ಮಾಳ ಗುರುಕುಲದಲ್ಲಿ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ
ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇದರ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ
ದಿನಾಂಕ 29.12.2024ನೇ ರವಿವಾರದಂದು ಜರುಗಿತು. ಶೈಕ್ಷಣಿಕ ಕ್ಷೇತ್ರದಲ್ಲಿ 2025 ನೇ ಇಸವಿಯಲ್ಲಿ 75 ವಸಂತಗಳನ್ನು ಪೂರೈಸುತ್ತಿರುವ ಗುರುಕುಲ ಶಾಲೆಯ ಅಮೃತ ಮಹೋತ್ಸವವನ್ನು 2025ನೇ ಇಸವಿಯಲ್ಲಿ ಡಿಸೆಂಬರ್ 26 ಮತ್ತು 27ನೇ ದಿನಾಂಕದಂದು ನಡೆಸುವುದೆಂದು ನಿರ್ಧರಿಸಲಾಯಿತು ವಿದೇಶಗಳಲ್ಲಿ ನೆಲೆಸಿರುವ ಶಾಲಾ ಹಳೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಭಾಗವಹಿಸಿದ ಈ ಸಭೆಯಲ್ಲಿ ವಿವಿಧ ಸಮಿತಿಗಳ ರಚನೆ, ಹಳೆ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹ, ಅಮೃತ ಮಹೋತ್ಸವದ ಸ್ಮಾರಕ ಕಟ್ಟಡ ನಿರ್ಮಾಣ, ವರ್ಷಪೂರ್ತಿ ಆಚರಿಸುವ ಕಾರ್ಯಕ್ರಮಗಳ ಬಗ್ಗೆ ರೂಪುರೇಷೆಗಳನ್ನು ಚರ್ಚಿಸಲಾಯಿತು. ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದ ಗೌರವ ಸಲಹೆಗಾರರಾದ ನಾಗಭೂಷಣ ಜೋಶಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು ಸಂಘದ ಅಧ್ಯಕ್ಷ ಗಜಾನನ ಮರಾಠೆ ಕಾರ್ಯದರ್ಶಿ ಗೀತಾ ಸೇರಿಗಾರ್, ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ, ನೆಕ್ಸ್ಟ್ ಜನರೇಷನ್ ಸಂಸ್ಥೆಯ ಅಧ್ಯಕ್ಷ ಗುರುರಾಜ್ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಾಲಾ ಮಕ್ಕಳಿಗೆ ಕಳೆದ ಎರಡು ವರ್ಷಗಳಿಂದ ಉಚಿತವಾಗಿ ವೇದಗಣಿತ ಮತ್ತು ಅಬಾಕಸ್ ತರಗತಿಗಳನ್ನು ನಡೆಸಿಕೊಡುತ್ತಿರುವ ಶ್ರೀ ಗುರುರಾಜ ಹೆಗಡೆ ಮತ್ತು ಶ್ರೀಮತಿ ಲಕ್ಷ್ಮೀ ಗುರುರಾಜ ಹೆಗಡೆ ಇವರನ್ನು ಸಭೆಯಲ್ಲಿ ಗೌರವಿಸಲಾಯಿತು ಅಂತೆಯೇ ಇತ್ತೀಚೆಗೆ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿಜೇತರಾದ ನಮ್ಮ ಶಾಲಾ ಮಕ್ಕಳಾದ ಅಪೇಕ್ಷಾ ಕಾಮತ್ ಸಮೃದ್ಧಿ ಬರ್ವೆ ಮನ್ವಿತ್ ಜೋಶಿ ಇವರನ್ನು ಸಭೆಯಲ್ಲಿ ಪುರಸ್ಕರಿಸಲಾಯಿತು. ಇತ್ತೀಚಿಗೆ ಅನುದಾನ ರಹಿತ ಶಾಲೆಗಳ ಸಂಘದಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗುರುಕುಲ ಶಾಲಾ ಅಧ್ಯಕ್ಷ ಗಜಾನನ ಮರಾಠೆ ದಂಪತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ರಘುಪತಿ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು. ರಾಮ ಸೇರಿಗಾರ್ ವಂದನಾರ್ಪಣೆಗೈದರು. ಸಭೆಯ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಶಾಲೆಯ ಮಹಾ ಪೋಷಕರಾದ ಮರಾಠೆ ಮಿಲ್ಕ್ ಪ್ರಾಡಕ್ಟ್ಸ್ ನ ಮಾಲಕರಾದ ಗೋವಿಂದ ಮರಾಠೆ ಇವರಿಗೆ ಒಂದು ನಿಮಿಷ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.