ತೀರ್ಥಹಳ್ಳಿಯಲ್ಲಿ ಡಿ.12ಕ್ಕೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸಹ್ಯಾದ್ರಿ ಸಂಭ್ರಮ
– ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್ಇ ಶಾಲಾ ಆವರಣದಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ಸ್ವಾಗತ
– ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಸೊಬಗು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಕಾರ್ಯನಿರ್ವಹಿಸ್ತುತ್ತಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಶಾಲಾ ವಾರ್ಷಿಕೋತ್ಸವ ‘ಸಹ್ಯಾದ್ರಿ ಸಂಭ್ರಮ’ ಡಿಸೆಂಬರ್ 12 ರಂದು ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್ಇ ಶಾಲಾ ಆವರಣದಲ್ಲಿ ಜರುಗಲಿದೆ. ಡಿ.2ರಂದು ನಡೆಯಬೇಕಾಗಿದ್ದ ಕಾರ್ಯಕ್ರಮವು ಮಳೆಯ ಕಾರಣದಿಂದ ಮೂಂದೂಡಲಾಗಿತ್ತು. ಇದೀಗ ಈ ಕಾರ್ಯಕ್ರಮಕ್ಕೆ ಅದ್ದೂರಿ ವೇದಿಕೆ ಸಿದ್ಧವಾಗಿದೆ. ಸಂಸ್ಥೆಯ ವಿದ್ಯಾರ್ಥಿಗಳ ಪೋಷಕ ವೃಂದ ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಕ್ಕಳನ್ನು ಉತ್ತೇಜಿಸಿ ಸಮಾರಂಭವನ್ನು ಚಂದಗಾಣಿಸಿಕೊಡಬೇಕೆಂದು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಾಳೇಹಳ್ಳಿ ಪ್ರಭಾಕರ್ ಹಾಗೂ ನಿರ್ದೇಶಕ ಮಂಡಳಿ, ಸಹ್ಯಾದ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗುರುರಾಜ್ ಹೆಚ್.ಪಿ, ಸಹ್ಯಾದ್ರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಆಗ್ನೆಸ್ ಮೇಂಡೋನ್ನಾ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ್ ಜಿ.ಎನ್. ಹಾಗೂ ಬೋದಕೇತರ ವರ್ಗ ಹಾಗೂ ಸಿಬ್ಬಂದಿವರ್ಗ ವಿನಂತಿಸಿದೆ.
ಡಿ.12ರಂದು ಸಹ್ಯಾದ್ರಿ ಐಸಿಎಸ್ ಇ ಶಾಲೆಯಲ್ಲಿ ನಡೆಯುವ ಸಹ್ಯಾದ್ರಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಪ.ಪಂ.ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪ್ಪ ಎಸ್. ಗುಂಡುವಲ್ಲಿ, ಬಿಇಒ ಗಣೇಶ್ ವೈ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲ್ ಧರ್ಮೇಶ್ ಪಾಲ್ಗೊಳ್ಳುವರು.
ಈಗಾಗಲೇ ಅಭೂತಪೂರ್ವ ಕಾರ್ಯಕ್ರಮದ ಮೂಲಕ ಜನರ ಮನಗೆದ್ದಿರುವ ಸಹ್ಯಾದ್ರಿ ಸಂಭ್ರಮ ಇದೀಗ ಮತ್ತಷ್ಟು ಗಮನ ಸೆಳೆದಿದೆ.