ಬೇಗುವಳ್ಳಿ ಸತೀಶ್ ನೇತೃತ್ವದಲ್ಲಿ ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
– ಬೇಗುವಳ್ಳಿ ಸತೀಶ್ ಅವರ ಕುಟುಂಬದಿಂದ ಮಾತಾ-ಪಿತೃರ ಸ್ಮರಣಾರ್ಥ ಮಾದರಿ ಕಾರ್ಯಕ್ರಮ
– ಉಚಿತ ನೇತ್ರ ತಪಾಸಣಾ ಶಿಬಿರ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ಮಾತಾ-ಪಿತೃಗಳ ಸ್ಮರಣಾರ್ಥ ಬಿಜೆಪಿ ನಾಯಕರು, ಈಡಿಗ ಸಮುದಾಯದ ಪ್ರಮುಖರೂ ಆದ ಬೇಗುವಳ್ಳಿ ಸತೀಶ್ ಅವರು ಜ.5 ರಂದು ತೀರ್ಥಹಳ್ಳಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಬೇಗುವಳ್ಳಿ ಸತೀಶ್ ಅವರ ಮಾತಾ ಪಿತೃರಾದ ಶ್ರೀಮತಿ ರುಕ್ಮಿಣಿ ಮತ್ತು ಶ್ರೀ ಹೆಚ್ ಕೆ ರಮಾನಂದ ಅವರ ಸ್ಮರಣಾರ್ಥ ಬೇಗುವಳ್ಳಿ ಸತೀಶ್ ಹಾಗೂ ಕುಟುಂಬದವರು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಈಡಿಗ ಹಾಗೂ ಇತರೆ ಸಮುದಾಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರುಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನವನ್ನು ಏರ್ಪಡಿಸಿದ್ದು, ದಿನಾಂಕ :05- 01-2025ರ ಭಾನುವಾರ, ಬೆಳಗ್ಗೆ 10-00 ಗಂಟೆಗೆ, ಸುವರ್ಣ ಸಹಕಾರ ಭವನ ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮವು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕಿನ, ಸಾಗರದ ಶ್ರೀ ಕಾರ್ತಿಕೇಯ ಕ್ಷೇತ್ರದ, ಶ್ರೀ ಶ್ರೀ ಯೋಗೇಂದ್ರ ಅವಧೂತರ ಹಾಗೂ ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಮಾಜಿ ಲೋಕಸಭಾ ಸದಸ್ಯರಾದ ಶಿವಕುಮಾರ್ ಉದಾಸಿ ಇವರು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೇಗುವಳ್ಳಿ ಸತೀಶ್ ವಹಿಸಲಿದ್ದು, ಪ್ರತಿಭಾ ಪುರಸ್ಕಾರವನ್ನು ಮಾಜಿ ಗೃಹ ಸಚಿವರು,ತೀರ್ಥಹಳ್ಳಿ ಕ್ಷೇತ್ರದ ಹಾಲಿ ವಿಧಾನಸಭಾ ಸದಸ್ಯರೂ ಆದ ಆರಗ ಜ್ಞಾನೇಂದ್ರ ನಡೆಸಿಕೊಡಲಿದ್ದಾರೆ. ವಿಶೇಷ ಕಾರ್ಯಕ್ರಮವಾಗಿ ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಹಾಗೂ ಮಂಡಗದ್ದೆ ರೈತ ಉತ್ಪಾದಕ ಕಂಪನಿ, ಬೆಜ್ಜವಳ್ಳಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನ ಹಮ್ಮಿಕೊಂಡಿದ್ದು ಬೆಳಿಗ್ಗೆ – 9.00 ರಿಂದ ಈ ಶಿಬಿರ ಆರಂಭಗೊಳ್ಳುತ್ತದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಕುಲ, ಒಂದೇ ಮತ, ಒಂದೇ ದೇವರು ಎಂಬ ಸಮಾನತೆಯ ಸಂದೇಶವನ್ನು ಸಾರುತ್ತ, ಬನ್ನಿ ನಿಮ್ಮೂರಿನ ಪ್ರತಿಭಾವಂತ ಮಕ್ಕಳು ಉನ್ನತ ಮಟ್ಟಕ್ಕೇರಲು ಹಾಗೂ ಉತ್ತಮ ನಾಗರೀಕರಾಗಲು ಸಹಕರಿಸೋಣ ಎಂದು ತೀರ್ಥಹಳ್ಳಿ ತಾಲೂಕಿನ ಸಹೃದಯ ನಾಗರೀಕರು, ಬಂದು ಮಿತ್ರರಿಗೆ ತುಂಬು ಹೃದಯದಿಂದ ಬೇಗುವಳ್ಳಿ ಸತೀಶ್, ಹೆಚ್. ಆರ್. ವೆಂಕಟೇಶ್, ಹೆಚ್. ಆರ್. ದಿನೇಶ್, ಮತ್ತು ಕುಟುಂಬ ವರ್ಗದವರು ಸ್ವಾಗತಿಸಿದ್ದಾರೆ ಹಾಗೂ ವಿವಿಧ ಕಾರ್ಯಕ್ರಮಗಳು ಕೂಡ ನೆರವೇರಲಿದೆ.