ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೀನ್ ಪರವಾದ ಪ್ಲೆಕ್ಸ್!
– ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್
– ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಜ್ಞಾನೇಂದ್ರ ಪಟ್ಟು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಹಣಗೆರೆಕಟ್ಟೆಯಲ್ಲಿ ಪ್ಯಾಲೇಸ್ಟೀನ್ ಬೆಂಬಲಿಸಿ ಬ್ಯಾನರ್ ಹಾಕಲಾಗಿದ್ದು ಇದೀಗ ಪೊಲೀಸರು ಅಲ್ಲಿ ಭಾರೀ ಬಂದೋಬಸ್ತ್ ಒದಗಿಸಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಸರ್ವಧರ್ಮದ ಕ್ಷೇತ್ರದಲ್ಲಿ ಕೆಲ ಕಿಡಿಗೇಡಿಗಳು ಇಂತಹ ಕೃತ್ಯ ಮಾಡಿದ್ದು ರಾತ್ರಿ ಧ್ವಜ ಹಾರಿಸಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ತೀರ್ಥಹಳ್ಳಿ ತಾಲ್ಲೂಕು ಹಣಗೆರೆಯಲ್ಲಿ ರಾಷ್ಟ್ರ ವಿರೋಧಿ ಪ್ಲೆಕ್ಸ್ ಅಳವಡಿಕೆ ವಿಚಾರದ ಕುರಿತು ಶಾಸಕ ಆರಗ ಜ್ಞಾನೇಂದ್ರ ಶಿವಮೊಗ್ಗ ಎಸ್ಪಿ ಅವರಲ್ಲಿ ತನಿಖೆಗೆ ಒತ್ತಾಯಿಸಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕು, ಹಣಗೆರೆಯಲ್ಲಿ ಎರಡೂ ಧರ್ಮಿಯರ ಪ್ರಾರ್ಥನಾ ಸ್ಥಳವಿದ್ದು, ಮುಜರಾಯಿ ಇಲಾಖೆಯ ಆಡಳಿತದಲ್ಲಿ ನಡೆಯುತ್ತಿರುವ ಈ ಧಾರ್ಮಿಕ ಕೇಂದ್ರಕ್ಕೆ ಪ್ರತಿನಿತ್ಯ ಸಾವಿರಾರು ಜನ ಬಂದು ಹೋಗುತ್ತಿದ್ದಾರೆ. ಬೇರೆ ಬೇರೆ ಧಾರ್ಮಿಕ ಆರಣೆಯ ಜನ ಬಂದು ಹೋಗು ಸ್ಥಳವಾದರೂ ಕೂಡ ಸೌಹಾರ್ದತೆ, ಸಾಮರಸ್ಯಕ್ಕೆ ದಕ್ಕೆಯಾಗದೆ ಕಳೆದ ಹತ್ತಾರು ವರ್ಷಗಳಿಂದ ಧಾರ್ಮಿಕ ಚಟುವಟಿಕೆಗಳು, ಪೂಜಾ ವಿಧಿ ವಿಧಾನಗಳು ನಡೆದುಕೊಂಡು ಬರುತ್ತಿವೆ. ಈದ್ ಮಿಲಾದ್ ಆಚರಣೆಯ ಸಂದರ್ಭದಲಿ ಪ್ಯಾಲೆಸ್ತೀನ್ ಪರವಾಗಿ ಭಾರತ ವಿರೋಧಿ ನೀತಿಯನ್ನು ಪ್ರತಿಪಾದಿಸುವ ಪ್ಲೆಕ್ಸ್ ಅಳವಡಿಕೆಯ ಕಾರ್ಯ ಕಿಡಿಗೇಡಿಗಳಿಂದ ನಡೆದಿದ್ದು, ಇದು ತೀರ್ಥಹಳ್ಳಿಯಂತಹ ಶಾಂತಿ ಸೌಹಾರ್ದತೆಯ ಕ್ಷೇತ್ರದ ಘನತೆಗೆ ದಕ್ಕೆ ತರುವ ವಿಚಾರವಾಗಿದೆ.
ಈಗಾಗಲೇ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ, ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ದೇಶದ ಹಲವು ಉಗ್ರಗಾಮಿ ಚಟುವಟಿಕೆ ನಡೆಸಿದವರ ಮೂಲ ತೀರ್ಥಹಳ್ಳಿಯಾಗಿದೆ ಎನ್ನುವುದು ಲಕ್ಷಾಂತರ ಕ್ಷೇತ್ರವಾಸಿಗಳಿಗೆ ಆತಂಕವನ್ನು ಉಂಟುಮಾಡಿದೆ.
ಈ ಎಲ್ಲಾ ಕಾರಣಗಳಿಂದಾಗಿ ಈ ಕೂಡಲೇ ಹಣಗೆರೆಯ ಪ್ಯಾಲೆಸ್ತೀನ್ ಪರವಾದ ಪ್ಲೆಕ್ಸ್ ಅಳವಡಿಕೆ ಪ್ರಕರಣದ ಹಿಂದಿನ ಶಕ್ತಿಗಳ ಬಗ್ಗೆ ಹಾಗೂ ಅವರ ಸಂಘಟನೆಯ ಮೂಲದ ಬಗ್ಗೆ ಸೂಕ್ತ ತನಿಖೆ ಕೈಗೊಂಡು, ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಿ ಸಾರ್ವಜನಿಕರಲ್ಲಿರುವ ಆತಂಕವನ್ನು ದೂರಪಡಿಸಬೇಕೆಂದು ಕೋರುತ್ತೇನೆ ಎಂದು ಎಸ್ಪಿ ಅವರಿಗೆ ಬರೆದ ಪತ್ರದಲ್ಲಿ ಜ್ಞಾನೇಂದ್ರ ಮನವಿ ಮಾಡಿದ್ದಾರೆ.