ಮಲ್ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ!
– ದೇವಸ್ಥಾನದಲ್ಲೆಡೆ ವಿಶೇಷ ಪೂಜೆ ಅಲಂಕಾರ!
– ಸಂಕ್ರಾಂತಿ ಪ್ರಯುಕ್ತ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಅದ್ದೂರಿ ರಥೋತ್ಸವ!
– ಶ್ರೀ ಮಾರಿಕಾಂಬಾ ದೇವಸ್ಥಾನ ಮೇಲಿನ ಕುರುವಳ್ಳಿ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮ
– ಶ್ರೀ ಮಾರಿಕಾಂಬಾ ತೀರ್ಥಹಳ್ಳಿ ದೇವಿಗೆ ವಿಶೇಷ ಪೂಜೆ!
NAMMUR EXPRESS NEWS
ತೀರ್ಥಹಳ್ಳಿ: ಮಕರ ಸಂಕ್ರಾಂತಿ ಅಂಗವಾಗಿ ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು. ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ರಥೋತ್ಸವದ ಜೊತೆಗೆ ಬೆಳ್ಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಮಹಾಮಂಗಳಾರತಿ ನೆರವೇರಿದ್ದು, ಮಧ್ಯಾಹ್ನದ ಅಭಿಜಿಹ್ನ ಮೂಹರ್ತದಲ್ಲಿ ರಥೋತ್ಸವ ಸಹಸ್ರಾರು ಭಕ್ತಾಧಿಗಳ ಉಪಸ್ಥಿತಿಯಲ್ಲಿ ಜರುಗಿತು. ಶ್ರೀ ರಾಮಚಂದ್ರಪುರ ಮಠದ ಆವರಣದಲ್ಲಿ ಮಕರ ಸಂಕ್ರಾಂತಿ ಸಮಿತಿಯವರಿಂದ ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಿತು.
* ಶ್ರೀ ಮಾರಿಕಾಂಬಾ ದೇವಸ್ಥಾನ ಮೇಲಿನ ಕುರುವಳ್ಳಿ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮ
ತೀರ್ಥಹಳ್ಳಿ: ತೀರ್ಥಹಳ್ಳಿ, ಮಕರ ಸಂಕ್ರಾಂತಿ ಅಂಗವಾಗಿ ಪಟ್ಟಣದ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ದುರ್ಗಾ ಹೋಮ ಪೂರ್ಣಹುತಿಯ ನಂತರ, ದೇವಿಗೆ ಮಹಾಮಂಗಳಾರತಿ ಜರುಗಿತು. ನಂತರ ಪ್ರಸಾದ ವಿನಿಯೋಗದ ಜೊತೆಗೆ ಪೂಜಾ ಕಾರ್ಯಕ್ರಮಗಳು ನಡೆಯಿತು.ಭಕ್ತಾಧಿಗಳು ವಿಶೇಷ ಸೇವೆಗಳನ್ನು ಸಲ್ಲಿಸುವ ಮೂಲಕ ದೇವರ ಕಾರ್ಯದಲ್ಲಿ ಪಾಲ್ಗೊಂಡರು.
* ಶ್ರೀ ಮಾರಿಗುಡಿ ತೀರ್ಥಹಳ್ಳಿ, ದೇವಿಗೆ ಮಹಾಮಂಗಳಾರತಿ ಸಮರ್ಪಣೆ!
ತೀರ್ಥಹಳ್ಳಿ: ಮೇಲಿನ ಕುರುವಳ್ಳಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರದ ಜೊತೆಗೆ ವಿಶೇಷ ಪೂಜೆ,ಅದ್ದೂರಿಯಾಗಿ ಜರುಗಿತು. ದೇವಿಗೆ ನೈವೇದ್ಯ ನೀಡಿದ ನಂತರ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದವನ್ನು ವಿನಿಯೋಗ ಮಾಡಲಾಯಿತು.ಮಕರ ಸಂಕ್ರಾಂತಿ ದಿನ ಎಲ್ಲಾ ದೇವಾಲಯಗಳಲ್ಲಿ ಪೂಜೆ ಸೇವಾಕಾರ್ಯ ಹಾಗೂ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ವಿಜೃಂಭಣೆಯಿಂದ ನಡೆಯುತ್ತಿದೆ.