ರಾಮೇಶ್ವರ ಜಾತ್ರೆಯ ರಥೋತ್ಸವ ಸಂಭ್ರಮ!
– ರಥೋತ್ಸವಕ್ಕೆ ಸಾವಿರಾರು ಜನ ಭಕ್ತಾದಿಗಳ ಆಗಮನ, ದೇವರ ದರ್ಶನ
– ಎಳ್ಳಮಾವ್ಯಾಸೆ ಜಾತ್ರೆಯ ಎರಡನೇ ದಿನದ ಸಾವಿರಾರು ಜನ: ರಾತ್ರಿ ಅತೀ ಹೆಚ್ಚು ಜನ ಸಾಧ್ಯತೆ
NAMMUR EXPRESS NEWS
ತೀರ್ಥಹಳ್ಳಿ : ರಾಮೇಶ್ವರ ಜಾತ್ರೆಯ 2ನೇ ದಿನದ ಜಾತ್ರೆಯ ರಂಗು ಜೋರಾಗಿದೆ. ಮೊದಲನೇ ದಿನದಂದು ತೀರ್ಥ ಸ್ನಾನ ನಡೆದಿದ್ದು ಸಾವಿರಾರು ಜನರು ಹೊರ ಊರುಗಳಿಂದ ಭಕ್ತರು ತೀರ್ಥ ಸ್ನಾನ ಮಾಡಿದ್ದಾರೆ. ಮೊದಲನೇ ದಿನ 10,000ಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ವಿವಿಧ ಅಂಗಡಿಗಳಲ್ಲಿ ಖರೀದಿ ಮಾಡಿದರು ಜೊತೆಗೆ ಆಟಗಳನ್ನು ಆಡಿ ಸಂತಸ ಪಟ್ಟರು. ಇನ್ನೂ ರಥೋತ್ಸವಕ್ಕೆ ಈಗಾಗಲೇ ಸಾವಿರಾರು ಭಕ್ತರು ಆಗಮಿಸಿ ರಥ ಎಳೆದು ಸಂಭ್ರಮ ಪಟ್ಟರು.
ಸಿಂಗಾರಗೊಂಡ ರಥವನ್ನು ರಾಮೇಶ್ವರ ದೇವಸ್ಥಾನದ ಅವರಣದಿಂದ ರಥವನ್ನು ಗಾಂಧಿ ಚೌಕದವರೆಗೆ ಎಳೆಯಲಾಯಿತು. ರಥೋತ್ಸವದ ವೇಳೆ ಅಡಕೆ ಹೊಸ ಫಸಲನ್ನು ರಥದತ್ತ ಭಕ್ತರು ತೂರಿದರು. ರಥಕ್ಕೆ ತಾಗಿ ಕೆಳಗೆ ಬೀಳುತ್ತಿದ್ದ ಅಡಕೆ ಫಸಲನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿದರು. ರಥೋತ್ಸವಕ್ಕೂ ಮೊದಲು ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಭಾರೀ ಸಂಖ್ಯೆಯ ಭಕ್ತರು ಸೇರಿದ್ದರು. ದೇವರನ್ನ ಹೊತ್ತು ಉತ್ಸವಕ್ಕೆ ಕರೆದೊಯ್ಯುವ ರಥ, ಹೂವು, ಹಣ್ಣು, ಹಾರಗಳಿಂದ, ವಿದ್ಯುತ್ ದೀಪಗಳಿಂದ, ಅಲಂಕಾರಿಕ ವಸ್ತುಗಳಿಂದ ಕಂಗೊಳಿಸುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ನಂತರ ರಥವನ್ನು ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಸುಮಾರು 15 ಸಾವಿರ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎಳ್ಳಮಾವ್ಯಾಸೆ ಜಾತ್ರೆಯ ಎಲ್ಲಾ ವಿಡಿಯೋ ಹಾಗೂ ಸುದ್ದಿಗಳಿಗಾಗಿ ನಮ್ಮೂರ ಎಕ್ಸಪ್ರೆಸ್ ಯೂಟ್ಯೂಬ್ ಚಾನಲ್ ಅನ್ನ ವೀಕ್ಷಿಸಿ subscribe ಮಾಡಿ ಮಲೆನಾಡಿನ ಎಲ್ಲರಿಗೂ ಶೇರ್ ಮಾಡಿ…