೇಟೆಯ ನಾಸಿರ್ ಅಹಮದ್ ಮತ್ತು ಜೀನತ್ ದಂಪತಿಗಳ ಪುತ್ರನಾಗಿದ್ದಾನೆ. ವಿಜೇತ ವಿದ್ಯಾರ್ಥಿಯನ್ನು ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಚಿತ್ರಕಲೆಯಲ್ಲಿ ಪ್ರಾಪ್ತಿ ಪೇಟೆ ಶೆಣೈ ಪ್ರಥಮ ಸ್ಥಾನ
ಕೋಣಂದೂರು: ತೀರ್ಥಹಳ್ಳಿ ರಾಷ್ಟ್ರೀಯ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರಾಪ್ತಿ ಪೇಟೆ ಶೆಣೈ ಈಚೆಗೆ ಶಿವಮೊಗ್ಗದ ಎಸ್.ಬಿ.ವಿಜನ್ ಮೈಲಾರೇಶ್ವರ ದೇವಸ್ಥಾನ ಏರ್ಪಡಿಸಿದ್ದ ಅಂತರ ಶಾಲಾ ಮಟ್ಟದ ಶ್ರೀ ರಾಮನ ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಶ್ರೀರಾಮ ಜನ್ಮ ಭೂಮಿ ಅಯೋಧ್ಯಾ ಮಂದಿರದ ಶ್ರೀರಾಮ ಪ್ರತಿಷ್ಠಾಪನೆಯ ನೆನಪಿಗಾಗಿ ಆಯೋಜಿಸಿದ್ದ ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಈಕೆ ತೀರ್ಥಹಳ್ಳಿಯ ಪ್ರಸನ್ನ ಪೇಟೆ ಶೆಣೈ ಮತ್ತು ಪ್ರಕೃತಿ ಪೇಟೆ ಶೆಣೈ ದಂಪತಿಗಳ ಪುತ್ರಿ. ವಿಜೇತ ವಿದ್ಯಾರ್ಥಿಯನ್ನು ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.