ಮೊದಲ ದಿನದ ಅನ್ನದಾಸೋಹದಲ್ಲಿ ಹತ್ತು ಸಾವಿರ ಮಂದಿಗೆ ಊಟ
– ಅಚ್ಚು ಕಟ್ಟಿನ ಆಯೋಜನೆ: ಎಲ್ಲರಿಗೂ ಅನ್ನ ಪ್ರಸಾದ
– ಶಾಸಕ ಆರಗ ಜ್ಞಾನೇಂದ್ರ ಅವರಿಂದ ಅನ್ನದಾಸೋಹಕ್ಕೆ ಚಾಲನೆ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ಧವಾದ ಜಾತ್ರೆ ಎಳ್ಳಮಾವ್ಯಾಸೆ ಜಾತ್ರೆ. ಈ ಜಾತ್ರೆಗೆ ಹಳ್ಳಿಯಿಂದ ಜನ ಬರುತ್ತಾರೆ ಇನ್ನು ಜಾತ್ರೆಯಲ್ಲಿ ಮೊದಲ ದಿನದಂದು 10,000ಕ್ಕೂ ಹೆಚ್ಚು ಜನರಿಗೆ ಅನ್ನದಾಸೋಹ ನೀಡಲಾಯಿತು. ಅಚ್ಚುಕಟ್ಟಿನ ಊಟದ ವ್ಯವಸ್ಥೆ ಹಾಗೂ ಊಟದಲ್ಲಿ ವಿಶೇಷವಾಗಿ ಸಿಹಿ ಕೂಡ ಇದ್ದು. ಪ್ರತಿ ವರ್ಷದಿಂದ ವರ್ಷಕ್ಕೆ ಈ ಜಾತ್ರೆಯ ಮಹತ್ವ ಹೆಚ್ಚಾಗುತ್ತಲೇದೆ. ಇವತ್ತಿನ ಅನ್ನ ದಾಸೋಹದ ಅಡುಗೆಯ ಜವಾಬ್ದಾರಿಯನ್ನು ಜಂಬುವಳ್ಳಿಯ ಸಂದೀಪ ಎಸ್ ಎಸ್ ಕ್ಯಾಟರಿಂಗ್ ಸಂಸ್ಥೆಯವರು ವಹಿಸಿಕೊಂಡಿದ್ದರು. ಮೂರು ದಿನದ ಪಾತ್ರೆ ವ್ಯವಸ್ಥೆಯನ್ನು ಅವರು ಮಾಡಿ ಕೊಟ್ಟಿದ್ದು, ಸುಮಾರು 8-10 ಸಾವಿರದ ಜನಕ್ಕೆ ಊಟವನ್ನು ಮಾಡಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಸೇರಿ ಸಮಿತಿ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಮೇಶ್ವರ ಅನ್ನದಾನ ಸಮಿತಿ ಈ ಅನ್ನ ದಾಸೋಹ ಕೆಲಸ ಮಾಡುತ್ತಿದೆ. ಹೊರೆ ಕಾಣಿಕೆ ಸಂಗ್ರಹಿಸಿ ಭಕ್ತರು, ದಾನಿಗಳಿಂದ ಈ ಕಾರ್ಯಕ್ರಮ ನಡೆಯುತ್ತಿದೆ.
ಜಾತ್ರೆಯ ಎಲ್ಲಾ ವಿಡಿಯೋ ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನೆಲ್ ಅಲ್ಲಿ ವೀಕ್ಷಿಸಿ.