ಹೊಸ ವರ್ಷದ ಸಂಭ್ರಮ: ಎಲ್ಲೆಡೆ ಆಚರಣೆ ಜೋಷ್!
– ತೀರ್ಥಹಳ್ಳಿಯಲ್ಲಿ ವಿವಿಧ ಕಾರ್ಯಕ್ರಮ: ಹೊಸ ವರ್ಷ ಸ್ವಾಗತಿಸಿದ ತೆಪ್ಪೋತ್ಸವ
– ಹೊಸ ವರ್ಷಕ್ಕೆ ಮಧ್ಯದಂಗಡಿಗಳು , ಹೋಟೆಲ್ ಫುಲ್ ಫುಲ್
– ಮಾದರಿಯಾಯ್ತು ಸಮರ್ಪಣಾ ತಂಡದ ಹೊಸ ವರ್ಷ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದ ಜಾತ್ರೆಯೂ ಕೂಡ ಅದೇ ದಿನವೂ ಬಂದಿರುವುದರಿಂದ ಅತಿ ಹೆಚ್ಚಿನ ಜನರು ಬೆಂಗಳೂರಿನಿಂದ ಹಾಗೂ ಹೊರಗಡೆ ಊರುಗಳಲ್ಲಿರುವಂತಹವರು ಮಲೆನಾಡಿನವರು ತೀರ್ಥಹಳ್ಳಿ ರಾಮೇಶ್ವರ ಜಾತ್ರೆ ಹಾಗೂ ಹೊಸ ವರ್ಷದ ಆಚರಣೆಗೆ ತಮ್ಮ ಊರಿಗೆ ಬಂದಿದ್ದಾರೆ. ಹೀಗಾಗಿ ಹೊಸ ವರ್ಷ ಅತ್ಯಂತ ಸಂಭ್ರಮದ ಕಳೆ ಕಟ್ಟಿದೆ. ಹೊಸ ವರ್ಷದ ಅಂಗವಾಗಿ ಈಗಾಗಲೇ ತೀರ್ಥಹಳ್ಳಿ ಅನೇಕ ಹೋಂ ಸ್ಟೇ, ರೆಸಾರ್ಟ್ ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ತೀರ್ಥಹಳ್ಳಿಯ ಆರಗದ ನೆಸ್ಟ್ ಹೋಂಸ್ಟೇ, ನಾಡ್ತಿ ಹೋಂಸ್ಟೇ, ಬಳಗಟ್ಟೆ ಹೋಂ ಸ್ಟೇ, ಬಾಣ0ಕಿ ಹೋಂ ಸ್ಟೇ, ಅತಿಥ್ಯ ಹೋಂ ಸ್ಟೇ, ಕುಂದಾದ್ರಿ ಮಿಸ್ಟ್ ಇನ್, ರಾಕ್ ವೀವ್, ಮೇನಕಾ ಸೇರಿದಂತೆ ಅನೇಕ ಹೋಂ ಸ್ಟೇ ಗಳಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಸಾವಿರಾರು ಜನರು ಭೇಟಿ ನೀಡಿ ಹೊಸ ವರ್ಷ ಆಚರಣೆ ಮಾಡಿದರು. ಖಂಡಿಲ್ ವೈನ್ಸ್, ಮೂಡ್ ರೆಸ್ಟೋರೆಂಟ್ ಸೇರಿ ಅನೇಕ ಹೋಟೆಲ್, ರೆಸ್ಟೋರೆಂಟ್ ಅಲ್ಲಿ ಮಧ್ಯಪ್ರಿಯರಿಗೆ ವಿಶೇಷ ಆಫರ್ ಗಳನ್ನು ನೀಡಿ ಗ್ರಾಹಕರನ್ನ ಸೆಳೆಯುವ ಪ್ರಯತ್ನ ಮಾಡಲಾಯಿತು.
– ಹೊಸ ವರ್ಷದ ಸಂಭ್ರಮ ಹೆಚ್ಚಿಸಿದ ಎಳ್ಳಮಾವಾಸ್ಯೆ ಜಾತ್ರೆ!
ಹೊಸ ವರ್ಷದ ಸಂಭ್ರಮದಲ್ಲಿ ಜನತೆ ಎಚ್ಚರ ವಹಿಸಬೇಕಾಗಿದೆ. ಏಕೆಂದರೆ ವಾಹನಗಳ ಸಂಖ್ಯೆ ಅತಿ ಹೆಚ್ಚಾಗಿರುವುದರಿಂದ ಜಾಗೃತಿಯಿಂದ ವಾಹನವನ್ನು ಚಲಾಯಿಸಬೇಕಾಗಿದೆ. ಹೊಸ ವರ್ಷ ತಮ್ಮ ಬದುಕಿನಲ್ಲೂ ಕೂಡ ಹೊಸ ವರ್ಷವನ್ನು ತರಲಿದೆ. ಹಾಗಾಗಿ ಎಚ್ಚರಿಕೆ ಕೂಡ ಅಗತ್ಯ ಇನ್ನು ಮಿತಿಮೀರಿದ ಮಧ್ಯಪಾನ ಕೂಡ ಆರೋಗ್ಯಕ್ಕೆ ಹಾನಿಕರ ಹೀಗಾಗಿ ಹೊಸ ವರ್ಷವನ್ನು ಸಂಭ್ರಮವನ್ನ ಮಿತಿಯಲ್ಲಿ ಆಚರಣೆ ಮಾಡಬೇಕಾಗಿದೆ ಎಂಬುದು ಪೊಲೀಸ್ ಇಲಾಖೆಯ ಮನವಿ.
ಮಾದರಿಯಾಯ್ತು ಸಮರ್ಪಣಾ ತಂಡದ ಹೊಸ ವರ್ಷ!
ಹೊಸ ವರ್ಷ ಬಂತೆಂದರೆ ಯಾರಿಗೆ ಸಂತೋಷವಿಲ್ಲ. ಹೇಳಿ. ಎಲ್ಲ ಊರಲ್ಲೂ ಕೂಡ ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತಾರೆ. ಎಲ್ಲ ಸ್ನೇಹಿತರು ಸೇರಿ ಗುಂಡು ತುಂಡಿನ ಪಾರ್ಟಿ ಕೂಡ ಮಾಡುತ್ತಾರೆ. ಆದರೆ ರಾಮಕೃಷ್ಣಪುರದ ಊರಿನ ಸಮರ್ಪಣಾ ತಂಡದವರ ಒಂದು ಹಾಳು ಬಿದ್ದ ಬಸ್ ಸ್ಟ್ಯಾಂಡನ್ನು ನವೀಕರಿಸಿ ಅತ್ಯಂತ ಮಾದರಿ ಕೆಲಸವನ್ನು ಮಾಡಿದ್ದಾರೆ. ಸುಮಾರು ಏಳು ಜನರ ತಂಡ ಕಳೆದ ವರ್ಷ ಕೂಡ ತಮ್ಮ ಊರಾದ ರಾಮಕೃಷ್ಣಪುರದ ಬಸ್ ಸ್ಟ್ಯಾಂಡನ್ನು ನವೀಕರಿಸಿ ಅತ್ಯಂತ ಸುಂದರಗೊಳಿಸಿದ್ದರು. ಪ್ರತಿ ವರ್ಷಕ್ಕೊಂದು ಬಸ್ ಸ್ಟ್ಯಾಂಡನ್ನು ನವೀಕರಿಸುವ ಇವರು ಈ ವರ್ಷದ ಇಯರ್ ಎಂಡ್ ನಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಹೊಲಗೊಡಿಗೆ ಬಸ್ ನಿಲ್ದಾಣವನ್ನು ಸುಂದರವಾಗಿ ನವೀಕರಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು ಮತ್ತು ಕವಿಗಳ ಚಿತ್ರವನ್ನು ಅಂಟಿಸಿರುತ್ತಾರೆ. ಬಸ್ ವೇಳಾಪಟ್ಟಿಯನ್ನು ಕೂಡ ನಮೂದಿಸಿರುತ್ತಾರೆ.ಈ ಕಾರ್ಯದಲ್ಲಿ ಮುಖ್ಯವಾಗಿ ನಂದನ್ ಕೆರೆ ಬೈಲು, ಸತೀಶ್ ಕೋಟೆ ತೋಟ, ಮಂಜುನಾಥ್ ವಾರಳಿ, ಮನೋಹರ್ ಭಂಡಾರಿ ರಾಮಕೃಷ್ಣಪುರ, ರಾಘವೇಂದ್ರ ಭಟ್ ಕೋಟೆ ತೋಟ, ವಿಷ್ಣುಕುಮಾರ್ ಹೊಲಗೊಡಿಗೆ ಯವರು ಸಹಕರಿಸಿದ್ದು ತಮ್ಮೂರಿನ ಬಸ್ ನಿಲ್ದಾಣ ನವೀಕರಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.