ತೀರ್ಥಹಳ್ಳಿಯಲ್ಲಿ ರಾಮನ ಪವಾಡ!!
– ರಾಮನ ಪ್ರತಿಸ್ಥಾಪನೆಯಂದೇ ಕೋದಂಡರಾಮನಿಗೆ ಮುಕ್ತಿ!
– ಕಿಮ್ಮನೆ ಸಾರಥ್ಯದಲ್ಲಿ ತೀರ್ಥಹಳ್ಳಿ ರಥಬೀದಿಯ ದೇಗುಲ ಅಭಿವೃದ್ಧಿ
– 2 ದಿನಕ್ಕೆ ನಡೆಯಿತು ದೇಗುಲದ ಸಂಪೂರ್ಣ ಅಭಿವೃದ್ಧಿ
NAMMUR EXPRESS NEWS
ತೀರ್ಥಹಳ್ಳಿ: ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯ ದಿನದಂದೇ ತೀರ್ಥಹಳ್ಳಿಯಲ್ಲಿ ಪವಾಡವೊಂದು ನಡೆದಷ್ಟು ಸಲೀಸಾಗಿ ನೂರಾರು ವರ್ಷ ಇತಿಹಾಸವುಳ್ಳ ದೇವಾಲಯದ ಅಭಿವೃದ್ಧಿ ಕಂಡಿದೆ. ತೀರ್ಥಹಳ್ಳಿಯಲ್ಲಿನ ರಥ ಬೀದಿಯಲ್ಲಿರುವ ಕೋದಂಡರಾಮನ ದೇವಾಲಯದ ಅಭಿವೃದ್ಧಿ ಕಾಣದೆ ಅನಾಥವಾಗಿತ್ತು. ಇದೀಗ ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ ಗೌಡ ಸಾರಥ್ಯದಲ್ಲಿ ನೂರಾರು ಮಂದಿ ಕಾರ್ಯಕರ್ತರ ಶ್ರಮದೊಂದಿಗೆ ದೇಗುಲ ಕೇವಲ ಎರಡು ದಿನದಲ್ಲಿ ಅಭಿವೃದ್ಧಿಗೊಂಡಿದೆ. ಈ ಬೆಳವಣಿಗೆ ರಾಜ್ಯಕ್ಕೆ ಮಾದರಿ ಕೂಡ ಆಗಿದೆ.
ಪುರಾಣ ಪ್ರಸಿದ್ಧ ಕೋದಂಡರಾಮ ದೇವಸ್ಥಾನದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಆರ್ ಎಂ ಮಂಜುನಾಥಗೌಡ ಹಾಗೂ ತೀರ್ಥಹಳ್ಳಿ ತಾಲೂಕು ಹಾಗೂ ಪಟ್ಟಣದ ಕಾಂಗ್ರೆಸ್ ನಾಯಕರು, ಪಟ್ಟಣ ಪಂಚಾಯತ್ ಕಾಂಗ್ರೆಸ್ ಸದಸ್ಯರು, ಹಾಗೂ ಕಾರ್ಯಕರ್ತರಿಂದ ಸ್ವಾಮಿಗೆ ವಿಶೇಷವಾಗಿ ಹೋಮ ಹವನವನ್ನು ನೆರವೇರಿಸಲಾಯಿತು.